50 ಜನ ಪ್ರಯಾಣಿಸುತ್ತಿದ್ದ ವಿಮಾನ ಕಣ್ಮರೆ – ಚೀನಾ ಗಡಿ ತಲುಪುತ್ತಿದ್ದಂತೆ ಆಗಿದ್ದೇನು?

ಸುಮಾರು 50 ಜನರು ಪ್ರಯಾಣಿಕರಿದ್ದ ವಿಮಾನವೊಂದು ಕಣ್ಮರೆಯಾಗಿದೆ. ರಷ್ಯಾದ ವಿಮಾನ ಚೀನಾ ಗಡಿಯಲ್ಲಿ ವಾಯು ಸಂಚಾರ ನಿಯಂತ್ರಣ ಕೊಠಡಿಯ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂಓದಿ: ಕರ್ನಾಟಕದಲ್ಲಿ ಮತ ಕಳವು ನಡೆದಿದೆ.. ಶೀಘ್ರವೇ ಸಾಕ್ಷ್ಯ ಒದಗಿಸುತ್ತೇನೆ! – ಹೊಸ ಬಾಂಬ್ ಸಿಡಿಸಿದ ರಾಹುಲ್ ಗಾಂಧಿ!
ಅಂಗಾರ ಏರ್ಲೈನ್ಸ್ ನಿರ್ವಹಿಸುವ ಈ ವಿಮಾನವು ಅಮುರ್ನ ಟಿಂಡಾ ನಗರಕ್ಕೆ ಹೋಗುತ್ತಿತ್ತು. ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ ಸಂಪರ್ಕ ಕಡಿತಗೊಂಡಿದೆ. ಟಿಂಡಾ ನಗರದ ವಿಮಾನ ನಿಲ್ದಾಣಕ್ಕೆ ತಲುಪಲು ಕೆಲವೇ ದೂರವಿತ್ತು. ಈ ಆನ್ -24 ವಿಮಾನದಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ಇದೀಗ ನಾಪತ್ತೆಯಾದ ವಿಮಾನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಅಹಮದಾಬಾದ್ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ವಿಮಾನದಲ್ಲಿದ್ದ 242 ಜನರಲ್ಲಿ ಕೇವಲ ಓರ್ವ ಮಾತ್ರ ಬದುಕುಳಿದಿದ್ದರು. ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹಾರುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು. ರಷ್ಯಾದಲ್ಲಿ 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕಣ್ಮರೆಯಾದ ನಂತರ, ವಿಮಾನವು ಯಾವುದೋ ಅಹಿತಕರ ಘಟನೆಗೆ ಬಲಿಯಾಗಿರಬಹುದೆಂಬ ಅನುಮಾನಗಳು ಮತ್ತೆ ಹುಟ್ಟಿಕೊಂಡಿವೆ.

ನೋಡಿರಿ

