ದರ್ಶನ್ ಫ್ಯಾನ್ಸ್ Vs ರಮ್ಯಾ ಸಮರ – ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಮೋಹಕತಾರೆ

ನಟಿ ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇದೀಗ ಮೋಹಕತಾರೆ ದರ್ಶನ್ ಫ್ಯಾನ್ಸ್ ವಿರುದ್ಧ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ. ಬರೋಬ್ಬರಿ 48 ಸೋಷಿಯಲ್ ಮೀಡಿಯಾ ಅಕೌಂಟ್‌ನಿಂದ ತಮಗೆ ಅಶ್ಲೀಲ ಮೆಸೇಜ್ ಬಂದಿರುವುದಾಗಿ ರಮ್ಯಾ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಕಿರಿಕಿರಿ – ಬೆಂಗಳೂರಿನಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್!
ನಟ ದರ್ಶನ್‌ಗೆ ಸಿಕ್ಕಿರೋ ಜಾಮೀನು ಕುರಿತಂತೆ ಸುಪ್ರೀಂ ಕೋರ್ಟ್ ನೀಡಿದ್ದ ಅಭಿಪ್ರಾಯವನ್ನು ನಟಿ ರಮ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಿಂದ ಸಾಮಾನ್ಯರಿಗೆ ನ್ಯಾಯ ಸಿಗುತ್ತೆ ಅಂತ ನಂಬಿದ್ದು ನಿಜವಾಗಿದೆ ಅಂತ ಅವರು ಬರೆದುಕೊಂಡಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಅಂತಾನೂ ಪೋಸ್ಟ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ರಮ್ಯಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರು. ಆ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಮತ್ತೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದರು ರಮ್ಯಾ. ಬರೋಬ್ಬರಿ 48 ಅಕೌಂಟ್‌ನಿಂದ ಬಂದಿದ್ದ ಅಶ್ಲೀಲ ಮೆಸೇಜ್ ಕುರಿತಂತೆ ಮತ್ತೆ ಕಿಡಿಕಾರಿದ್ದರು. ಇವರಿಗೆ ಕಾನೂನು ಮೂಲಕವೇ ಪಾಠ ಮಾಡಬೇಕು ಅಂತ ನಿರ್ಧಾರಕ್ಕೂ ಬಂದಿದ್ದಾರೆ. ಇದೀಗ ಬೆಂಗಳೂರಿನ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ರಮ್ಯಾ ಅಶ್ಲೀಲ ಮೆಸೇಜ್ ಕಳುಹಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಅಶ್ಲೀಲ ಮೆಸೆಜ್ ಕಳುಹಿಸುವವರಿಗೆ ಶಿಕ್ಷೆ ಆಗುವ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೋಗಬೇಕು. ಅಶ್ಲೀಲ ಮೆಸೇಜ್ ಕಳುಹಿಸಿದವರಿಗೆ ಶಿಕ್ಷೆ ಆಗಲಿದೆ ಎನ್ನುವ ವಿಶ್ವಾಸವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಜೊತೆಗೆ ನಟ ದರ್ಶನ್ ಮೇಲೆಯೂ ಕಿಡಿಕಾರಿರುವ ರಮ್ಯಾ, ಚಿತ್ರೋದ್ಯಮದಲ್ಲಿ ತಮಗೆ ಯಾರ ಬೆಂಬಲ ಸಿಗದಿದ್ದರೂ ಒಂಟಿ ಹೋರಾಟ ಇದ್ದೇ ಇರುತ್ತದೆ ಅನ್ನುವ ಮಾತುಗಳನ್ನೂ ಆಡಿದ್ದಾರೆ.

ನೋಡಿರಿ

