ಪ್ಯಾಸೆಂಜರ್ ಬ್ಯಾಗ್‌ಗೆ 3. 5 ಕೆಜಿ ಗೋಲ್ಡ್ ಬಿಸ್ಕೆಟ್ ಅಂಟಿಸಿದ ಭೂಪ – ಆಮೇಲೆ ಏನಾಯ್ತು ಗೊತ್ತಾ?

ಪ್ಯಾಸೆಂಜರ್ ಬ್ಯಾಗ್‌ಗೆ 3. 5 ಕೆಜಿ ಗೋಲ್ಡ್ ಬಿಸ್ಕೆಟ್ ಅಂಟಿಸಿದ ಭೂಪ – ಆಮೇಲೆ ಏನಾಯ್ತು ಗೊತ್ತಾ?

ವಿದೇಶದಿಂದ ಅಕ್ರಮವಾಗಿ ಚಿನ್ನ ತಂದು ಸಿಕ್ಕಿಹಾಕಿಕೊಂಡಿರುವ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತೆ. ಇದೀಗ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್‌ ಬ್ಯಾಗ್‌ಗೆ ಗೋಲ್ಡ್‌  ಬಿಸ್ಕೆಟ್‌ ಹಾಕಿ ಹೋಗಿರುವ ಘಟನೆ ನಡೆದಿದೆ.

ಇದನ್ನೂ ಓದಿ : ಸತ್ತಿದ್ದು ರಾಮಾಚಾರಿ ಅಲ್ಲ ಕೃಷ್ಣ!? – ಹೀರೋ ಫಿನಿಶ್‌.. ಇದೆಂಥಾ ಟ್ವಿಸ್ಟ್‌ ?

ದುಬೈನಿಂದ ಬೆಂಗಳೂರಿಗೆ ಆಗಮಿಸಿದ್ದ ಭೂಪನೊಬ್ಬ, ತನ್ನ ಬಳಿ ಇದ್ದ 3.5 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆಂಬ ಭಯದಿಂದ ತನ್ನ ಟ್ರಾಲಿ ಬ್ಯಾಗ್‌ನಿಂದ ಸಹ ಪ್ರಯಾಣಿಕನ ಟ್ರಾಲಿ ಬ್ಯಾಗ್‌ಗೆ ಹಾಕಿದ್ದಾನೆ. ಬೇರೊಬ್ಬ ಪ್ರಯಾಣಿಕನ ಲಗೇಜ್ ಟ್ರಾಲಿಗೆ ಚಿನ್ನದ ಗಟ್ಟಿಗಳನ್ನು ಹಾಕಿದ್ದಾನೆ.   ಟ್ರಾಲಿ  ಬ್ಯಾಗ್‌ ಮಾಲೀಕ ಬ್ಯಾಗ್‌ ಎಳೆದುಕೊಂಡು ಹೋಗುವಾಗ ಚಿನ್ನ ಬ್ಯಾಗ್ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಪ್ರಯಾಣಿಕ ಚಿನ್ನದ ಬ್ಯಾಗ್‌ನ್ನು ಡಿಆರ್‌ಐ ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿದ್ದಾನೆ. ಅಧಿಕಾರಿಗಳು ಬ್ಯಾಗ್ ಪರಿಶೀಲನೆ ಮಾಡಿದಾಗ 3.5 ಕೆಜಿ ಚಿನ್ನದ ಬಿಸ್ಕೆಟ್ ಇರುವುದು ಪತ್ತೆಯಾಗಿದೆ.

ಅಧಿಕಾರಿಗಳು ಮಾಲೀಕನ ವಿಚಾರಣೆ ನಡೆಸಿದಾಗ ಚಿನ್ನಕ್ಕೂ ಆತನಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಬಹಿರಂಗ ಆಗಿದೆ. ಬಳಿಕ ಸ್ಮಗ್ಲರ್, ಪ್ರಯಾಣಿಕನ ಬ್ಯಾಗ್‌ಗೆ ಚಿನ್ನ ಅಂಟಿಸಿ ಪರಾರಿಯಾಗಿರುವುದು ತಿಳಿದುಬಂದಿದೆ. ಸದ್ಯ ಡಿಆರ್‌ಐ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಸ್ಮಗ್ಲರ್‌ಗಾಗಿ ಹುಡುಕಾಟ ನಡೆಸಿದ್ದಾರೆ.

Shwetha M