ಟೆಸ್ಟ್ ಕ್ರಿಕೆಟ್‌ನಲ್ಲಿ ಬೇರೂರಿದ ರೂಟ್ – ಜೋ ಅಬ್ಬರಕ್ಕೆ ಸಚಿನ್ ದಾಖಲೆ ಶೇಕಿಂಗ್

ಒಂದೇ ಪಂದ್ಯ.. ಒಂದೇ ದಿನ.. ಮೂವರು ದಿಗ್ಗಜರ ರೆಕಾರ್ಡ್ ಜೊತೆ ಸಾಲು ಸಾಲು ರೆಕಾರ್ಡ್ ಬ್ರೇಕ್.. ಇನ್ನೊಂದು ಹೆಜ್ಜೆ ಇಟ್ರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬ್ರೇಕ್ ಆಗೋದು ಫಿಕ್ಸ್. ಭಾರತ ಮತ್ತು ಇಂಗ್ಲೆೆಂಡ್ ನಡುವಿನ 4ನೇ ಟೆಸ್ಟ್‌ನಲ್ಲಿ ಮಿಂಚುಹರಿಸಿದ ಜೋ ರೂಟ್ ದಾಖಲೆಗಳನ್ನ ಉಡೀಸ್ ಮಾಡ್ತಿದ್ದಾರೆ.. ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಟೆಸ್ಟ್‌ನಲ್ಲಿ 150 ರನ್ ಗಳಿಸೋ ಮೂಲಕ ರನ್ ಸರದಾರರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್, ಜಾಕ್ಸ್ ಕಾಲಿಸ್ ಹಾಗೂ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಇದರೊಂದಿಗೆ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯ ಸನಿಹಕ್ಕೆ ತಲುಪಿದ್ದಾರೆ. ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಭಾರತ ವಿರುದ್ಧ 4ನೇ ಟೆಸ್ಟ್‌ನ 3ನೇ ದಿನವಾದ ಶುಕ್ರವಾರ ರೂಟ್, ಭಾರತದ ರಾಹುಲ್ ದ್ರಾವಿಡ್, ದಕ್ಷಿಣ ಆಫ್ರಿಕಾದ ಜ್ಯಾಕ್ ಕ್ಯಾಲಿಸ್ ಹಾಗೂ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ರನ್ನು ಬ್ರೇಕ್ ಮಾಡಿದ್ದಾರೆ.
ಟೆಸ್ಟ್ ನಲ್ಲಿ ಅತೀ ಹೆಚ್ಚು ರನ್ ಕಲೆ ಹಾಕಿದ್ದವರಲ್ಲಿ ಟಾಪ್ 1ನಲ್ಲಿ ಇರೋದು ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಇವರು 200 ಪಂದ್ಯದಲ್ಲಿ 329 ಇನ್ನಿಂಗ್ಸ್ ಆಡಿದ್ದು 15,921 ರನ್ ಕಲೆಹಾಕಿದ್ದಾರೆ. ಇವರನ್ನ ಬಿಟ್ರೆ 2ನೇ ಸ್ಥಾನದಲ್ಲಿರೋದು ಜೋ ರೂಟ್.. 157 ಪಂದ್ಯಗಳಲ್ಲಿ 286 ಇನ್ನಿಂಗ್ಸ್ ಆಡಿರೋ ರೂಟ್ 13,409 ರನ್ ಗಳಿಸಿದ್ದಾರೆ. 13,378 ರನ್ ಗಳಿಸಿರು ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ರೆ, 166 ಪಂದ್ಯಗಳಲ್ಲಿ 13289 ರನ್ ಗಳಿಸಿರುವ ಕ್ಯಾಲಿಸ್ 4ನೇ ಸ್ಥಾನದಲ್ಲಿದ್ದಾರೆ. 164 ಪಂದ್ಯಗಳಲ್ಲಿ 13,288 ರನ್ ಬಾರಿಸಿರುವ ದ್ರಾವಿಡ್ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ಅಂಕಿ ಅಂಶವನ್ನ ನೋಡಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರನ್ನು ಹಿಂದಿಕ್ಕಲು ಜೋ ರೂಟ್‌ಗೆ ಇನ್ನೂ 2,512 ರನ್‌ಗಳ ಅಗತ್ಯವಿದೆ. ಸದ್ಯ ಜೋ ರೂಟ್ ಅವರ ಫಾರ್ಮ್ ಹಾಗೂ ಪ್ರದರ್ಶನವನ್ನು ಗಮನಿಸಿದರೆ ಇನ್ನೆರಡು ವರ್ಷದಲ್ಲಿ ಸಚಿನ್ ತೆಂಡುಲ್ಕರ್ ರೆಕಾರ್ಡ್ ಬ್ರೇಕ್ ಆಗೋದು ಪಕ್ಕಾ. ಜೋ ರೂಟ್ ಇದೇ ಸ್ಥಿರತೆಯನ್ನು ಕಾಯ್ದುಕೊಂಡರೇ ಇಂಗ್ಲೆಂಡ್ ಕ್ರಿಕೆಟಿಗ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಳ್ಳಲು ಹೆಚ್ಚು ಸಮಯ ಬೇಕಾಗಲ್ಲ.. ಇದ್ರ ಜೊತೆ ತವರಿನಲ್ಲಿ ಅತೀ ಹೆಚ್ಚು ರನ್‌ಗಳಿಸಿದ ದಾಖಲೆ ಕೂಡ ರೂಟ್ ತಮ್ಮದಾಗಿಸಿಕೊಂಡಿದ್ದಾರೆ. ರೂಟ್ ಈಗ ಇಂಗ್ಲೆಂಡ್‌ನಲ್ಲಿ ಒಟ್ಟು 7195 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ, ಇದು ಶ್ರೀಲಂಕಾದಲ್ಲಿ ಜಯವರ್ಧನೆ ಗಳಿಸಿದ 7167 ರನ್‌ಗಳಿಗಿಂತ ಹೆಚ್ಚಾಗಿದೆ. ಹಾಗೇ ಭಾರತದ ವಿರುದ್ಧ ಟೆಸ್ಟ್ ಸ್ವರೂಪದಲ್ಲಿ 12 ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ರೂಟ್ ಆಗಿದ್ದಾರೆ.
ಈಗಿನ ರೂಟ್ ಫಾರ್ಮ್ ನೋಡಿದರೆ ಪ್ರಪಂಚದ ಯಾವುದೆ ಕ್ರಿಕೆಟರ್ಗಳ ದಾಖಲೆ ಮುರಿಯಬಹುದು. ಆದರೆ ವಿರಾಟ್ ಕೊಹ್ಲಿ ಹೆಸರಲ್ಲಿರುವ ಆ ಒಂದು ದಾಖಲೆಯನ್ನು ಮುರಿಯುವುದರಿಲು ಹತ್ತಿರಕ್ಕೂ ಹೋಗಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಗಿಂತ ರೂಟ್ ಬ್ಯಾಟ್ಸ್‌ಮನ್ ಆಗಿ ಬಹಳ ಮುಂದಿದ್ದಾರೆ. ಆದರೆ ನಾಯಕತ್ವದಲ್ಲಿ ಅವರು ಕೊಹ್ಲಿಗಿಂತ ಬಹಳ ಹಿಂದಿದ್ದಾರೆ. ನಾಯಕನಾಗಿ ಕೊಹ್ಲಿ ರೂಟ್‌ಗಿಂತ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದಾರೆ. ಜೊತೆಗೆ ನಾಯಕನಾಗಿ ಬ್ಯಾಟಿಂಗ್‌ನಲ್ಲೂ ಕೊಹ್ಲಿ ರೂಟ್‌ಗಿಂತ ಮುಂದಿದ್ದಾರೆ. ರೂಟ್ ಎಂದಿಗೂ ಮುರಿಯದ ಏಕೈಕ ದಾಖಲೆ ಎಂದರೆ ಇದು. ಏಕೆಂದರೆ ರೂಟ್ ಈಗ ಇಂಗ್ಲೆಂಡ್ ನಾಯಕತ್ವವನ್ನು ತೊರೆದಿದ್ದಾರೆ. ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದಾರೆ.

ನೋಡಿರಿ

