ಸುನೀಲ್‌ ಅಮ್ರಿಟಾ ವಿನ್ನರ್?‌  – ಫಿನಾಲೆ ಮುನ್ನವೇ ರಿಸಲ್ಟ್ ಲೀಕ್?

ಸುನೀಲ್‌ ಅಮ್ರಿಟಾ ವಿನ್ನರ್?‌  – ಫಿನಾಲೆ ಮುನ್ನವೇ ರಿಸಲ್ಟ್ ಲೀಕ್?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಗ್ರ್ಯಾಂಡ್‌ ಫಿನಾಲೆಗೆ ಕೌಂಟ್‌ಡೌನ್‌ ಶುರುವಾಗಿದೆ. 10 ಜೋಡಿಗಳಲ್ಲಿ ಯಾರು ವಿನ್‌ ಆಗ್ತಾರೆ? ಯಾವ ಜೋಡಿ ಟ್ರೋಫಿ ಗೆಲ್ಲಲಿದೆ ಅನ್ನೋ ಕ್ಯೂರಿಯಾಸಿಟಿ ಈಗ ವೀಕ್ಷಕರಲ್ಲಿದೆ. ಆದ್ರೀಗ ಭರ್ಜರಿ ಗ್ರ್ಯಾಂಡ್‌ ಫಿನಾಲೆಗೂ ಮುನ್ನವೇ ರಿಸಲ್ಟ್‌ ಲೀಕ್‌ ಆಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಗೆದ್ದಿದ್ದು ಯಾರು? ರನ್ನರಪ್‌ ಸ್ಥಾನ ಸಿಕ್ಕ ಜೋಡಿಯ ಲಿಸ್ಟ್‌ ವೈರಲ್‌ ಆಗ್ತಿದೆ.

ಇದನ್ನೂ ಓದಿ: ಕರುಣ್ ನಾಯರ್ ಕಣ್ಣೀರು – ಗೆಳೆಯನ ಸಂತೈಸಿದ ಕೆಎಲ್ ರಾಹುಲ್

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಈಗ ಅಂತಿಮ ಘಟ್ಟದಲ್ಲಿದೆ. 10  ಬ್ಯಾಚುಲರ್ಸ್‌ಗೆ 10 ಸುಂದರಿಯರು ಮೆಂಟರ್ಸ್‌ ಆಗಿ ಶೋಗೆ ಬಂದಿದ್ರು. ಇದೀಗ 10 ಜೋಡಿಯಲ್ಲಿ 3 ಜೋಡಿಗಳ ಮಧ್ಯೆ ಟಫ್‌ ಫೈಟ್‌ ಇದೆ. ಇದೀಗ ಇವರಲ್ಲಿ ಯಾರು ವಿನ್‌ ಆಗ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಿಗೂ ಇದೆ. ಭಾನುವಾರ ಸಂಜೆ 6 ಗಂಟೆಗೆ ಗ್ರ್ಯಾಂಡ್‌ ಫಿನಾಲೆ ಜೀಕನ್ನಡದಲ್ಲಿ ಪ್ರಸಾರವಾಗಲಿದೆ. ಇದೀಗ ಗ್ರ್ಯಾಂಡ್‌ ಫಿನಾಲೆ ಪ್ರಸಾರಕ್ಕೂ ಮುನ್ನವೇ ರಿಸಲ್ಟ್‌ ಲೀಕ್‌ ಆಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ವಿನ್ನರ್‌ ಯಾರು, ರನ್ನರ್‌ ಯಾರು ಅನ್ನೋದು ವೈರಲ್‌ ಆಗ್ತಿದೆ.

ಹೌದು, ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ನಲ್ಲಿ 10 ಜೋಡಿಗಳು ಭರ್ಜರಿ ಪರ್ಫಾಮೆನ್ಸ್‌ ಕೊಟ್ಟಿದ್ದಾರೆ. ಕೆಲ ಜೋಡಿಗೆ ಈಗಾಗಲೇ ಸಾಕಷ್ಟು ಫ್ಯಾನ್ಸ್‌ ಹುಟ್ಟಿಕೊಂಡಿದ್ದಾರೆ. ತಮ್ಮ ಫೆವರೆಟ್‌ ಜೋಡಿಯೇ ವಿನ್‌ ಆಗಲಿ ಅಂತ ವೀಕ್ಷಕರು ಹೇಳ್ತಿದ್ದಾರೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವಿನ್ನರ್‌ ಆದ ಹೆಸರು ಹಾಗೇ ಫೋಟೋಗಳು ವೈರಲ್‌ ಆಗುತ್ತಿವೆ. ಇದ್ರಲ್ಲಿ ಸುನೀಲ್‌ ಹಾಗೂ ಅಮ್ರಿಟಾ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ವಿನ್ನರ್‌..  ರಕ್ಷಕ್‌ ಬುಲೆಟ್‌ – ರಾಮೋಲಾ ರನ್ನರ್‌ ಅಪ್‌ ಆಗಿದ್ದಾರೆ. ಡ್ರೋನ್ ಪ್ರತಾಪ್ – ಗಗನ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಸುದ್ದಿ ಅಧಿಕೃತವಲ್ಲ. ಜಸ್ಟ್‌ ಅಂತೆ ಕಂತೆಗಳಷ್ಟೇ.. ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.

ಅಂದ್ಹಾಗೆ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್-2 ನಲ್ಲಿ ಸುನೀಲ್‌ ಹಾಗೂ ಅಮ್ರಿಟಾ ಕ್ಯೂಟ್‌ ಜೋಡಿ ಅಂತಾ ಕರೆಸಿಕೊಂಡಿದ್ದಾರೆ. ಇವರಿಬ್ಬರ ಮಧ್ಯೆ ಇರೋ ಭಾಂದವ್ಯ ನೋಡಿ. ಈ ಜೋಡಿ ಮಧ್ಯೆ ಸ್ಪೆಷಲ್‌ ಫೀಲಿಂಗ್ಸ್‌ ಇದೆ..  ಶೋ ಮುಗಿದ ಮೇಲೆ ಇವರಿಬ್ರು ಮದುವೆ ಆಗ್ತಾರೆ ಅಂತಾ ಹೇಳಲಾಗ್ತಿತ್ತು.. ಆದ್ರೆ ಇವರಿಬ್ರು ನಮ್ಮ ಮಧ್ಯೆ ಆತರ ಏನು ಇಲ್ಲ ಜಸ್ಟ್‌ ಫ್ರೆಂಡ್ಸ್‌ ಅಂತಾ ಸ್ಪಷ್ಟನೆ ನೀಡಿದ್ರು.. ಆದ್ರೆ ಇವರಿಬ್ಬರು ನಿಜ ಜೀವನದಲ್ಲೂ ಜೋಡಿ ಆಗ್ಲಿ.. ಹಾಗೇ ಈ ಶೋ ವಿನ್ನರ್‌ ಆಗ್ಲಿ  ಅಂತಾ ಅವ್ರ ಫ್ಯಾನ್ಸ್‌ ಹೇಳ್ತಿದ್ದಾರೆ.

ಇನ್ನು ರಕ್ಷಕ್‌ ಬುಲೆಟ್‌ ಹಾಗೂ ರಮೋಲಾ ಜೋಡಿ ಭರ್ಜರಿ ಬ್ಯಾಚುಲರ್ಸ್‌ ಸಖತ್‌ ಹೈಲೈಟ್‌ ಆಗಿದ್ದಾರೆ. ರಕ್ಷಕ್‌ ಈ ಶೋಗೆ ಬಂದ್ಮೇಲೆ ಸಾಕಷ್ಟು ಬದಲಾಗಿದ್ದಾರೆ. ಅದಕ್ಕೆ ಕಾರಣ ರಮೋಲಾ.. ಆರಂಭದಲ್ಲಿ ರಕ್ಷಕ್‌ ಆಟಿಟ್ಯೂಡ್‌ ಮನುಷ್ಯ.. ಕೋಪಿಷ್ಟ ಅಂತ ಕರೆಸಿಕೊಂಡಿದ್ರು.. ಆದ್ರೆ ಬರು ಬರುತ್ತಾ ರಕ್ಷಕ್‌ ಸಾಫ್ಟ್‌ ಮನುಷ್ಯ ಆಗಿದ್ದಾರೆ. ಇದೀಗ ರಕ್ಷಕ್‌ ರಮೋಲಾ ವಿನ್ನರ್‌ ಆದ್ರೆ ಒಳ್ಳೆದು ಅಂತಾ ಕೆಲವರು ಹೇಳ್ತಿದ್ದಾರೆ.

ಡ್ರೋನ್‌ ಪ್ರತಾಪ್‌ ಹಾಗೂ ಗಗನಾ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಆರಂಭದಿಂದಲೂ ಸದ್ದು ಮಾಡ್ತಿದ್ದಾರೆ. ಡ್ರೋನ್‌ ಪ್ರತಾಪ್‌ ಗಗನಾಗೆ ಸಾಕಷ್ಟು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಗಗನಾಳನ್ನ ಕರ್ಕೊಂಡು ಹೋಗಿದ್ರು.. ಆಕೆಯ ಒಳಿತಿಗಾಗಿ ಹರಕೆ ಹೊತ್ತಿದ್ರು.. ಆಕೆಯ ಬೇಕು ಬೇಡಗಳನ್ನ ತಿಳಿದುಕೊಂಡಿದ್ರು.. ಡ್ರೋನ್‌ ಪ್ರತಾಪ್‌ನಂತಹ ಹುಡುಗ ಸಿಕ್ರೆ ಒಳ್ಳೆದು. ಗಗನಾ ತುಂಬಾ ಲಕ್ಕಿ ಅಂತಾ ಯುವತಿಯರು ಹೇಳಿದ್ದೂ ಇದೆ. ಹೀಗಾಗಿ ಗಗನಾ ಡ್ರೋನ್‌ಪ್ರತಾಪ್‌ ಜೋಡಿ ವಿನ್‌ ಆಗ್ಲಿ ಅಂತಾ ಅವ್ರ ಫ್ಯಾನ್ಸ್‌ ಹೇಳ್ತಿದ್ದಾರೆ.

ಒಟ್ಟಾರೆ  ಇಷ್ಟು ದಿನ ವೀಕ್ಷಕರನ್ನು ನಕ್ಕು ನಕಲಿಸಿದ್ದ ಜೋಡಿಗಳು ಈ  ವಿದಾಯ ಹೇಳೋದಕ್ಕೆ ಸಜ್ಜಾಗಿದ್ದಾರೆ. ಭಾನುವಾರ ಗ್ರ್ಯಾಂಡ್​ ಫಿನಾಲೆ ನಡೆಯಲಿದ್ದು ಯಾವ ಜೋಡಿ ವಿನ್ನರ್​ ಅನ್ನೋದು ಗೊತ್ತಾಗಲಿದೆ.

Shwetha M