ನಾನು ಸ್ನಾನ ಮಾಡಲ್ಲ.. ಬಿಡಮ್ಮಾ.. – ಮರಿಗೆ ಸ್ನಾನ ಮಾಡಿಸಲು ಒದ್ದಾಡಿದ ತಾಯಾನೆ!

ಸ್ನಾನ ಅಂದ್ರೆ ಪುಟ್ಟ ಮಕ್ಕಳಿಗೆ ಇಷ್ಟವೇ ಇರಲ್ಲ.. ಮಕ್ಕಳನ್ನ ಸ್ನಾನ ಮಾಡಿಸೋದೇ ತಾಯಂದಿರಿಗೆ ದೊಡ್ಡ ತಲೆನೋವು.. ಸ್ನಾನದಿಂದ ತಪ್ಪಿಸಿಕೊಳ್ಳಲು ಮಕ್ಕಳು ದಿನಕ್ಕೊಂದು ಡ್ರಾಮಾ ಆಡ್ತಾರೆ. ಹೇಗಾದ್ರೂ ಮಂಗ ಮಾಡಿ ಮಕ್ಕಳಿಗೆ ಸ್ನಾನ ಮಾಡ್ತಿಸ್ತಾರೆ. ಇಲ್ಲೊಂದು ಆನೆಗೆ ತನ್ನ ಮಗುವಿಗೆ ಸ್ನಾನ ಮಾಡಿಸಲು ಹೊರಟಿದೆ. ಆನೆ ಮರಿಯ ತುಂಟಾಟಕ್ಕೆ ತಾಯಾನೆ ಸುಸ್ತಾಗಿ ಹೋಗಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ:ಸತ್ತಿದ್ದು ರಾಮಾಚಾರಿ ಅಲ್ಲ ಕೃಷ್ಣ!? – ಹೀರೋ ಫಿನಿಶ್.. ಇದೆಂಥಾ ಟ್ವಿಸ್ಟ್ ?
ಕೆಲ ಪ್ರಾಣಿಗಳು ಮನುಷ್ಯರಂತೆ ವರ್ತಿಸುತ್ತವೆ. ಇದ್ರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕಾಣಸಿಗುತ್ತವೆ. ಇಲ್ಲೊಂದು ತಾಯಿ ಆನೆಯು ಮರಿಯಾನೆಗೆ ಸ್ನಾನ ಮಾಡಿಸಲು ಒದ್ದಾಡುತ್ತಿದೆ. ಆನೆಯೂ ತನ್ನ ಮುಂಭಾಗದಲ್ಲಿ ಕುಳಿತುಕೊಂಡ ಮರಿಯಾನೆಗೆ ಸ್ನಾನ ಮಾಡಿಸಿದ್ದುಈ ದೃಶ್ಯವೂ ಎಲ್ಲರ ಗಮನ ಸೆಳೆದಿದೆ.
elephantsofworld ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಈ ವಿಡಿಯೋದಲ್ಲಿ ತಾಯಾನೆಯು ಮರಿಯಾನೆ ನಡುವಿನ ಬಾಂಧವ್ಯವನ್ನು ಕಾಣಬಹುದು. ಈ ವಿಡಿಯೋಗೆ ಅಮ್ಮ ಇದ್ದಲ್ಲಿ ಪ್ರತಿಯೊಂದು ಚೆನ್ನಾಗಿರುತ್ತದೆ ಎಂದು ಶೀರ್ಷಿಕೆಯನ್ನು ನೀಡಲಾಗಿದೆ. ಆನೆಯೊಂದು ತನ್ನ ಎರಡು ಕಾಲುಗಳನ್ನು ನೆಲಕ್ಕೆ ಊರಿ ಕುಳಿತುಕೊಂಡಿದೆ. ಎರಡು ಕಾಲುಗಳ ನಡುವೆ ಮುದ್ದು ಕಂದಮ್ಮನನ್ನು ಕೂರಿಸಿಕೊಂಡಿದೆ. ಪೈಪ್‌ನಿಂದು ವ್ಯಕ್ತಿಯೊಬ್ಬರು ನೀರು ಹಾಕುತ್ತಿದ್ದು, ತಾಯಾನೆ ತನ್ನ ಸೊಂಡಿಲಿನಿಂದ ನೀರನ್ನು ಹಿಡಿದು ಮರಿಯಾನೆಯ ಮುಖ ಹಾಗೂ ತಲೆಗೆ ಹಾಕುತ್ತಿದೆ. ತನ್ನ ಸೊಂಡಿಲಿನಿಂದ ಕಂದಮ್ಮನ ಮುಖವನ್ನು ಉಜ್ಜುತ್ತಾ ಸ್ನಾನ ಮಾಡಿಸುತ್ತಿದೆ. ಮೈ ಮೇಲೆ ತಣ್ಣನೆಯ ನೀರು ಬೀಳುತ್ತಿದ್ದಂತೆ ಮರಿಯಾನೆಯು ಓಡಲು ಪ್ರಯತ್ನಿಸುತ್ತಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ತಾಯಿ ತನ್ನ ಮಗುವಿಗಾಗಿ ಎಲ್ಲವನ್ನು ಪ್ರೀತಿಯಿಂದಲೇ ಮಾಡುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

