ಬಾಲ್ ಜೊತೆ ಇಂಗ್ಲೆಂಡ್ ಕಳ್ಳಾಟ – 2 ವರ್ಷದ ನಂತ್ರ ಆಂಗ್ಲರಿಗೆ ಡ್ರಾ ರುಚಿ
ಉರಿಗೆ ಜಡ್ಡುಗೆ ಕೈ ಕೊಟ್ಟಿಲ್ವಾ ಸ್ಟೋಕ್ಸ್?

ಗೆದ್ದೆ ಬಿಟ್ವೇ ಅನ್ನೋ ಜೋಶ್ನಲ್ಲಿದ್ದ ಇಂಗ್ಲೆಂಡ್ಗೆ ಮುಟ್ಟಿ ನೋಡಿಕೊಳ್ಳುವ ತರ ಟೀಂ ಇಂಡಿಯಾ ಚಮಕ್ ಕೊಟ್ಟಿದೆ. 4 ದಿನ ಕೂಡ ತನ್ನ ಕಡೆ ಇದ್ದ ಪಂದ್ಯವನ್ನ ಇಂಗ್ಲೆಂಡ್ 5ನೇ ದಿನದಲ್ಲಿ ಗೆದ್ದೆ ಗೆಲ್ಲುತ್ತೆ ಅಂತ ಕ್ರಿಕೆಟ್ ಅಭಿಮಾನಿಗಳು ಅಂದ್ಕೊಂಡಿದ್ರು. ಆದ್ರೆ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಇಡೀ ಮ್ಯಾಚ್ನ ಉಲ್ಟಾಪಲ್ಟಾ ಮಾಡಿದ್ರು. ಸೋಲೋ ಮಾತೇ ಇಲ್ಲ ಅಂತ ರೋಚಕವಾಗಿ ಕಾದಾಡಿ ಪಂದ್ಯವನ್ನ ಡ್ರಾ ಮಾಡಿದ್ರು. ಯಾವಾಗ ಪಂದ್ಯ ಡ್ರಾ ಆಗುತ್ತೆ ಅಂತ ಗೊತ್ತಾಯ್ತೋ ಇಂಗ್ಲೆಂಡ್ ಕ್ರಿಕೆಟ್ ಆಟ ಬಿಟ್ಟು ಕಳ್ಳಾಟ ಆಡೋಕೆ ಶುರು ಮಾಡ್ತು
ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಮೋಸದಾಟ ಆಡುತ್ತೆ ಅನ್ನೋದು ಸಾಕಷ್ಟು ಸಲ ಚರ್ಚೆಗೆ ಬಂದಿರೋ ವಿಷ್ಯ.. ಆದ್ರೆ ಅದು 4ನೇ ಟೆಸ್ಟ್ನಲ್ಲಿ ನಿಜವಾಗಿದೆ..ಈಗಾಗಲೇ 2 ಪಂದ್ಯ ಗೆದ್ದಿದ್ದ ಆಂಗ್ಲ ಪಡೆ 4ನೇ ಟೆಸ್ಟ್ ಗೆದ್ದು ಸರಣಿಯನ್ನ ತನ್ನ ಕೈ ವಶ ಮಾಡಿಕೊಳ್ಳೋಕೆ ಮುಂದಾಗಿತ್ತು.. ಗಿಲ್ ಪಡೆ 4ನೇ ಟೆಸ್ಟ್ ಬಿಟ್ಟು ಕೊಡುವ ಎಲ್ಲಾ ಲಕ್ಷಣ ಕೂಡ ಎದ್ದು ಕಾಣ್ತಿತ್ತು.. ಅದ್ರಲ್ಲೂ 5 ನೇ ದಿನ ರಾಹುಲ್ ವಿಕೆಟ್ ಬೀಳುತ್ತಿದ್ದಂತೆ ಮ್ಯಾಚ್ ಕತೆ ಗೋವಿಂದ ಅಂದ್ಕೊಂಡಿದ್ರು. ಆದ್ರೆ ಜಡೇಜಾ ಮತ್ತು ಸುಂದರ್ ಎಲ್ಲಾ ಉಲ್ಟಾ ಮಾಡಿ, ಆಂಗ್ಲ ಬೌಲರ್ಗಳಿಗೆ ಬೆಂಡೆತ್ತಿ ಬ್ರೇಕ್ ಹಾಕಿ ಮ್ಯಾಚ್ನ ಡ್ರಾ ಮಾಡಿಕೊಂಡಿದ್ದಾರೆ. ಈ ನಡುವೆ 4ನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ ಮೋಸದಾಟ ಮಾಡಿರೋದು ಬಯಲಾಗಿದೆ.
ಬಾಲ್ ಮೇಲೆ ಹತ್ತಿ ನಿಂತ ಬ್ರೈಡನ್ ಕಾರ್ಲ್
ಹೌದು.. ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದ ಇಂಗ್ಲೆಂಡ್ ಮೋಸದಾಟದ ಮೂಲಕ ಪಂದ್ಯ ಗೆಲ್ಲೋಕೆ ಮುಂದಾಗಿರೋದು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರ್ಸ್ ತನ್ನ ಸ್ಪೈಕ್ ಶೂ ನಿಂದ ಚೆಂಡಿನ ಮೇಲೆ ಗ್ರಿಪ್ ಮೂಡಿಸಲು ಯತ್ನಿಸಿರುವುದು ಕಂಡು ಬಂದಿದೆ. ಈ ಮೂಲಕ ಚೆಂಡನ್ನು ವಿರೂಪಗೊಳಿಸಿ ಪಂದ್ಯ ಗೆಲ್ಲಲು ಇಂಗ್ಲೆಂಡ್ ಪ್ರಯತ್ನಿಸಿತ್ತು. ಇದೆಲ್ಲಾವನ್ನೂ ಮೆಟ್ಟಿನಿಂತ ನಮ್ಮ ಹೀರೋಗಳಾದ ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್ ಸುಂದರ್ ಕ್ರೀಸ್ ಕಚ್ಚಿ ನಿಲ್ಲುವ ಮೂಲಕ ಮ್ಯಾಚ್ ಡ್ರಾ ಮಾಡಿದ್ರು..
2 ವರ್ಷದ ನಂತ್ರ ಇಂಗ್ಲೆಂಡ್ಗೆ ಡ್ರಾ ರುಚಿ ತೋರಿಸಿದ ಇಂಡಿಯಾ
ಇನ್ನೂ ಬಾಝ್ ಬಾಝ್ ಬಾಲ್ ಎನ್ನುತ್ತಾ ಗೆಲುವನ್ನ ಮಾತ್ರ ನೋಡುತ್ತ ಡ್ರಾ ಬಗ್ಗೆ ತಲೆಕೆಡಿಸಿಕೊಳ್ಳದ ಇಂಗ್ಲೆಂಡ್ಗೆ ಭಾರತ ಪಾಠ ಕಲಿಸಿದೆ. ಕಳೆದ 3 ವರ್ಷಗಳಿಂದ ಅಂದ್ರೆ, 2022 ರಿಂದ ಈವರೆಗೆ 36 ಟೆಸ್ಟ್ ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ತಂಡವು ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದ್ದು ಕೇವಲ 2 ಬಾರಿ ಮಾತ್ರ. 2023 ರಲ್ಲಿ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ 4ನೇ ಟೆಸ್ಟ್ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸುವಲ್ಲಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿತ್ತು. ಇದು ಬಾಝ್ಬಾಲ್ ಯುಗದ ಇಂಗ್ಲೆಂಡ್ ತಂಡದ ಮೊದಲ ಡ್ರಾ ಪಂದ್ಯವಾಗಿತ್ತು. ಆಮೇಲೆ ಯಾವುದೇ ಡ್ರಾ ಪಂದ್ಯ ಆಗಿರಲ್ಲಿ. ಆದ್ರೆ 2 ವರ್ಷಗಳ ಬಳಿಕ ಅದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಡ್ರಾ ಸಾಧಿಸುವಲ್ಲಿ ಟೀಮ್ ಇಂಡಿಯಾ ಈಗ ಯಶಸ್ವಿಯಾಗಿದೆ. ಈ ಮೂಲಕ ಆಂಗ್ಲರ ಪಡೆಗೆ ಟೀಂ ಇಂಡಿಯಾ ಸರಿಯಾಗೇ ಟಕ್ಕರ್ ಕೊಟ್ಟಿದೆ..
ಇದೆಲ್ಲಾದರ ನಡುವೆ ಪಂದ್ಯ ಮುಗಿದ ಮೇಲೆ ಬೆನ್ಸ್ಟೋಕ್ಸ್ ಜಡೇಜಾಗೆ ಹ್ಯಾಂಡ್ ಶೇಕ್ ಕೊಟ್ಟಿಲ್ಲ ಅನ್ನೋ ಅನ್ನೋ ಮಾತು ಕೇಳಿ ಬರ್ತಿದೆ.. ಅಂದಹಾಗೇ ಮ್ಯಾಚ್ ಆದ ಮೇಲೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಎಲ್ಲರಿಗೂ ಶೇಕ್ ಹ್ಯಾಂಡ್ ನೀಡಿದ್ದರು. ಆದರೆ ರವೀಂದ್ರ ಜಡೇಜಾಗೆ ಶೇಕ್ ಹ್ಯಾಂಡ್ ನೀಡಿಲ್ಲ ಅಂತ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಂದಹಾಗೇ ಡ್ರಾ ಆಗುತ್ತೆ ನಾವ್ ಗೆಲ್ಲೋಲ್ಲ ಅಂತ ಗೊತ್ತಾಗುತ್ತಿದ್ದಂತೆ ಜಡೇಜಾ ಮತ್ತು ಸುಂದರ್ಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಶೇಕ್ ಹ್ಯಾಂಡ್ ನೀಡಿ ಪಂದ್ಯ ನಿಲ್ಲಿಸಲು ಮುಂದಾಗಿದ್ದರು. ಆದ್ರೆ ಇವರಿಬ್ಬರು ಶತಕದ ಸನಿಹದಲ್ಲಿ ಇದಿದ್ರಿಂದ ಶೇಕ್ ಹ್ಯಾಂಡ್ ನೀಡಿರಲಿಲ್ಲ. ಇದಾದ ಬಳಿಕ ಜಡೇಜಾ ಶತಕ ಪೂರೈಸಿದ ಬಳಿಕ ಹ್ಯಾರಿ ಬ್ರೂಕ್ ಶೇಕ್ ಕೊಡಲು ಆಗಮಿಸಿದ್ದರು. ಈ ವೇಳೆಯೂ ಟೀಮ್ ಇಂಡಿಯಾ ಆಟಗಾರರು ಪಂದ್ಯ ನಿಲ್ಲಿಸುವ ಕೋರಿಕೆಯನ್ನು ತಿರಸ್ಕರಿಸಿದ್ದರು. ಸುಂದರ್ ಶತಕ ಸಿಡಿಸಿದ ನಂತ್ರ ಮ್ಯಾಚ್ ಡ್ರಾ ಮಾಡಿಕೊಳ್ಳಲಾಯ್ತು. ನಂತ್ರ ವಾಷಿಂಗ್ಟನ್ ಸುಂದರ್ ಜೊತೆ ಕೈಕುಲುಕಿದ ಬಳಿಕ ಸ್ಟೋಕ್ಸ್ ತನ್ನ ಸಹ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಿದ್ದರು. ಈ ವೇಳೆ ಜಡೇಜಾ ಮುಂದೆ ಬಂದ್ರೂ ಅವರಿದೆ ಹ್ಯಾಂಡ್ ಶೇಕ್ ನೀಡಿಲ್ಲ. ಇದು ಯಾಕೆ ಅನ್ನೋ ಪ್ರಶ್ನೆ ಹುಟ್ಟುಕೊಂಡಿತ್ತು.. ಪಂದ್ಯ ಡ್ರಾ ಆಗಿ ನಿಲ್ಲುತ್ತಿದ್ದಂತೆ ಹ್ಯಾಂಡ್ ಸುಂದರ್ ಮತ್ತು ಜಡೇಜಾಗೆ ಹ್ಯಾಂಡ್ ಶೇಕ್ ಮಾಡಿದ್ರು.. ಎರಡನೇ ಸಲ ಸುಂದರ್ಗೆ ಹ್ಯಾಂಡ್ ಶೇಕ್ ಮಾಡಿದ ಸ್ಟೋಕ್ಸ್ ಜಡೇಜಾಗೆ ಹ್ಯಾಂಡ್ ಶೇಕ್ ಮಾಡಿಲ್ಲ.. ಜಡೇಜಾ ಕೈ ಕೊಡೋಕೆ ಹೋದ್ರೂ ಸ್ಟೋಕ್ಸ್ ಏನೋ ಹೇಳುತ್ತಾ ಹೋಗ್ತಾರೆ.. ಸ್ಟೋಕ್ಸ್ ಯಾಕೆ ಹೀಗ್ ಮಾಡಿದ್ರು? ಸೆಂಚುರಿ ಹೋಡೆಯೋ ಮುಂಚೆ ಪಂದ್ಯ ನಿಲ್ಲಿಸಿಲ್ಲಾ ಅಂತಾ ಸ್ಟೋಕ್ಸ್ ಉರ್ಕೋಂಡ್ ಹ್ಯಾಂಡ್ ಶೇಕ್ ಮಾಡಿಲ್ವಾ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಟ್ರೋಲ್ ಕೂಡ ಆಗುತ್ತಿದೆ.

ನೋಡಿರಿ

