ಎಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ – ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ಎಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ – ದೇವಸ್ಥಾನಗಳಲ್ಲಿ ವಿಶೇಷ ಪೂಜೆ

ನಾಡಿನೆಲ್ಲಡೆ ಇಂದು ನಾಗರ ಪಂಚಮಿಯು ಸಂಭ್ರಮ ಸಡಗರ ಮನೆ ಮಾಡಿದೆ. ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬವಾಗಿದ್ದು, ಎಲ್ಲೆಡೆ ಮೊದಲ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ.  ದೇವಸ್ಥಾನಗಳಲ್ಲಿ ಪೂಜೆಗಳು ನಡೆಯುತ್ತಿದ್ದು, ನಾಗರ ಕಲ್ಲುಗಳಿಗೆ ಹಾಲು ಎರೆದು ಪೂಜೆ ಸಲ್ಲಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ನಾಗರ ಪಂಚಮಿ ಹಬ್ಬದ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಸರ್ಪಗಳ ಮತ್ತು ಶಿವನ ಆಶೀರ್ವಾದ ದೊರೆಯುತ್ತೆ ಅನ್ನೋ ನಂಬಿಕೆಯಿದೆ. ನಾಗ ದೇವರನ್ನ ಆರಾಧನೆ ಮಾಡಿದ್ರೆ  ಸಂತಾನ, ಶಾಂತಿ ಮತ್ತು ಸಮೃದ್ಧಿ ಸಿಗುತ್ತೆ ಎಂಬ ನಂಬಿಕೆಯಿದೆ.

ನಾಗರ ಪಂಚಮಿ ವಿಶೇಷವಾಗಿ ಹೆಣ್ಣು ಮಕ್ಕಳು ಅತೀ ಸಡಗರ, ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.  ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿಯೊಂದು ಊರಿನ ಆಚರಣೆ, ಸಂಪ್ರದಾಯ ಭಿನ್ನವಾಗಿರುತ್ತದೆ. ಆಯಾ ಸಂಪ್ರದಾಯಕ್ಕೆ ತಕ್ಕಂತೆ ಅಲ್ಲಿನ ಜನ ಹಬ್ಬವನ್ನು ಆಚರಿಸುತ್ತಾರೆ. ಉತ್ತರ ಕರ್ನಾಟಕದ  ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗತ್ತೆ.

ನಾಗರಪಂಚಮಿ ಹಬ್ಬದಂದು ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆಸಿ  ಉಡುಗೊರೆ ನೀಡಿ ಗೌರವಿಸುವ ಸಂಪ್ರದಾಯವೂ ಇದೆ. ಅಲ್ಲದೆ ಈ ಹಬ್ಬದಂದು ಈ ಭಾಗದ ಕಡೆ ಸಹೋದರಿಯರು ಪ್ರೀತಿ, ವಾತ್ಸಲ್ಯಭಾವದಿಂದ ಸಹೋದರರನ್ನು ಹಾರೈಸುವುದು, ಅವರ ಆಶಿರ್ವಾದವನ್ನು ಪಡೆಯುವ ಪದ್ಧತಿಯು ನಡೆಯುತ್ತದೆ. ಜೊತೆಗೆ ಹೊಸ ಉಡುಗೆಯನ್ನುಟ್ಟು ಸಂಭ್ರಮದಿಂದ ಹೆಣ್ಮಕ್ಕಳು  ಜೋಕಾಲಿ ಆಡುವ, ತವರಿಗೆ ಬಂದ ಹೆಣ್ಣುಮಕ್ಕಳಿಗೆ ಚಕ್ಕುಲಿ, ಚೂಡ, ಅರಳು, ಉಂಡೆ ಇವೆಲ್ಲವನೀ ಕೊಬ್ಬರಿಯೊಟ್ಟಿಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗಿನ ನೀಡುವ ಸಂಪ್ರದಾಯವೂ ಇದೆ.

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ನಾಗರಪಂಚಮಿಯಂದು ತಮ್ಮ ತಮ್ಮ ಊರಿನಲ್ಲಿರೋ ನಾಗರ ಕಲ್ಲುಗಳಿಗೆ ವಿಶೇಷ ಪೂಜೆಯನ್ನ ಸಲ್ಲಿಸುತ್ತಾರೆ. ನಾಗರ ಕಲ್ಲುಗಳನ್ನ ತೊಳೆದು ಅದ್ದಕ್ಕೆ ಹೂವುಗಳಿಂದ ಸಿಂಗಾರ ಮಾಡಿ.. ಅರಿಶಿಣ ಹಚ್ಚಿ ಪೂಜಿ ಸಲ್ಲಿಸಲಾಗುತ್ತೆ..  ಹಾಗೆ ಬಾಳೆ ಹಣ್ಣಿನ ತನು ಹಾಕಲಾಗುತ್ತೆ.. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ರೀತಿಯಲ್ಲಿ ಪೂಜೆ ಸಲ್ಲಿಸಲಾಗುತ್ತೆ..

Kishor KV