ಡೆವಿಲ್‌ ಶೂಟಿಂಗ್‌ ಮುಗಿಸಿ ಥೈಲಾಂಡ್‌ನಿಂದ ಬೆಂಗಳೂರಿಗೆ ಬಂದ ದರ್ಶನ್‌!

ಡೆವಿಲ್‌ ಶೂಟಿಂಗ್‌ ಮುಗಿಸಿ ಥೈಲಾಂಡ್‌ನಿಂದ ಬೆಂಗಳೂರಿಗೆ ಬಂದ ದರ್ಶನ್‌!

ಡೆವಿಲ್‌ ಸಿನಿಮಾದ ಸಾಂಗ್‌ ಶೂಟಿಂಗ್‌ಗಾಗಿ ಥೈಲಾಂಡ್‌ಗೆ ತೆರಳಿದ್ದ ನಟ ದರ್ಶನ್‌ ಈಗ ಬೆಂಗಳೂರಿಗೆ ವಾಪಾಸ್‌ ಆಗಿದ್ದಾರೆ. ಶುಕ್ರವಾರ ರಾತ್ರಿ ಮಡದಿ ವಿಜಯಲಕ್ಷ್ಮೀ ಜೊತೆ ಬಂದಿದ್ದಾರೆ.

ಇದನ್ನೂ ಓದಿ:  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕನ್ನಡತಿ – ನಿವೃತ್ತಿ ಘೋಷಿಸಿದ ವೇದಾ ಕೃಷ್ಣಮೂರ್ತಿ

ಜುಲೈ 10 ರಂದು ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಮಗನ ಜೊತೆ ಥೈಲಾಂಡ್‌ಗೆ ಹೋಗಿದ್ರು. ಡೆವಿಲ್‌ ಸಿನಿಮಾ ಶೂಟಿಂಗ್‌ಗಾಗಿ ತೆರಳಿದ್ದ ದರ್ಶನ್‌ ಸುಮಾರು 10 ದಿನಗಳ ಕಾಲ ಅಲ್ಲೇ ಉಳಿದಿದ್ರು. ಶುಕ್ರವಾರ ರಾತ್ರಿ 11:45ರ ವಿಮಾನದಲ್ಲಿ ದೇವನಹಳ್ಳಿಯ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಟ ದರ್ಶನ್ ಆಗಮಿಸಿದ್ದಾರೆ.

ನಟ ದರ್ಶನ್‌ ಥೈಲಾಂಡ್‌ನಲ್ಲಿ ಫುಲ್‌ ಜಾಲಿ ಮೂಡ್‌ನಲ್ಲಿದ್ರು. ಶೂಟಿಂಗ್‌ ಬಳಿಕ ಥೈಲ್ಯಾಂಡ್‌ ಸಮುದ್ರದಲ್ಲಿ ದರ್ಶನ್‌ ಯಾಚ್‌ನಲ್ಲಿ ಜಾಲಿ ರೈಡ್ ಮಾಡಿದ್ರು. ಅದಾದ ಬಳಿಕ ಫ್ರೆಂಡ್ಸ್‌ ಜೊತೆ ಪಾರ್ಟಿ ಮಾಡಿದ್ರು. ಶೂಟಿಂಗ್‌ ಮುಗಿದ ಬಳಿಕ ಕೆಲ ದಿನ ಅಲ್ಲೇ ವಿಶ್ರಾಂತಿ ಪಡೆದ ದರ್ಶನ್‌ ಫ್ಯಾಮಿಲಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದು, ಒಂದು ವಾರದಲ್ಲಿ ಆದೇಶ ಹೊರಡಿಸಲಿದೆ.

Shwetha M