BBK 12 ರೂಲ್ಸ್ ಚೇಂಜ್ – ವಿವಾದ.. ರೀಲ್ಸ್ ಸ್ಟಾರ್ಸ್ಗಿಲ್ಲ ಚಾನ್ಸ್? – ಇನ್ಮುಂದೆ ಅಸಲಿ ಆಟ ಶುರು!

ಬಿಗ್ ಬಾಸ್.. ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ.. ಸೀಸನ್ 12 ರ ಕೂಡ ಕಿಚ್ಚ ಸುದೀಪ್ ಹೋಸ್ಟ್ ಮಾಡೋದು ಕನ್ಫರ್ಮ್ ಆಗಿದೆ. ದೊಡ್ಮನೆಗೆ ಯಾರೆಲ್ಲಾ ಬರ್ತಾರೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಿಗೆ ಇದ್ದೇ ಇದೆ. ಇದೀಗ ಸೀಸನ್ 12ರಲ್ಲಿ ಕೆಲ ರೂಲ್ಸ್ ಚೇಂಜ್ ಮಾಡಲಾಗ್ತಿದೆ ಅನ್ನೋ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಸುನೀಲ್ ಅಮ್ರಿಟಾ ವಿನ್ನರ್? – ಫಿನಾಲೆ ಮುನ್ನವೇ ರಿಸಲ್ಟ್ ಲೀಕ್?
ಒಂದು ಮನೆ.. 100ಕ್ಕೂ ಹೆಚ್ಚು ದಿನ.. ವಿಭಿನ್ನ ಮನಸ್ಥಿತಿಯ ಸ್ಪರ್ಧಿಗಳು.. ಇವರನ್ನೆಲ್ಲಾ ಮೊಬೈಲ್ ಇಲ್ಲದೇ.. ಹೊರ ಪ್ರಪಂಚದ ಸಂಪರ್ಕ ಇಲ್ಲದೇ ಒಂದೇ ಮನೆಯಲ್ಲಿ ಇರುವಂತೆ ಮಾಡುವುದೇ ಬಿಗ್ ಬಾಸ್ ಶೋದ ಸ್ಪೆಷಾಲಿಟಿ.. ಇದ್ರ ಜೊತೆ ಬಿಗ್ಬಾಸ್ ನೀಡುವ ಹೊಸ ಹೊಸ ಟಾಸ್ಕ್ಗಳು.. ಅದೇ ಸಂದರ್ಭದಲ್ಲೇ ಫ್ರೆಂಡ್ಸ್ ಅಂತ ಅಂದುಕೊಂಡವರ ನಡುವೆಯೇ ನಡೆಯುವ ಕಿತ್ತಾಟ.. ಒಬ್ಬರ ವಿರುದ್ದ ಒಬ್ಬರು ಹೇಳುವ ಚಾಡಿ ಮಾತು.. ಎದುರಿಗೆ ಚೆನ್ನಾಗಿರುವಂತೆ ನಟಿಸಿ.. ಹಿಂದಿನಿಂದ ಪಿನ್ ಇಡುವವರ ಮುಖಗಳನ್ನು ಅನಾವಣ ಮಾಡುವುದರಿಂದಲೇ ಬಿಗ್ಬಾಸ್ ಶೋ ಜನಪ್ರಿಯತೆಯನ್ನು ಗಳಿಸಿದೆ.. ಇದೀಗ ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕ್ಷಣ ಗಣನೆ ಆರಂಭವಾಗಿದೆ.. ಹೊಸ ಸೀಸನ್ ಹೊಸತನದೊಂದಿಗೆ ಆರಂಭವಾಗಲಿದೆ.
ಹೌದು ಆರಂಭದಲ್ಲಿ ಪ್ರಸಾರವಾಗ್ತಿದ್ದ ಬಿಗ್ಬಾಸ್ ಶೋಗೂ ಹಾಗೂ ಕಳೆದ ಬಾರಿ ಪ್ರಸಾರವಾಗಿದ್ದ ಸೀಸನ್ ಗೂ ಭಾರಿ ವ್ಯತ್ಯಾಸ ಇತ್ತು. ಕಳೆದ ವರ್ಷ ಹೊಸ ಫಾರ್ಮ್ಯಾಟ್ ನಲ್ಲಿ ಶೋ ನಡೆಸಲಾಗಿತ್ತು. ಸ್ವರ್ಗ ಹಾಗೂ ನರಕ ಕಾನ್ಸೆಪ್ಟ್ ಮಾಡಿದ್ದು, ಸಾಕಷ್ಟು ವಿವಾದ ಹುಟ್ಟು ಹಾಕಿತ್ತು.. ಅಷ್ಟೇ ಅಲ್ಲ ಸ್ಪರ್ಧಿಗಳು ಕೂಡ ದೊಡ್ಮನೆಯಲ್ಲಿ ಹೊಡೆದಾಡಿಕೊಂಡಿದ್ರು. ಇದ್ರಿಂದ ಶೋ ರೇಟಿಂಗ್ ಕೂಡ ಹೆಚ್ಚಾಗಿತ್ತು. ಲಾಯರ್ ಜಗದೀಶ್ ಔಟ್ ಆಗ್ತಿದ್ದಂತೆ.. ಹಳ್ಳಿ ಹೈದ ಹನುಮಂತುನ ಶೋಗೆ ಕರೆಸಲಾಗಿತ್ತು. ಇದ್ರಿಂದ ಬಿಗ್ಬಾಸ್ ಟಿಆರ್ಪಿ ದಾಖಲೆ ಬರೆದಿತ್ತು.. ಈ ಬಾರಿಯ ಸೀಸನ್ ಹೇಗಿರಲಿದೆ ಅನ್ನೋ ಕ್ಯೂರಿಯಾಸಿಟಿ ವೀಕ್ಷಕರಲ್ಲಿ ಮೂಡಿದೆ.
ಬಿಗ್ ಬಾಸ್ ಸೀಸನ್ 12 ರಲ್ಲಿ ಮನರಂಜನೆಗೆ ಮೊದಲ ಆದ್ಯತೆ ನೀಡಲಾಗ್ತಿದೆ. ಕಳೆದ ಎರಡು ಸೀಸನ್ ಗಳು ಬರಿ ಕಿತ್ತಾಟ.. ರಂಪಾಟದಿಂದಲೇ ಸದ್ದು ಮಾಡಿತ್ತು. ಇದು ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಅನ್ನಿಸಿತ್ತು. ಹೀಗಾಗಿ ಈ ಬಾರಿಯ ಸೀಸನ್ನಲ್ಲಿ ಮನರಂಜನೆಗೆ ಹೆಚ್ಚು ಆದ್ಯತೆ ನೀಡಲಾಗ್ತಿದೆ ಅಂತಾ ಹೇಳಲಾಗ್ತಿದೆ. ಇನ್ನು ಬಿಗ್ಬಾಸ್ ಶೋ ವಿವಾದಿತ ಶೋ ಅಂತ ಕರೆಯಲಾಗುತ್ತೆ. ಕಳೆದರಡು ಸೀಸನ್ನಲ್ಲಿ ಜೈಲಿ ಹೋದವರನ್ನ ಶೋಗೆ ಕರೆಸಲಾಗಿತ್ತು. ಅದ್ರ ಜೊತೆಗೆ ದೊಡ್ಮನೆಯಲ್ಲಿ ವಿವಾದ ಮಾಡಿಕೊಂಡು ಜೈಲಿಗೆ ಹೋದವರೂ ಇದ್ದಾರೆ.. ಇದ್ರಿಂದ ಸಮಾಜಕ್ಕೆ ಏನು ಸಂದೇಶ ಸಿಗುತ್ತೆ ಅನ್ನೋ ಮಾತು ಕೇಳಿಬಂದಿತ್ತು.. ಹೀಗಾಗೇ ಪ್ರೆಸ್ಮೀಟ್ನಲ್ಲಿ ಈ ಬಗ್ಗೆ ಕಿಚ್ಚ ಸುದೀಪ್ ಬಳಿ ಕೇಳಲಾಗಿತ್ತು.. ಇದಕ್ಕೆ ವಿವಾದ ಮಾಡಿಕೊಂಡವರು ಬಂದ್ರೂ ಅವ್ರನ್ನ ನಾವು ಕಂಟ್ರೋಲ್ ಮಾಡ್ತೀವಿ ಅಂತಾ ಹೇಳಿದ್ರು.. ಹೀಗಾಗೇ ಈ ಬಾರಿಯೂ ವಿವಾದ ಮಾಡಿಕೊಂಡವರಿಗೆ ಎಂಟ್ರಿ ಇದ್ದೇ ಇದೆ..
ಬಿಗ್ ಬಾಸ್ ಕನ್ನಡದಲ್ಲಿ ಕನ್ನಡವೇ ಮಾಯ ಆಗ್ತಿದೆ ಅನ್ನೋ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಅಸಮಧಾನ ವ್ಯಕ್ತಪಡಿಸಿದ್ರು.. ಈ ಬಾರಿ ಕನ್ನಡಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನ ನೀಡಲಾಗುತ್ತೆ ಅಂತಾ ಆಯೋಜಕರು ಹೇಳಲಿದ್ದಾರೆ. ಇನ್ನು ಬಿಗ್ ಬಾಸ್ ಆರಂಭದ ಸೀಸನ್ಗಳಲ್ಲಿ ಸೀಕ್ರೆಟ್ ರೂಮ್ ಅನ್ನೋ ಕಾನ್ಸೆಪ್ಟ್ ಇತ್ತು.. ಸ್ಪರ್ಧಿಗಳನ್ನು ಏಕಾಏಕಿ ಮನೆಯ ಯಾವುದಾದ್ರು ಒಂದು ಬಾಗಿಲಿನಿಂದ ಮಾಯ ಆಗೋ ರೀತಿ ಮಾಡಲಾಗ್ತಿತ್ತು.. ಅಥವಾ ಎಲಿಮಿನೇಟ್ ಆದಂತಹ ಸ್ಪರ್ಧಿಯನ್ನೇ ಕಿಚ್ಚನ ವೀಕೆಂಡ್ ವೇದಿಕೆಗೆ ಕರೆಸದೆ ಸೀಕ್ರೇಟ್ ರೂಮ್ನಲ್ಲಿ ಇಡಲಾಗುತ್ತಿತ್ತು. ಮನೆಯೊಳಗಡೆ ಇರುವ ಸ್ಪರ್ಧಿಗಳು ಓರ್ವ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ ಅಂತ ಭಾವಿಸ್ತಿದ್ದರು. ಆದರೆ ಅವರು ಸೀಕ್ರೇಟ್ ರೂಮ್ನಲ್ಲಿ ಇದ್ಕೊಂಡು ಮನೆಯಲ್ಲಿ ಯಾರು ಹೇಗೆ ಆಟ ಆಡ್ತಿದ್ದಾರೆ? ಯಾರು ಏನು ಮಾತಾಡ್ತಾರೆ ಅಂತ ಗಮನಿಸ್ತಿದ್ರು.. ಅದಾದ್ಮೇಲೆ ಮತ್ತೆ ಮನೆಯಲ್ಲಿ ಪ್ರತ್ಯಕ್ಷ ಆಗಿ ಎಲ್ಲರಿಗೂ ಶಾಕ್ ನೀಡ್ತಿದ್ರು. ಮನೆಯಲ್ಲಿ ಯಾರು ಹೇಗೆಲ್ಲಾ ಆಡ್ತಿದ್ದಾರೆ ಅಂತಾ ತಿಳ್ಕೊಂಡು ಆಟದ ವರಸೆ ಕೂಡ ಚೇಂಜ್ ಮಾಡ್ಕೊಳ್ತಿದ್ರು.. ನಿಜಕ್ಕೂ ಈ ಟಾಸ್ಕ್ ವೀಕ್ಷಕರಿಗೆ ಮಜಾ ಕೊಡ್ತಿತ್ತು.
ದೊಡ್ಮನೆಯಲ್ಲಿ ಪ್ರತಿವಾರ ಎಲಿಮಿನೇಷನ್ ಪ್ರಕ್ರಿಯೆ ನಡೆಯುತ್ತೆ. ಟಾಸ್ಕ್, ವೋಟ್ ಗಳ ಆಧಾರ ಮೇಲೆ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಲಾಗುತ್ತೆ. ಹಿಂದಿನ ಸೀಸನ್ ಗಳಲ್ಲಿ ಎಲಿಮಿನೇಟ್ ಆಗಿ ಮನೆಯಿಂದ ಹೊರ ಬಂದವರ ಬಳಿ ಕಿಚ್ಚ ಮಾತುಕತೆ ನಡೆಸ್ತಿದ್ರು.. ಮನೆಯಲ್ಲಿ ಏನ್ ಇಷ್ಟ ಆಯ್ತು.. ಯಾವ ಸ್ಪರ್ಧಿ ಇಷ್ಟ ಆಗಿಲ್ಲ.. ಅದಕ್ಕೆ ಕಾರಣಗಳನ್ನ ಕೇಳಲಾಗ್ತಿತ್ತು.. ಆದ್ರೀಗ ನಾಲ್ಕರಿಂದ ಐದು ಪ್ರಶ್ನೆಗಳಲ್ಲಿ ಎಲಿಮಿನೇಟ್ ಆದವರ ಜೊತೆಗಿನ ಮಾತುಕತೆ ಮುಗಿಸಿ ಬೇಗ ಬೇಗನೆ ಮನೆಗೆ ಕಳಿಸಲಾಗ್ತಿದೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದವರು, ಕಾಂಟ್ರವರ್ಸಿ ಮಾಡಿದವರಿಗೆ ಬಿಗ್ಬಾಸ್ ಶೋದಲ್ಲಿ ಸ್ಪರ್ಧಿಗಳಾಗಿ ಆಯ್ಕೆ ಮಾಡಲು ಹೆಚ್ಚಿನ ಆದ್ಯತೆ ಸಿಗ್ತಿದೆ ಎಂಬ ಅಪವಾದವಿದೆ. ಅಂದಹಾಗೆ ಕನ್ನಡದಲ್ಲಿ ದೊಡ್ಡ ಹೆಸರು ಮಾಡಿರುವ ಸಾಕಷ್ಟು ಕಲಾವಿದರಿದ್ದು, ಅವರಿಗೂ ಈ ಶೋನಲ್ಲಿ ಅವಕಾಶ ಸಿಕ್ಕರೆ ಚೆನ್ನಾಗಿರುತ್ತದೆ ಎನ್ನೋದು ಕೆಲ ವೀಕ್ಷಕರ ಅಭಿಪ್ರಾಯ. ಆದರೆ ಅವರಿಗೆ ಬಿಗ್ ಬಾಸ್ ಶೋನಲ್ಲಿ ಅವಕಾಶ ಸಿಗುತ್ತದೆಯಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಬಿಗ್ಬಾಸ್ ಶೋಗೆ ಅದರದ್ದೇ ಆದ ವೀವರ್ಸ್ ಇದ್ದಾರೆ.. ಯಾವ ಭಾಷೆಯಲ್ಲಿ ಈ ಕಾರ್ಯಕ್ರಮ ಬಂದ್ರೂ ಬೈಕೊಂಡು ಬೈಕೊಂಡು ಜನ ನೋಡ್ತಾರೆ.. ಸೀಸನ್ 12 ಆರಂಭಕ್ಕಾಗಿ ಈಗ ವೀಕ್ಷಕರು ಕಾಯ್ತುದ್ದಾರೆ.

ನೋಡಿರಿ

