ಕೊನೆಯಾಗಿದ್ದು ರಾಮಾಚಾರಿ ಪಾತ್ರವೋ, ಕಿಟ್ಟಿ ಪಾತ್ರವೋ – ನಾಯಕನ ಪಾತ್ರ ಕೊಲೆಯಲ್ಲಿ ಅಂತ್ಯ ಮಾಡಿದ್ದು ಯಾಕೆ?

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ರಾಮಾಚಾರಿ ಮುಕ್ತಾಯವಾಗುತ್ತಾ?. ಹೀಗೊಂದು ಪ್ರಶ್ನೆ ವೀಕ್ಷಕರು ಕೇಳಿದ್ದಾರೆ. ಯಾಕೆಂದರೆ, ರಾಮಚಾರಿ ಸೀರಿಯಲ್ನಲ್ಲಿ ನಾಯಕನ ಕಥೆಯನ್ನೇ ಮುಗಿಸಲಾಗಿದೆ. ಇದು ಸೀರಿಯಲ್ ಕೊಟ್ಟ ಟ್ವಿಸ್ಟಾ?, ಕನಸಾ, ಏನು ಅನ್ನೋ ಗೊಂದಲದಲ್ಲಿದ್ದಾರೆ ವೀಕ್ಷಕರು.
ಇದನ್ನೂ ಓದಿ: ಕರಿಮಣಿ ಸೀರಿಯಲ್ ದಿಢೀರ್ ಮುಕ್ತಾಯ – ಕೊನೆಯ ದಿನದ ಸಂಚಿಕೆಯಲ್ಲಿ ಏನಾಗಲಿದೆ?
ಸಿನಿಮಾ, ಧಾರಾವಾಹಿ ಅಂದರೆ, ನಾಯಕ, ನಾಯಕಿಯ ಪಾತ್ರವೇ ಪ್ರಧಾನ. ಸಿನಿಮಾ ಬಿಡಿ, ಧಾರಾವಾಹಿ ಹೆಚ್ಚಾಗಿ ಮಹಿಳಾ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಹೀಗಿರುವಾಗ ರಾಮಾಚಾರಿ ಧಾರಾವಾಹಿಯ ನಾಯಕನ ಪಾತ್ರವನ್ನ ಕೊಲೆ ಮೂಲಕ ಅಂತ್ಯಗೊಳಿಸಲಾಗಿದೆ. ಸೀರಿಯಲ್ ಕಥೆಯಲ್ಲಿ ಬಂದ ಈ ದಿಢೀರ್ ಟ್ವಿಸ್ಟ್ ಗೆ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
‘ರಾಮಾಚಾರಿ’ ಧಾರಾವಾಹಿಯಲ್ಲಿ ವೀಕ್ಷಕರು ಒಂದೊಳ್ಳೆಯ ರೋಚಕ ತಿರುವಿಗೆ ಕಾಯುತ್ತಿದ್ದರು. ಆದರೆ, ಈ ದಿಢೀರ್ ತಿರುವು ವೀಕ್ಷಕರಿಗೆ ಶಾಕ್ ನೀಡಿದೆ. ಕಥಾ ನಾಯಕ ರಾಮಾಚಾರಿಯ ಹತ್ಯೆಯೇ ನಡೆದು ಹೋಗುತ್ತದೆ. ಇದರಿಂದ ಕಥೆಯ ಪ್ರಭಾವದ ಮೇಲೆ ಸಾಕಷ್ಟು ಪ್ರಭಾವ ಬೀರುವ ಸೂಚನೆ ಸಿಕ್ಕಿದೆ. ಈಗ ‘ರಾಮಾಚಾರಿ’ಗೆ ಚಾಕುವಿನಿಂದ ಚುಚ್ಚಿ ಕೊಲ್ಲುವ ಸೀನ್ ತೋರಿಸಲಾಗಿದೆ.
ರಾಮಾಚಾರಿ ವಿರುದ್ಧ ಮಾನ್ಯತಾ, ರುಕ್ಕು ನವದೀಪ್ ಹಾಗೂ ಜಿಕೆ ದ್ವೇಷ ಕಾರುತ್ತಿದ್ದರು. ಇವರು ರಾಮಾಚಾರಿಯನ್ನು ಕೊಲ್ಲಲು ಪ್ಲ್ಯಾನ್ ಮಾಡುತ್ತಲೇ ಇದ್ದರು. ಇವರೆಲ್ಲಾ ಸೇರಿ ರಾಮಾಚಾರಿಯನ್ನು ಮೋಸದಿಂದ ಕಟ್ಟಡ ಒಂದಕ್ಕೆ ಕರೆಸುತ್ತಾರೆ. ಈ ವೇಳೆ ವಿಲನ್ ಗ್ಯಾಂಗ್ ರಾಮಾಚಾರಿ ಮೇಲೆ ಮುಗಿ ಬೀಳುತ್ತದೆ. ರಾಮಾಚಾರಿ ಸುಮ್ಮನಿರುವವನು ಅಲ್ಲವೇ ಅಲ್ಲ. ಅವನು ವಿಲನ್ಗಳ ವಿರುದ್ಧ ಫೈಟ್ ಮಾಡುತ್ತಾನೆ. ಎಲ್ಲರನ್ನೂ ಸದೆ ಬಡಿಯುವಲ್ಲಿ ಯಶಸ್ವಿ ಆಗುತ್ತಾನೆ. ರಾಮಾಚಾರಿ ಎಷ್ಟೇ ಹೋರಾಟ ಮಾಡಿದರೂ ಈ ಗ್ಯಾಂಗ್ ಸುಮ್ಮನೆ ಇರೋದಿಲ್ಲ. ರಾಮಾಆರಿಗೆ ಚೂರಿ ಚುಚ್ಚಿ ಕೊಲ್ಲಲು ಯಶಸ್ವಿಯಾಗುತ್ತದೆ. ತಮ್ಮ ಶತ್ರುವನ್ನು ನಾಶ ಪಡಿಸಿದ ಖುಷಿಯಲ್ಲಿ ಅವರು ಸಂಭ್ರಮಿಸುತ್ತಾರೆ. ನಂತರ ಆತನ ಶವವನ್ನು ರಸ್ತೆಯಲ್ಲಿ ಎಸೆಯಲಾಗುತ್ತದೆ.
ಈ ನಡುವೆ ರಾಮಚಾರಿ ಮನೆಯಲ್ಲಿ ದೀಪ ಆರಿಹೋಗುತ್ತದೆ. ತಾಯಿ ಜಾನಕಿ ದೀಪ ಆರುವುದನ್ನ ನೋಡಿ ದಿಗಿಲುಗೊಳ್ಳುತ್ತಾಳೆ. ನಂತರ ಜಾನಕಿಗೆ ಫೋನ್ ಕಾಲ್ ಬರುತ್ತದೆ. ಆಗ ರಾಮಚಾರಿ ಎಲ್ಲರನ್ನೂ ಬಿಟ್ಟು ಹೋಗಿದ್ದಾನೆ ಎಂದು ಫೋನ್ ಮೂಲಕ ತಿಳಿಸಲಾಗುತ್ತದೆ. ಆಘಾತದಿಂದ ತಾಯಿ ಜಾನಕಿ ಪ್ರಜ್ಞೆತಪ್ಪಿ ಬೀಳುತ್ತಾಳೆ.
ರಾಮಚಾರಿ ಪತ್ನಿ ಚಾರು, ಕುಟುಂಬ ಸದಸ್ಯರು ಮತ್ತು ಅಗ್ರಹಾರದ ಜನರು ತಮ್ಮ ಪ್ರೀತಿಯ ರಾಮಾಚಾರಿಯ ಸಾವಿನ ಶೋಕಾಚರಣೆಯಲ್ಲಿರುತ್ತಾರೆ. ಸದ್ಯ ಈ ಟ್ವಿಸ್ಟ್ಗೆ ವಿವಿಧ ರೀತಿಯ ಕಮೆಂಟ್ಗಳು ಬರುತ್ತಿವೆ. ಇದು ನಿಜವಲ್ಲ, ಕನಸು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ರಾಮಾಚಾರಿ ಅಲ್ಲ ಕಿಟ್ಟಿ ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟತೆ ಧಾರಾವಾಹಿ ಕಥೆಯಲ್ಲಿ ಸಿಗಲಿದೆ.

ನೋಡಿರಿ

