ಸುಬ್ಬ- ಸುಬ್ಬಿ ಸುಪ್ರೀಂ ಭವಿಷ್ಯ – ಫಾರಿನ್ನಿಂದ ಬರ್ತಿದ್ದಂತೆ DBOSS ಲಾಕ್?
ವ್ಯರ್ಥ ಆಗುತ್ತಾ ವಿಜಯಲಕ್ಷ್ಮೀ ಪ್ರಯತ್ನ?

ರೇಣುಕಾಸ್ವಾಮಿ ಮರ್ಡರ್ ಕೇಸ್ನ ಎಲ್ಲಾ ವಿಘ್ನ ಮುಗಿತು.. ಇನ್ನೂ ಹಾಯ್ ಆಗಿ ಇರಬಹುದು.. ಸಿನಿಮಾ ಶೂಟಿಂಗ್ ಅಂತ ಮತ್ತೆ ಹಳೇ ಲೈಫ್ ಲೀಡ್ ಮಾಡಬಹುದು ಅಂತ ಡಿ ಬಾಸ್ ದರ್ಶನ್ ಅಂದ್ಕೊಂಡಿದ್ರು. ದರ್ಶನ್ ಮಾತ್ರವಲ್ಲ ಪವಿತ್ರಗೌಡ ಕೂಡ ದಿನಕ್ಕೊಂದು ಬಣ್ಣ ಬಣ್ಣದ ಪೋಸ್ಟ್ ಹಾಕ್ತಾ ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದರು.. ಆದ್ರೆ ಈಗ ಡಿ ಗ್ಯಾಂಗ್ ಸುಪ್ರೀಂ ಕೋರ್ಟ್ ಬಿಗ್ ಶಾಕ್ ಕೊಡೋ ಎಲ್ಲಾ ಲಕ್ಷಣ ಎದ್ದು ಕಾಣುತ್ತಿದೆ.. Vis Flow..
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಮಾನ್ಯ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ. ದರ್ಶನ್ಗೆ ಕರ್ನಾಟಕ ಹೈಕೋರ್ಟ್ ಡಿಸೆಂಬರ್ 13, 2024 ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ಬೆಂಗಳೂರು ಪೊಲೀಸರು ಇದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಜಾಮೀನಿನ ವಿರುದ್ಧ ವಾದಿಸುವಾಗ, ಪೊಲೀಸರ ಪರ ವಕೀಲರು ದರ್ಶನ್ನ ಹಿಂದಿನ ಕ್ರಿಮಿನಲ್ ಇತಿಹಾಸವನ್ನು ಎತ್ತಿ ತೋರಿಸಿದ್ದಾರೆ. ಹೀಗಾಗಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಅವರು ಸೇರಿ ಒಟ್ಟು 7 ಆರೋಪಿಗಳ ಜಾಮೀನು ರದ್ದು ಬಗ್ಗೆ ಭಾರಿ ಮಹತ್ವದ ವಿಚಾರಣೆ ನಡೆಯಿತು. Vis Flow
ದರ್ಶನ್ ಪರ ವಕೀಲರಿಗೆ ಬೆಂಡೆತ್ತಿದ ಜಡ್ಜ್
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ಗೆ ಕರ್ನಾಟಕ ಹೈಕೋರ್ಟ್ನಿಂದ ಜಾಮೀನು ಮಂಜೂರಾಗಿದ್ದರೂ, ಬೆಂಗಳೂರು ಪೊಲೀಸರು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನ ಮೆಟ್ಟಿಲೇರಿದ್ದರು. ಈ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ದರ್ಶನ್ನ ಪರ ವಕೀಲ ಸಿದ್ದಾರ್ಥ್ ದವೆಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಲ್ಲಿ ಜಾಮೀನಿನ ಅಗತ್ಯತೆ, ಸಾಕ್ಷಿಗಳ ಹೇಳಿಕೆ, ಕ್ರಿಮಿನಲ್ ಸಂಚು, ಮತ್ತು ಥರ್ಡ್ ಗ್ರೇಡ್ ಟ್ರೀಟ್ಮೆಂಟ್ಗೆ ಸಂಬಂಧಿಸಿದ ವಿಷಯಗಳು ಒಳಗೊಂಡಿವೆ.
ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ಎಂದು ಜಡ್ಜ್!
ಈ ಕೊಲೆ ಕೇವಲ ಆಕಸ್ಮಿಕ ಘಟನೆಯಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ರೂಪಿಸಲಾದ ಕ್ರಿಮಿನಲ್ ಸಂಚಿನ ಭಾಗವಾಗಿದೆ ಎಂದು ಪೊಲೀಸರು ವಾದಿಸಿದ್ದರು, ಇದನ್ನೇ ಜಡ್ಜ್ ಕೂಡ ಹೇಳಿದ್ದಾರೆ. ರೇಣುಕಾಸ್ವಾಮಿಗೆ ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ನೀಡಲಾಗಿದೆ ಎಂಬ ಆರೋಪವೂ ಗಂಭೀರವಾಗಿದೆ, ಇದರಿಂದ ಆರೋಪಿಗಳ ವಿರುದ್ಧ ತನಿಖೆ ತೀವ್ರಗೊಂಡಿದೆ.
ರೇಣುಕಾಸ್ವಾಮಿ ಕೇಸ್ ಬಗ್ಗೆ ಜಡ್ಜ್ಗೆ ಬಿಡಿಸಿ ಹೇಳಿದ ಲಾಯರ್
ಪ್ರಕರಣದಲ್ಲಿ ಆರೋಪಿಗಳ ಪಾತ್ರ ಏನು ಎನ್ನುವುದನ್ನು ಸರ್ಕಾರದ ಪರ ವಕೀಲ ಸಿದ್ದಾರ್ಥ್ ಲೂತ್ರಾ ಎಳೆ ಎಳೆಯಾಗಿ ಕೋರ್ಟ್ ಮುಂದೆ ಬಿಚ್ಚಿಟ್ಟರು. ಎಫ್ಎಸ್ಎಲ್ ವರದಿ, ಪೋಸ್ಟ್ ಮಾರ್ಟಂ ವರದಿಯನ್ನು ಕೂಡ ಅವರು ಉಲ್ಲೇಖಿಸಿದರು. ಹತ್ಯೆಗೆ ಮೊದಲು ರೇಣುಕಾಸ್ವಾಮಿ, ಪವಿತ್ರಾ ಅವರಿಗೆ ಮೆಸೇಜ್ ಮಾಡಿದ್ದನು. ಈ ವಿಷಯವನ್ನು ಪವಿತ್ರಾ, ಎ-3 ಗೆ ತಿಳಿಸಿದ್ದಾಳೆ. ನಂತರ ಎ-3, ಪವಿತ್ರಾ ಎಂಬಂತೆ ವರ್ತಿಸಿ ರೇಣುಕಾಸ್ವಾಮಿಯೊಂದಿಗೆ ಸಂಪರ್ಕದಲ್ಲಿದ್ದನು. ಈ ವಿಚಾರದ ಬಗ್ಗೆ ದರ್ಶನ್ಗೆ ಮಾಹಿತಿ ಲಭಿಸಿದೆ. ಇದರಿಂದ ಕೋಪಗೊಂಡ ದರ್ಶನ್, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿದ್ದಾರೆ ಎಂಬ ಆರೋಪವಿದೆ. ನಂತರ ಶೆಡ್ ಒಂದರಲ್ಲಿ ರೇಣುಕಾಸ್ವಾಮಿಗೆ ಗಂಭೀರ ಹಲ್ಲೆ ನಡೆಸಲಾಗಿದೆ. ಈ ಪ್ರಕರಣದ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸರ್ಕಾರ ಪರ ವಕೀಲ ಸಿದ್ದಾರ್ಥ ಲೂತ್ರಾ ಉಲ್ಲೇಖಿಸಿದ್ದಾರೆ. ವೈದ್ಯಕೀಯ ಕಾರಣವನ್ನು ಆಧಾರವನ್ನಾಗಿ ಮಾಡಿಕೊಂಡು ದರ್ಶನ್ ಅವರು ಜೈಲಿನಿಂದ ಬಿಡುಗಡೆಗೆ ಹೈಕೋರ್ಟ್ನಿಂದ ಜಾಮೀನು ಪಡೆದಿದ್ದಾರೆ. ಜಾಮೀನಿನ ಬಳಿಕ ದರ್ಶನ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದೂ ಗಮನಾರ್ಹವಾಗಿದೆ. ಆರೋಪಿಗಳೆಲ್ಲರೂ ಈಗ ಜಾಮೀನಿನಲ್ಲಿದ್ದಾರೆ. ಆದರೆ ಈ ಪ್ರಕರಣದಲ್ಲಿ ಈಗಾಗಲೇ ಚಾರ್ಜ್ಶೀಟ್ ಸಲ್ಲಿಸಲಾಗಿದೆ ಎಂದು ಲಾಯರ್ ಸಿದ್ದರ್ಥ್ ಲೂತ್ರಾ ವಾದ ಮಂಡಿಸಿದ್ದಾರೆ. ದರ್ಶನ್ ಪರ ವಕೀಲರಾದ ಸಿದ್ದಾರ್ಥ್ ದವೆ ವಾದವನ್ನು ಮಂಡಿಸಿದರು, ವಾದವನ್ನು ಆಲಿಸಿದ ಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ವಾ ರದೊಳಗೆ ವಾದಾಂಶವನ್ನು ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ಪರ್ದಿವಾಲಾ ಆದೇಶಿಸಿದ್ದಾರೆ. ಕಪಿಲ್ ಸಿಬಲ್ ಬಾರದೇ ಎರಡು ದಿನ ಕಾಲಾವಕಾಶ ಕೇಳಲಾಗಿತ್ತು. ದರ್ಶನ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ವಾದ ಮಂಡನೆ ಮಾಡದೇ ಇರೋದು ಕೂಡ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ದರ್ಶನ್ ವಕೀಲರ ಬದಲಾವಣೆಯಾಗಿದ್ದು ಸಿದ್ದಾರ್ಥ್ ದಾವೆ ವಾದ ಮಂಡಿಸಿದ್ದರು.
ದರ್ಶನ್ ಗ್ಯಾಂಗ್ ಬೇಲ್ ಕ್ಯಾನ್ಸಲ್ ಆಗುತ್ತಾ?
ಸಂಪೂರ್ಣ ವಾದ ಆಲಿಸಿದ ನ್ಯಾ. ಪರ್ದೀವಾಲಾ ನೇತೃತ್ವದ ಸುಪ್ರೀಂ ಪೀಠ, ಹೈಕೋರ್ಟ್ ಜಾಮೀನು ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಸಿದೆ. ಹೈಕೋರ್ಟ್ 7 ಆರೋಪಿಗಳನ್ನು ನಿರ್ದೋಷಿ ಎಂದು ನಿರ್ಧರಿಸಿದೆಯೇ ?. ಎಲ್ಲಾ ಜಾಮೀನು ಆದೇಶಗಳಲ್ಲಿ ಹೈಕೋರ್ಟ್ ಹೀಗೆ ಹೇಳುತ್ತಾ? ಹೈಕೋರ್ಟ್ ನ್ಯಾಯಮೂರ್ತಿ ಹೀಗೆ ತಪ್ಪು ಮಾಡಬಹುದೇ ಎಂದು ಪ್ರಶ್ನಿಸಿದೆ. ಹೀಗಾಗಿ ದರ್ಶನ್ ಗ್ಯಾಂಗ್ ಬೇಲ್ ಕ್ಯಾನ್ಸಲ್ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ವಾರಗಳ ಬಳಿಕ ದರ್ಶನ್ ಬೇಲ್ ಭವಿಷ್ಯ ತಿಳಿಯಲಿದೆ. ಡೆವಿಲ್’ ಸಿನಿಮಾ ಚಿತ್ರೀಕರಣಕ್ಕಾಗಿ ನಟ ದರ್ಶನ್ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಪವಿತ್ರಗೌಡ ತಮ್ಮ ಬ್ಯುಸನೆಸ್ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ಇನ್ನೂ 10 ದಿನದಲ್ಲಿ ಡಿ ಬಾಸ್ ಗ್ಯಾಂಗ್ನ ಭವಿಷ್ಯ ನಿರ್ಧಾರ ಆಗಲಿದೆ..

ನೋಡಿರಿ

