ಗೌತಮ್ 2 ಮಕ್ಕಳು ಜೈದೇವ್‌ ಪಾಲು – ಭೂಮಿ ಮುಂದೆ ಬಯಲಾಯ್ತು ಕಿಡ್ನ್ಯಾಪ್‌ ರಹಸ್ಯ

ಗೌತಮ್ 2 ಮಕ್ಕಳು ಜೈದೇವ್‌ ಪಾಲು – ಭೂಮಿ ಮುಂದೆ ಬಯಲಾಯ್ತು ಕಿಡ್ನ್ಯಾಪ್‌ ರಹಸ್ಯ

ಭೂಮಿಕಾಗೆ ಮಗು ಆಗ್ಬಾರ್ದು ಅಂತ ಶಕುಂತಲಾ ಏನೆಲ್ಲಾ ಮಾಡಿದ್ಲು.. ಅಕೆ ಪ್ರೆಗ್ನೆಂಟ್‌ ಅಂತ ಗೊತ್ತಾಗ್ತಿದ್ದಂತೆ ಹಾಲಿನಲ್ಲಿ ವಿಷ ಕೂಡ ಬೆರೆಸಿ ಕೊಟ್ಟಿದ್ಲು. ಅದಾದ್ಮೇಲೆ ರೌಡಿಗಳನ್ನ ಕಳುಹಿಸಿ ಕೊಲ್ಲಲು ಕೂಡ ಪ್ರಯತ್ನಿಸಿದ್ಲು.. ಆದ್ರೆ ಭೂಮಿಕ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ಲು.. ಮೊದಲ ಮಗುವನ್ನ ಜೈದೇವ್‌ ಈಗ ಕಿಡ್ನಾಪ್‌ ಆಗಿದೆ.. ಈಗ ಗಂಡು ಮಗುವನ್ನ ಕೂಡ ಜೈದೇವ್‌ ಕಿಡ್ನ್ಯಾಪ್‌ ಮಾಡಲು ಬಂದು ಮಲ್ಲಿ ಸುಧಾ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದನ್ನೂ ಓದಿ: KSRTC ಬಸ್​​ನಲ್ಲಿ ಹೊಸ ರೂಲ್ಸ್​! – ಇನ್ಮುಂದೆ ಲಗೇಜ್‌ಗೂ ದುಡ್ಡು ಕಟ್ಟಬೇಕಾ?

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಅಮೃತಧಾರೆ ಸೀರಿಯಲ್‌ ರೋಚಕ ತಿರುವು ಪಡೆದುಕೊಂಡಿದೆ. ಭೂಮಿಕಾಗೆ ಮಕ್ಕಳು ಆಗ್ಬಾರ್ದು ಅಂತ ಶಕುಂತಲಾ ಸಾಕಷ್ಟು ಕುತಂತ್ರ ಮಾಡಿದ್ಲು.. ಆದ್ರೆ ಎಲ್ಲವೂ ಪ್ಲ್ಯಾನ್‌ ಉಲ್ಟಾ ಆಯ್ತು.. ಭೂಮಿಕಾ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ಲು. ಮೊದಲು ಭೂಮಿಕಾಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ಲು. ಆದ್ರೆ ಆ ಮಗುವನ್ನ ಶಕುಂತಲಾ ಜೈದೇವ್‌ ಸೇರಿಕೊಂಡು ಕಿಡ್ನ್ಯಾಪ್‌ ಮಾಡಿಸಿದ್ರು. ಬಳಿಕ ಭೂಮಿಕಾ ಎರಡನೇ ಮಗುವಿಗೆ ಜನ್ಮ ನೀಡಿದ್ಲು. ಬಳಿಕ ಎರಡನೇ ಮಗುವನ್ನ ಸೇಫ್‌ ಆಗಿ ಮನೆಗೆ ಕರ್ಕೊಂಡು ಕರ್ಕೊಂಡು ಬಂದಿದ್ರು.  ಈ ಮಗುವಿಗೆ ನಾಮಕರಣ ಕೂಡ ಮಾಡಿದ್ದಾರೆ. ಇದೀಗ ಈ ಮಗುವಿನ ಮೇಲೂ ಕೇಡಿಗಳ ವಕ್ರ ಕಣ್ಣು ಬಿದ್ದಿದೆ. ಇದೀಗ ಜೈದೇವ್‌ ಮಗುವನ್ನ ಕಿಡ್ನ್ಯಾಪ್‌ ಮಾಡಲು ಬಂದು ಸಿಕ್ಕಾಕೊಂಡಿದ್ದಾನೆ.

ಹೌದು, ಭೂಮಿಕಾ ಹಾಗೂ ಗೌತಮ್‌ ಇಬ್ಬರೂ ಲಾಂಗ್‌ ಡ್ರೈವ್‌ ಹೋಗಿದ್ದರು. ಆಗ ಅವರ ಮಗ ಆಕಾಶ್‌ ಮಲಗಿದ್ದನು. ಆ ಮಗುವನ್ನು ಸುಧಾ, ಮಲ್ಲಿ ನೋಡಿಕೊಳ್ತೀವಿ ಎಂದು ಹೇಳಿದ್ದರು.  ಆದ್ರೆ ಸುಧಾ ಲಚ್ಚಿನ ಮಲಗಿಸ್ತೀನಿ ಅಂತಾ ಹೋಗಿದ್ಲು.. ಮಲ್ಲಿ ಕೂಡ ರೂಮ್‌ನಿಂದ ಆಚೆ ಹೋಗಿದ್ಲು.. ಇದೇ ಆ ಸಮಯ ನೋಡಿಕೊಂಡು ಜಯದೇವ್‌ ಗೌತಮ್‌  ಭೂಮಿಕಾ ರೂಮ್‌ಗೆ ಬಂದಿದ್ದಾನೆ. ಮಾಸ್ಕ್‌ ಹಾಕಿಕೊಂಡು ಬಂದ ಜೈದೇವ್‌, ಆ ಮಗವನ್ನ ನೋಡಿ ನಿನ್ನ ಸಹೋದರಿ ಬೇರೆ ಕಡೆ ಇದ್ದಾಳೆ, ನೀನು ಯಾಕೆ ಇಲ್ಲಿರಬೇಕು ಎಂದು ಹೇಳಿ ಆ ಮಗುವನ್ನು ಅವನು ಎತ್ತಿಕೊಂಡಿದ್ದಾನೆ. ಅಷ್ಟೊತ್ತಿಗೆ ಅಲ್ಲಿಗೆ ಮಲ್ಲಿ ಬಂದಿದ್ದಾಳೆ. ಮಗುವನ್ನ ಎತ್ತಿಕೊಳ್ಳಲು ಜೈದೇವ್‌ ನೋಡ್ತಿದ್ದಂತೆ ಮಲ್ಲಿ ಸರಿಯಾಗೆ ಹೊಡೆದಿದ್ದಾಳೆ. ಅದೇ ಸಮಯಕ್ಕೆ ಸುಧಾ ಕೂಡ ಬಂದಿದ್ದಾಳೆ. ಸುಧಾ ಹಾಗೂ ಮಲ್ಲಿ ಇಬ್ಬರೂ ಜೈದೇವ್‌ ಮುಖಕ್ಕೆ ಹಾಕಿದ್ದ ಮಾಸ್ಕ್‌ ಬಿಚ್ಚಲು ನೋಡಿದ್ದಾರೆ. ಆದ್ರೆ ಜೈದೇವ್‌ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಇದೀಗ ಜೈದೇವ್‌ ಮಗುವನ್ನ ಕಿಡ್ನ್ಯಾಪ್‌ ಮಾಡಲು ಬಂದಿದ್ದ ಅಂತ ಗೌತಮ್‌ ಕಿವಿಗೆ ಬಿದ್ರೆ ಆತನ ಕತೆ ಮುಗಿದಂಗೆ ಲೆಕ್ಕ.. ಮೊದಲ ಮಗುವನ್ನ ಕೂಡ ಈತನೇ   ಕಿಡ್ನ್ಯಾಪ್‌ ಮಾಡಿದ್ದಾನೆ ಅಂತ ಗೊತ್ತಾಗ್ಬೋದು. ಇನ್ನು ಈ ವಿಚಾರ ಭೂಮಿಕಾಗೆ  ಗೊತ್ತಾದರೆ ಗಾಬರಿ ಆಗುತ್ತಾಳೆ. ಆರೋಗ್ಯದ ದೃಷ್ಟಿಯಿಂದ ಅವಳಿಗೆ ಈ ರೀತಿಯ ವಿಷಯ ಗೊತ್ತಾಗಬಾರದು ಅಂತ ಡಾಕ್ಟರ್‌ ಕೂಡ ಹೇಳಿದ್ದಾರೆ. ಮೊದಲ ಮಗು ಇಲ್ಲ ಅಂದ್ರೆ ಭೂಮಿಕಾಗೆ ಏನಾಗ್ಬೋದು? ಗೌತಮ್‌ ಮೇಲೆ ಸಿಟ್ಟು ಮಾಡಿಕೊಳ್ಬೋದು ಅನ್ನೋ ಪ್ರಶ್ನೆ ಕೂಡ ವೀಕ್ಷಕರನ್ನ ಕಾಡ್ತಿದೆ. ಇದೀಗ  ಕಿಡ್ನ್ಯಾಪ್‌ ವಿಷಯ ಯಾವ ರೀತಿಯ ಟ್ವಿಸ್ಟ್‌ ಕೊಡುತ್ತದೆ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿವೆ.

Shwetha M