ನನಗೆ ಹಾರ್ಟ್ ಬ್ರೇಕ್ ಆಗಿದೆ.. ಸಾಕಷ್ಟು ಪಾಠ ಕಲಿತಿದ್ದೇನೆ – ಪ್ರೀತಿ, ಮದುವೆ ಬಗ್ಗೆ ನಟಿ ನಿತ್ಯಾ ಮೆನನ್ ಮಾತು!

ವಯಸ್ಸು 30 ಆದ್ರೆ ಸಾಕು ಮದ್ವೆ ಯಾವಾಗ ಅನ್ನೋ ಪ್ರಶ್ನೆ ಎದುರಾಗುತ್ತೆ. ಇದೀ ನಟಿ ನಿತ್ಯಾ ಮೆನನ್ ಗೂ ಇದೇ ಪ್ರಶ್ನೆ ಎದುರಾಗ್ತಿದೆ. 37 ವರ್ಷ ಆದ್ರೂ ಯಾಕೆ ಮದುವೆ ಆಗಿಲ್ಲ ಅಂತ ಫ್ಯಾನ್ಸ್ ಕೇಳ್ತಾನೆ ಇದ್ದಾರೆ. ಇದೀಗ ನಟಿ ಈಗ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಇನ್ನೂ ಮದ್ವೆ ಆಗದೇ ಇರಲು ಕಾರಣವೇನು ಅನ್ನೋದನ್ನ ತಿಳಿಸಿದ್ದಾರೆ.
ಇದನೂ ಓದಿ: SSLC ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ – ಇನ್ಮುಂದೆ ಪರೀಕ್ಷೆಯಲ್ಲಿ 30 ಅಂಕ ಗಳಿಸಿದ್ರೆ ಪಾಸ್!
ಅನೇಕ ಸೆಲೆಬ್ರಿಟಿಗಳು 30 ವರ್ಷ ದಾಟಿದ್ಮೇಲೆನೇ ಮದುವೆ ಆಗ್ತಾರೆ. ಬೇಗ ಮದುವೆ ಆದ್ರೆ ಫ್ಯಾಮಿಲಿ ಕಮಿಟ್ ಮೆಂಟ್ ಇರುತ್ತೆ. ಕೆರಿಯರ್ ಕೂಡ ಹಾಳಾಗುತ್ತೆ ಅನ್ನೋ ಮಾತು ಕೂಡ ಇದೆ. ಆದ್ರೂ ಫ್ಯಾನ್ಸ್ ಮಾತ್ರ ಸೆಲೆಬ್ರಿಟಿಗಳ ಬಳಿ ಮದ್ವೆ ಯಾವಾಗ ಅಂತ ಕೇಳ್ತಾ ಇರ್ತಾರೆ. ನಟಿ ನಿತ್ಯಾ ಮೆನನ್ ಸಿಂಗಲ್. ಈಗಾಗಲೇ ಅವ್ರ ಜೊತೆ ಸಾಕಷ್ಟು ಹೆಸ್ರು ತಳುಕು ಹಾಕಿಕೊಂಡಿತ್ತು. ಆದ್ರೆ ಮದುವೆ ಹಂತಕ್ಕೆ ಹೋಗಿಲ್ಲ. ಇದೀಗ ಮದುವೆ ಆಗದೇ ಇರಲು ಕಾರಣವೇನು ಅನ್ನೋದ್ರ ಬಗ್ಗೆ ಮಾತನಾಡಿದ್ದಾರೆ. ನಾನು ಚಿಕ್ಕವಳಿದ್ದಾಗ ಪಾರ್ಟ್ನರ್ ಹುಡುಕೋದು ಮುಖ್ಯ ಎಂದುಕೊಂಡಿದ್ದೆ. ಆದರೆ, ವರ್ಷಗಳು ಬದಲಾದಂತೆ ನನ್ನ ಆಲೋಚನೆ ಬದಲಾಯಿತು. ನನಗೆ ಯಾರಾದರೂ ಸಿಕ್ಕರೆ ಖುಷಿ. ಸಿಗಲಿಲ್ಲ ಎಂದರೂ ಖುಷಿ. ಈ ಬಗ್ಗೆ ನನಗೇನು ಬೇಜಾರಿಲ್ಲ ಅಂತ ಹೇಳಿದ್ದಾರೆ.
ಸಾಮಾನ್ಯವಾಗಿ ಹಾರ್ಟ್ ಬ್ರೇಕ್ ಆದಾಗ ಯಾರಿಗಾದರೂ ಬೇಸರ ಆಗಿಯೇ ಆಗುತ್ತದೆ. ನಿತ್ಯಾ ಮೆನನ್ ಕೂಡ ಹಾಗೆಯೇ ಹೇಳಿದ್ದಾರೆ. ‘ಪ್ರತಿ ಹಂತದಲ್ಲೂ ನನಗೆ ಹಾರ್ಟ್ ಬ್ರೇಕ್ ಆಗಿದೆ. ಅದು ನನಗೆ ಪ್ರತಿ ಬಾರಿಯೂ ನನಗೆ ಮನಸ್ಸು ಒಡೆದಗ ಅದು ಜನರ ಉದ್ದೇಶಗಳ ಬಗ್ಗೆ ನನಗೆ ಕಲಿಸಿತು. ನಾನು ಹುಡುಕುತ್ತಿರುವುದು ತಪ್ಪೆಂದು ಅರಿತುಕೊಳ್ಳಲು ಸಹಾಯ ಮಾಡಿತು. ಆದರೆ, ಅವರು ಎಲ್ಲಿಯೂ ಯಾರನ್ನು ಪ್ರೀತಿ ಮಾಡಿದ್ದೆ, ಯಾರು ಮೋಸ ಮಾಡಿದರು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅವರು ಮಾತನಾಡಿಲ್ಲ. ಈ ವಿಚಾರವನ್ನು ಅವರು ಗುಟ್ಟಾಗಿಯೇ ಇಟ್ಟಿದ್ದಾರೆ ಎನ್ನಬಹುದು.

ನೋಡಿರಿ

