ಮನೆಯಲ್ಲಿ ಹೆಂಡ್ತಿ ಕಾಟವೆಂದು ಸನ್ಯಾಸಿ ವೇಷ ತೊಟ್ಟ ಭೂಪ!

ಮನೆಯಲ್ಲಿ ಹೆಂಡ್ತಿ ಕಾಟವೆಂದು ಸನ್ಯಾಸಿ ವೇಷ ತೊಟ್ಟ ಭೂಪ!

ಯಾರಾದ್ರೂ ಜೀವನದಲ್ಲಿ ಜಿಗುಪ್ಸೆ ಬಂದಿದೆ ಎಂದು ಹೇಳಿದಾಗ ಸನ್ಯಾಸಿ ಆಗು.. ದೀಕ್ಷೆ ತೆಗೆದುಕೋ ಅಂತಾ ತಮಾಷೆಗೆ ಅನೇಕರು ಹೇಳುವುದನ್ನ ನಾವು ಕೇಳಿರ್ತೇವೆ.. ಇದೀಗ ಇಲ್ಲೊಬ್ಬ ಹೆಂಡ್ತಿ ಕಾಟ ಅಂತಾ ಸಹಿಸಲಾಗದೇ ಸನ್ಯಾಸಿ ಆಗಿದ್ದಾನೆ. ಇದೀಗ ಆತನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ : ಮೊಬೈಲ್‌ ಕದ್ದು ಚಲಿಸುತ್ತಿರುವ ರೈಲಿನಿಂದ ಹಾರಿದ ಭೂಪ! – ಆಮೇಲೆ ಏನಾಯ್ತು ಗೊತ್ತಾ?  

ಲೌಕಿಕ ಜೀವನದ ಬಗ್ಗೆ ಆಸಕ್ತಿ ಕಳ್ಕೊಳ್ತಿದ್ದಂತೆ ಕೆಲವರು, ಆಧ್ಯಾತ್ಮಿಕ ಶಾಂತಿಯನ್ನು ಹುಡುಕುತ್ತಾ ಮನೆ ಬಿಟ್ಟು ಹೋಗ್ತಾರೆ. ಎಲ್ಲಾ ಸಂಬಂಧಗಳನ್ನು ತ್ಯಜಿಸಿ, ಅವರು ದೇವರ ಅನ್ವೇಷಣೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ಮನೆಯಲ್ಲಿ ಹೆಂಡ್ತಿ ಕಾಟ ಅಂತಾ ಮನೆ ಬಿಟ್ಟು ಸನ್ಯಾಸಿ ಹಾಗೇ ವೇಷ ಹಾಕಿಕೊಂಡಿದ್ದಾನೆ. ಈಗ ಆತ ಹೆಂಡ್ತಿ ತಾಯಿ ಕೈಗೆ ಸಿಕ್ಕಿದ್ದಾನೆ. ಈ ವೇಳೆ ಆಕೆ ತನ್ನ ಮಗಳ ಬಗ್ಗೆ ಆತನ ಬಳಿ ಪ್ರಶ್ನಿಸಿದ್ದಾಳೆ. ಅಲ್ಲದೆ, ಸಾಧು ಆಗಿರುವ ಕಾರಣದ ಬಗ್ಗೆ ಕೇಳಿದ್ದಾಳೆ. ನಿಮ್ಮ ಮಗಳಿಂದಾಗಿ ನಾನು ಸಾಧುವಾದೆ ಎಂದು ಸಾಧು ಸ್ಪಷ್ಟವಾಗಿ ಉತ್ತರಿಸಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ 16.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಬಳಕೆದಾರರು ಕಾಮೆಂಟ್‌ಗಳಲ್ಲಿ ಅಳಿಯನ ಮಾತುಗಳನ್ನು ಪ್ರತಿಧ್ವನಿಸುತ್ತಾ, ಅವರು ಸಾಧುವಾಗಲು ಅವರ ಪತ್ನಿಯೇ ಕಾರಣವಾಗಿದ್ದಾರೆ. ಇದು ಸಾಪೇಕ್ಷ ಸತ್ಯ ಎಂದು ಹೇಳಿಕೊಂಡಿದ್ದಾರೆ. ಮತ್ತೆ ಕೆಲವರು ನಾನು ನನ್ನ ಅಳಿಯನನ್ನು ಕುಂಭಮೇಳದಲ್ಲಿ ಭೇಟಿಯಾದೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಅವರು ಸಾಧುವಿನಂತೆ ಕಾಣುವುದಕ್ಕಿಂತ ಭಿಕ್ಷುಕನಂತೆ ಕಾಣುತ್ತಾರೆ. ಅದಕ್ಕಾಗಿಯೇ ಅತ್ತೆ ಸುಮ್ಮನಾದರು ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Shwetha M