ಡ್ರೋನ್‌, ಗಗನಾ ವಿನ್ನರ್‌ ಆಗ್ಬೇಕಿತ್ತಾ? – ಸುನೀಲ್ ಗೆ ಫಸ್ಟ್‌ ಪ್ಲೇಸ್‌ ಯಾಕೆ?
ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಮೋಸ?

ಡ್ರೋನ್‌, ಗಗನಾ ವಿನ್ನರ್‌ ಆಗ್ಬೇಕಿತ್ತಾ? – ಸುನೀಲ್ ಗೆ ಫಸ್ಟ್‌ ಪ್ಲೇಸ್‌ ಯಾಕೆ?ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಮೋಸ?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ಗೆ ಅದ್ದೂರಿ ತೆರೆಬಿದ್ದಿದೆ. ಬ್ಯಾಚುಲರ್ಸ್‌ಗಳ ಪರೀಕ್ಷೆಯಲ್ಲಿ ಗೆದ್ದಿದ್ಯಾರು ಅನ್ನೋ ಕುತೂಹಲಕ್ಕೆ ಕಡೆಗೂ ಬ್ರೇಕ್‌ ಬಿದ್ದದೆ. ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ನಲ್ಲಿ ಸುನೀಲ್‌ ಹಾಗೂ ಅಮ್ರಿಟಾ ಜೋಡಿ ಟ್ರೋಫಿಯನ್ನ ತಮ್ಮದಾಗಿಸಿಕೊಂಡಿದ್ದಾರೆ. ಆದ್ರೀಗ ಗ್ರ್ಯಾಂಡ್‌ ಫಿನಾಲೆ ಮುಗಿಯುತ್ತಿದ್ದಂತೆ ಕೆಲ ವೀಕ್ಷಕರು ಮಾತ್ರ ಅಸಮಧಾನ ಹೊರ ಹಾಕಿದ್ದಾರೆ. ಈ ಶೋನಲ್ಲಿ ಮೋಸ ಆಗಿದೆ.. ಚೆನ್ನಾಗಿ ಪರ್ಫಾಮೆನ್ಸ್‌ ಕೊಟ್ಟವರಿಗೇ ಮೊದಲ ಸ್ಥಾನ ಕೊಡ್ಬೇಕಿತ್ತು ಅಂತಾ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡ್ತಿದ್ದಾರೆ.

ಇದನ್ನೂ ಓದಿ:  KSRTC ಬಸ್​​ನಲ್ಲಿ ಹೊಸ ರೂಲ್ಸ್​! – ಇನ್ಮುಂದೆ ಲಗೇಜ್‌ಗೂ ದುಡ್ಡು ಕಟ್ಟಬೇಕಾ?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಭರ್ಜರಿಯಾಗೇ ಯಶಸ್ಸು ಕಂಡಿದೆ.  ಸೀಸನ್‌2 ನಲ್ಲಿ 10 ಬ್ಯಾಚುಲರ್‌ಗಳಿಗೆ 10 ಮೆಂಟರ್ಸ್‌ನ ಪರಿಚಯಿಸಲಾಗಿತ್ತು. ಬ್ಯಾಚುಲರ್ಸ್‌ಗೆ  ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಸಾಕಷ್ಟು ರೌಂಡ್‌ಗಳನ್ನ ನೀಡಲಾಗಿತ್ತು. ನಟಿಯರು ಮೆಂಟರ್‌ ಆಗಿ ಬ್ಯಾಚುಲರ್ಸ್‌ನ ತಿದ್ದುವ ಕೆಲಸ ಮಾಡಿದ್ರು. ಜೀವನದ ಪಾಠದ ಜೊತೆಗೆ ಭರ್ಜರಿ ಮನರಂಜನೆ ಕೂಡ ಇಲ್ಲಿತ್ತು. ಫಿನಾಲೆಗೂ ಮುನ್ನ ಮೂರು ಹೆಸರು ಕೇಳಿ ಬರ್ತಾ ಇತ್ತು. ಗಾಯಕ ಸುನಿಲ್, ಅಮ್ರಿಟಾ ಜೋಡಿ, ರಕ್ಷಕ್ ಬುಲೆಟ್ ರಮೋಲಾ ಜೋಡಿ ಹಾಗೂ ಡ್ರೋನ್ ಪ್ರತಾಪ್ ಗಗನಾ ಜೋಡಿ ಹೆಚ್ಚು ಹೈಲೈಟ್ ಆಗಿತ್ತು. ಈ ಮೂರು ಜೊಡಿಗಳ ಪೈಕಿ ಯಾರಾದ್ರೂ ಒಬ್ರು ಗೆಲ್ತಾರೆ ಅಂತಾ ಹೇಳಲಾಗ್ತಿತ್ತು. ಇದೀಗ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಗ್ರ್ಯಾಂಡ್‌ ಫಿನಾಲೆ ಕೂಡ ಮುಗಿದಿದ್ದು, ಎಲ್ಲಾ ಕುತೂಹಲಕ್ಕೆ ತೆರೆಬಿದ್ದಿದೆ. ಸೀಸನ್‌ 2ನ ಕಿರೀಟ ಯಾರ ಮುಡಿಗೆ ಏರಿದೆ ಅನ್ನೋದು ರಿವೀಲ್ ಆಗಿದೆ.  ಈ ಸೀಸನ್‌ನಲ್ಲಿ ವಿನ್ನರ್‌ ಆಗಿ ಸುನೀಲ್‌ ಹಾಗೂ ಅಮ್ರಿಟಾ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ. ಸುನೀಲ್‌ಗೆ ವಿನ್ನರ್ ಕಪ್‌ ಜೊತೆಗೆ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್‌ ಸಿಕ್ಕಿದೆ. ರಮೋಲಾ ರಕ್ಷಕ್‌ ಬುಲೆಟ್‌ ರನ್ನರ್‌ ಆಗಿದ್ದು, ರಕ್ಷಕ್‌ ಬುಲೆಟ್‌ಗೆ 10 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಇನ್ನು  ಗಗನಾ ಹಾಗೂ ಡ್ರೋನ್‌ ಪ್ರತಾಪ್‌ ಸೆಕೆಂಡ್‌ ರನ್ನರಪ್‌ ಆಗಿದ್ದು,ಡ್ರೋನ್ ಪ್ರತಾಪ್ ಗೆ 3 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಇದರಲ್ಲಿ ಅರ್ಧದಷ್ಟು ಹಣವನ್ನ ಗಗನಾಗೆ ನೀಡುವುದಾಗಿ ಡ್ರೋನ್ ಪ್ರತಾಪ್ ವೇದಿಕೆಯಲ್ಲೇ ಹೇಳಿದ್ದಾರೆ. ಇನ್ನೂ ಸ್ಪೆಷಲ್ ಬ್ಯಾಚುಲರ್ ಪಟ್ಟ ಸೂರ್ಯ ಪಾಲಾಗಿದೆ. ಸೂರ್ಯ – ಅಭಿ‍ಜ್ಞಾ ಭಟ್ ಜೋಡಿಗೆ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ಸಿಕ್ಕಿದೆ. ಇದೀಗ ಗೆದ್ದವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಆದ್ರೆ ಕೆಲವರು ಮಾತ್ರ ಈ ತೀರ್ಪಿನ ಬಗ್ಗೆ ಅಸಮಧಾನ ಹೊರ ಹಾಕ್ತಿದ್ದಾರೆ.

ಹೌದು,  ಭರ್ಜರಿ ಬ್ಯಾಚುಲರ್ಸ್‌ನಲ್ಲಿ 3 ಜೋಡಿಗಳ ಮಧ್ಯೆ ಟಫ್‌ ಫೈಟ್‌ ಇತ್ತು.. ಕಡೆಗೂ ಸುನೀಲ್‌ ಹಾಗೂ ಅಮ್ರಿಟಾ ಜೊಡಿ ಗೆದ್ದಿದ್ದಾರೆ. ಆದ್ರೀಗ ಕೆಲವರು ಟ್ರೋನ್‌ ಪ್ರತಾಪ್‌ ಗೆ ಮೊದಲ ಸ್ಥಾನ ಸಿಗ್ಬೇಕಿತ್ತು ಅಂತ ಹೇಳ್ತಿದ್ರೆ, ಇನ್ನೂ ಕೆಲವರು ಡ್ರೋನ್‌ ಪ್ರತಾಪ್‌ನ ರನ್ನರಪ್‌ ಮಾಡಿ, ರಕ್ಷಕ್‌ಗೆ ಸೆಕೆಂಡ್‌ ರನ್ನರಪ್‌ ಸ್ಥಾನ ಕೊಡ್ಬೇಕಿತ್ತು ಅಂತ ಸೋಶಿಯಲ್‌ ಮೀಡಿಯಾದಲ್ಲಿ ಕಮೆಂಟ್‌ ಹಾಕ್ತಿದ್ದಾರೆ.  ಡ್ರೋನ್‌ ಪ್ರತಾಪ್‌ ಆರಂಭದಿಂದಲೂ ಎಲ್ಲಾ ಟಾಸ್ಕ್‌ಗಳನ್ನ ಚೆನ್ನಾಗೇ ಮಾಡ್ತಿದ್ರು.. ಡಿಫ್ರೆಂಟ್‌ ಡಿಫ್ರೆಂಟ್‌ ಕಾನ್ಪೆಪ್ಟ್‌ ಮೂಲಕ ಗಗನಾಳನ್ನ ಮಾತ್ರವಲ್ಲದೇ ಜಡ್ಜಸ್‌ನ ಕೂಡ ಇಂಪ್ರೆಸ್‌ ಮಾಡ್ತಾ ಬಂದಿದ್ರು.. ಆದ್ರೆ ಸುನೀಲ್‌ ಅಮ್ರಿಟಾಗಿ ಹೀಗೆ ಸರ್‌ಪ್ರೈಸ್‌ ಕೊಟ್ಟೇ ಇಲ್ಲ.. ಆಗಾಗ ಹಾಡು ಹೇಳಿ ಸರ್‌ಪ್ರೈಸ್‌ ಕೊಡ್ತಿದ್ರು.. ವಾವ್ಹ್‌ ಅನ್ನಿಸೋ ಸರ್‌ಪ್ರೈಸ್‌ ಕೊಟ್ಟಿಲ್ಲ..  ಹೀಗಾಗಿ ಡ್ರೋನ್ ಪ್ರತಾಪ್‌ ನ ವಿನ್ನರ್‌ ಮಾಡ್ಬೇಕಿತ್ತು.. ಡ್ರೋನ್‌ ಪ್ರತಾಪ್‌ಗೆ ಶೋನಲ್ಲಿ ಮೋಸ ಆಗಿದೆ ಅನ್ನೋದು ಡ್ರೋನ್‌ ಪ್ರತಾಪ್‌ ಫ್ಯಾನ್ಸ್‌ ವಾದ.. ಇನ್ನೂ ಕೆಲವರು Atleast ಡ್ರೋನ್‌ ಪ್ರತಾಪ್‌ನ ರನ್‌ರಪ್‌ ಆದ್ರೂ ಮಾಡ್ಬೋದಿತ್ತು.. ಎಲ್ಲವೂ ಮೊದಲೇ ಫಿಕ್ಸ್‌ ಆಗಿತ್ತಾ?.. ಗ್ರ್ಯಾಂಡ್‌ ಫಿನಾಲೆಗೂ ವಿನ್ನರ್‌ ಯಾರು ಅನ್ನೋದು ವೈರಲ್‌ ಆಗಿದ್ದು ಹೇಗೆ ಅಂತಾ ಕಾಮೆಂಟ್‌ ಮಾಡ್ತಿದ್ದಾರೆ.. ಇನ್ನೂ ಕೆಲವರು ರಕ್ಷಕ್‌ ರಮೋಲಾ ವಿನ್‌ ಆಗ್ಬೇಕಿತ್ತು. ಈ ಶೋ ಗೆ ಬಂದ್ಮೇಲೆ ರಕ್ಷಕ್‌ ಕಂಪ್ಲೀಟ್‌ ಚೇಂಜ್‌ ಆಗಿದ್ದಾರೆ. ಮಾತು ಮಾತಿಗೂ ಸಿಟ್ಟು ಮಾಡಿಕೊಳ್ತಿದ್ದ ರಕ್ಷಕ್‌ ಈಗ ಲವ್ವರ್‌ ಬಾಯ್‌ ಆಗಿದ್ದಾರೆ.. ಹೀಗಾಗಿ ಅವ್ರಿಗೆ ವಿನ್ನರ್‌ ಪಟ್ಟ ಸಿಗ್ಬೇಕಿತ್ತು ಅಂತಾ ರಕ್ಷಕ್‌ ಫ್ಯಾನ್ಸ್‌ ಕಮೆಂಟ್‌ ಮಾಡ್ತಿದ್ದಾರೆ.. ಒಟ್ಟಾರೆ ಸ್ಪರ್ಧಿಗಳು ಗೆದ್ದ ಖುಷಿಯಲ್ಲಿದ್ರೆ, ಅವ್ರ ಫಾನ್ಸ್‌ ಮಾತ್ರ ತಮ್ಮ ನೆಚ್ಚಿನ ಜೋಡಿಯೇ ಗೆಲ್ಬೇಕಿತ್ತು ಅಂತ ಕಮೆಂಟ್‌ ಹಾಕ್ತಿದ್ರೆ, ಮತ್ತೆ ಕೆಲವರು, ಜಡ್ಜ್ಮೆಂಟ್ ಕರೆಕ್ಟಾಗಿ ಇದೆ. ಇಲ್ಲಿ ಮೋಸ ಆಗಿಲ್ಲ ಅಂತ ಹೇಳಿದ್ದಾರೆ.

Shwetha M