ಕಡಿಮೆ ಶೋ.. ಪ್ರಚಾರವಿಲ್ಲದೇ ಇದ್ರೂ ಗೆದ್ದ ಸು ಫ್ರಮ್ ಸೋ! – ಮೊದಲ ದಿನದ ಕಲೆಕ್ಷನ್ ಎಷ್ಟು?

ಪ್ರಚಾರವಿಲ್ಲದೇ ತೆರೆಗೆ ಬಂದ ಸಿನಿಮಾ ಸು ಫ್ರಮ್ ಸೋ.. ರಿಲೀಸ್ ಆದ ಒಂದೇ ದಿನಕ್ಕೆ ಈ ಸಿನಿಮಾ ಈಗ ರಾಜ್ಯದಾದ್ಯಂತ ಭಾರಿ ಸದ್ದು ಮಾಡ್ತಿದೆ. ಇದೀಗ ಬಾಕ್ಸ್ಆಫೀಸ್ನಲ್ಲೂ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ: ಅಡಿಕೆ ಎಂದು ಭಾವಿಸಿ ಸಿಡಿಮದ್ದನ್ನ ಕಲ್ಲಿನಿಂದ ಜಜ್ಜಿದ ಮಹಿಳೆ!
ರಾಜ್ ವಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ನಿನ್ನೆಯಷ್ಟೇ ತೆರೆಕಂಡಿದೆ. ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ಸೇರಿದಂತೆ ರಾಜ್ಯದ ಕೆಲ ಥಿಯೇಟರ್ಗಳಲ್ಲಿ ಮಾತ್ರ ಸಿನಿಮಾ ರಿಲೀಸ್ ಮಾಡಲಾಗಿದೆ. ಕಡಿಮೆ ಶೋ ಇದ್ರೂ ಕೂಡ ಈ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಇದೀಗ ಈ ಸಿನಿಮಾ ಒಂದೇ ದಿನದಲ್ಲಿ ಗಲ್ಲಾಪೆಟ್ಟಿಗೆಯಲ್ಲೂ ಕಮಾಲ್ ಮಾಡಿದೆ. ಸು ಫ್ರಮ ಸೋ ಚಿತ್ರ ಮೊದಲ ದಿನ ಸುಮಾರು 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಅಂದ್ಹಾಗೆ ಸು ಫ್ರಮ್ ಸೋ ಸಿನಿಮಾ ಇದು ಹೊಸ ಕಲಾವಿದರು, ಹೊಸ ನಿರ್ದೇಶಕ ಮಾಡಿದ ಚಿತ್ರ. ಈ ಚಿತ್ರವನ್ನು ಜನರು ಇಷ್ಟು ಮೆಚ್ಚಿಕೊಂಡು ಮೊದಲ ದಿನ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ ಎಂದರೆ ಅದನ್ನು ಮೆಚ್ಚಲೇ ಬೇಕು. ಈ ಚಿತ್ರಕ್ಕೆ ಇಂದು ಬೆಂಗಳೂರಿನಲ್ಲಿ 220 ಶೋಗಳು ಸಿಕ್ಕಿವೆ. ಈಗಾಗಲೇ ಚಿತ್ರಕ್ಕೆ ಬಾಯ್ಮಾತಿನ ಪ್ರಚಾರ ಸಿಕ್ಕಿ ಆಗಿದೆ. ಈ ಕಾರಣದಿಂದಲೇ ಚಿತ್ರ ಬಹುತೇಕ ಕಡೆಗಳಲ್ಲಿ ಹೌಸಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಶೋಗಳ ಸಂಖ್ಯೆ ಇನ್ನಷ್ಟು ಏರಿಕೆ ಕಂಡರೆ ಸಿನಿಮಾದ ಕಲೆಕ್ಷನ್ ಎರಿಕೆ ಆಗುವ ಸೂಚನೆ ಸಿಕ್ಕಿದೆ. ವೀಕೆಂಡ್ನ ಎಲ್ಲಾ ಶೋಗಳು ಬಹುತೇಕ್ ಈಗಲೇ ಬುಕ್ ಆಗಿದೆ ಅನ್ನೋದು ವಿಶೇಷ.

ನೋಡಿರಿ

