ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡ್ತಿದ್ದ ಆಪ್‌ಗಳಿಗೆ ಶಾಕ್‌ -25 APP ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ!

ಅಶ್ಲೀಲ ಕಂಟೆಂಟ್‌ ಪ್ರಸಾರ ಮಾಡ್ತಿದ್ದ ಆಪ್‌ಗಳಿಗೆ ಶಾಕ್‌ -25 APP ಬ್ಯಾನ್‌ ಮಾಡಿದ ಕೇಂದ್ರ ಸರ್ಕಾರ!

ಅಶ್ಲೀಲ ಕಂಟೆಂಟ್‌ಗಳನ್ನ ಪ್ರಸಾರ ಮಾಡ್ತಿದ್ದ ಕೆಲ ಆಪ್‌ಗಳನ್ನ ಕೇಂದ್ರ ಸರ್ಕಾರ ಬ್ಯಾನ್‌ ಮಾಡಿದೆ. ಸುಮಾರು 25 ಕ್ಕೂ ಹೆಚ್ಚು ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಕರ್ನಾಟಕದ ಹಲವೆಡೆ ಗೊಬ್ಬರಕ್ಕಾಗಿ ಗಲಾಟೆ- ರೈತರ ಆಕ್ರೋಶಕ್ಕೆ ಮಣಿದ ಸಿಎಂ, ಕೇಂದ್ರ ಸಚಿವ ಜೆಪಿ ನಡ್ಡಾಗೆ ಸಿದ್ದರಾಮಯ್ಯ ಪತ್ರ

ಕಳೆದ ಮೇ ತಿಂಗಳಲ್ಲಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಅಜಾಜ್ ಖಾನ್ ನಡೆಸಿಕೊಡುವ ‘ಹೌಸ್ ಅರೆಸ್ಟ್’ ವೆಬ್ ಸರಣಿಯ ಕ್ಲಿಪ್ ಅಶ್ಲೀಲ ವಿಷಯಕ್ಕಾಗಿ ವೈರಲ್ ಆದ ನಂತರ OTT ಪ್ಲಾಟ್‌ಫಾರ್ಮ್ ULLU ಟೀಕೆಗೆ ಗುರಿಯಾಗಿತ್ತು. ಇಂತಹ ಕಾರ್ಯಕ್ರಮಗಳು ಸಮಾಜದ ಮೇಲೆ ಪರಿಣಾಮ ಬೀರುತ್ತವೆ ಎಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ 25 ಆಪ್‌ಗಳನ್ನ ನಿಷೇಧ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಸೆಕ್ಷನ್ 67 ಮತ್ತು ಸೆಕ್ಷನ್ 67A, ಭಾರತೀಯ ನ್ಯಾಯ ಸಂಹಿತಾ, 2023 ರ ಸೆಕ್ಷನ್ 294,ಮಹಿಳೆಯರ ಅಸಭ್ಯ ಪ್ರದರ್ಶನ (ನಿಷೇಧ) ಕಾಯ್ದೆ 1986 ರ ಸೆಕ್ಷನ್ 4 ಉಲ್ಲಂಘಿಸಿದ್ದಕ್ಕೆ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

ಭಾರತದಲ್ಲಿ ಈ ಪ್ಲಾಟ್‌ಫಾರ್ಮ್‌ಗಳಿಗೆ ಜನರು ಭೇಟಿ ನೀಡದಂತೆ ತಡೆಯಬೇಕೆಂದು ಇಂಟರ್ನೆಟ್ ಸೇವೆಯನ್ನು ನೀಡುವ ಕಂಪನಿಗಳಿಗೆ ಅಧಿಕೃತ ನಿರ್ದೇಶನವನ್ನು ನೀಡಲಾಗಿದೆ. ಐಎಸ್‌ಪಿ ಕಂಪನಿಗಳು ಐಟಿ ಕಾಯ್ದೆಯ ಸೆಕ್ಷನ್ 79(3)(b) ಪ್ರಕಾರ ಅಧಿಸೂಚನೆ ಹೊರಡಿಸಿದ ನಂತರ ಕಾನೂನುಬಾಹಿರ ವಿಷಯದ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಆದೇಶವನ್ನು ಪಾಲಿಸಲು ವಿಫಲವಾದರೆ ವೇದಿಕೆಗಳು ಮತ್ತು ಸೇವಾ ಪೂರೈಕೆದಾರರಿಗೆ ಸಾಮಾನ್ಯವಾಗಿ ನೀಡಲಾಗುವ ಕಾನೂನು ವಿನಾಯಿತಿಯನ್ನು ತೆಗೆಯಲಾಗುತ್ತದೆ ಎಂದು ಸೂಚಿಸಲಾಗಿದೆ.

ಯಾವುದಕ್ಕೆ ನಿಷೇಧ?

ALTT, ULLU, Big Shots App, Desiflix, Boomex, Navarasa Lite, Gulab App, Kangan App, Bull App, Jalva App, Wow Entertainment, Look Entertainment, Hitprime, Feneo, ShowX, Sol Talkies, Adda TV, HotX VIP, Hulchul App, MoodX, NeonX VIP, Fugi, Mojflix, and Triflicks.MIB

Shwetha M