ಚಾಕಲೇಟ್‌ ಬಾಯ್‌ ಪೃಥ್ವಿ ಅಂಬಾರ್‌ ಈಗ ಆಂಗ್ರಿ ಮ್ಯಾನ್! – ಕೊತ್ತಲವಾಡಿ ಟ್ರೈಲರ್‌ ರಿಲೀಸ್

ಚಾಕಲೇಟ್‌ ಬಾಯ್‌ ಪೃಥ್ವಿ ಅಂಬಾರ್‌ ಈಗ ಆಂಗ್ರಿ ಮ್ಯಾನ್! – ಕೊತ್ತಲವಾಡಿ ಟ್ರೈಲರ್‌ ರಿಲೀಸ್

ರಾಕಿಂಗ್‌ ಸ್ಟಾರ್‌ ಯಶ್‌ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’ ಸಿನಿಮಾದ ಟ್ರೇಲರ್ ಕಡೆಗೂ ರಿಲೀಸ್‌ ಆಗಿದೆ. ಕೊತ್ತಲವಾಡಿ ಸಿನಿಮಾದಲ್ಲಿ ನಟ ಪೃಥ್ವಿ ಅಂಬಾರ್‌ ಆಂಗ್ರಿ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಾಕಲೇಟ್‌ ಬಾಯ್‌ ಹೊಸ ಲುಕ್‌ ನೋಡಿ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ.

ಇದನ್ನೂ ಓದಿ:‌ ಇಂಗ್ಲೆಂಡ್‌ನಲ್ಲಿ ಭಾರತದ ವನಿತೆಯರಿಂದ ಇತಿಹಾಸ ಸೃಷ್ಟಿ – ಹರ್ಮನ್ ಪ್ರೀತ್ ಕೌರ್ ವೇಗದ ಶತಕಕ್ಕೆ ಸೋತು ಶರಣಾದ ಆಂಗ್ಲರು

ಕೊತ್ತಲವಾಡಿ ಸಿನಿಮಾ ಯಶ್‌ ತಾಯಿ ನಿರ್ಮಾಣ ಮಾಡ್ತಿದ್ದಾರೆ ಅನ್ನೋ ಕಾರಣಕ್ಕೆ ಭಾರಿ ಸುದ್ದಿಯಲ್ಲಿತ್ತು. ಈ ಹಿಂದೆ ರಿಲೀಸ್‌ ಆಗಿದ್ದ ಟೀಸರ್‌ ಕೂಡ ಭಾರಿ ಗಮನ ಸೆಳೆದಿತ್ತು. ಇದೀಗ ಟ್ರೇಲರ್ ರಿಲೀಸ್‌ ಆಗಿದೆ. ಕೊತ್ತಲವಾಡಿ ಹೆಸರೇ ಸೂಚಿಸುತ್ತಿರುವಂತೆ ಒಂದು ಹಳ್ಳಿಯ ಕತೆಯನ್ನು ಒಳಗೊಂಡ   ಆಕ್ಷನ್ ಡ್ರಾಮಾ ಎಂಬುದು ಗೊತ್ತಾಗುತ್ತದೆ. ಒಂದು ಊರಿನ ಸ್ಥಳೀಯ ರಾಜಕೀಯವೇ ಈ ಸಿನಿಮಾದ ಕೇಂದ್ರಬಿಂದು ಎಂಬ ಸುಳಿವು ಟ್ರೇಲರ್‌ನಲ್ಲಿ ತಿಳಿಯುತ್ತದೆ.

ಇನ್ನು ಸಿನಿಮಾದಲ್ಲಿ ನಟ ಪೃಥ್ವಿ ಅಂಬಾರ್  ಆಂಗ್ರಿ ಯಂಗ್‌ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪೃಥ್ವಿ ನಟನೆಯ ಸಿನಿಮಾದಲ್ಲಿ ದೊಡ್ಡಮಟ್ಟದ ಆಕ್ಷನ್ ಇರುವ ಸೂಚನೆ ಸಿಕ್ಕಿದೆ. ನಾಯಕಿ ಕಾವ್ಯ ಶೈವಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ, ಗೋಪಾಲಕೃಷ್ಣ ದೇಶಪಾಂಡೆ ಮತ್ತು ರಾಜೇಶ್‌ ನಟರಂಗ ಅವರ ಪಾತ್ರಗಳು ಇಲ್ಲಿ ಸಖತ್ ಹೈಲೈಟ್ ಆಗಿವೆ. ಹೀರೋ ಪಾತ್ರದ ಜೊತೆಗೆ ಅವರಿಬ್ಬರು ನಿಭಾಯಿಸಿರುವ ಪಾತ್ರಗಳು ಇಡೀ ಸಿನಿಮಾದ ತುಂಬಾ ಇರಲಿವೆ ಅನ್ನೋದು ಟ್ರೇಲರ್‌ನಲ್ಲಿ ತಿಳಿಯುತ್ತದೆ.

ಒಟ್ಟಾರೆ ಕೊತ್ತಲವಾಡಿ ಸಿನಿಮಾ ಟ್ರೈಲರ್‌ ಈಗ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದು, ಸಿನಿಮಾ ಹೇಗೆ ಮೂಡಿ ಬರಲಿದೆ ಅನ್ನೋ ಕುತೂಹಲ ಹುಟ್ಟು ಹಾಕಿದೆ. ಆಗಸ್ಟ್‌ 1 ರಂದು ಕೊತ್ತಲವಾಡಿ ಸಿನಿಮಾ ತೆರೆಗೆ ಬರಲಿದೆ. ಗಲ್ಲಾಪೆಟ್ಟಿಗೆಯಲ್ಲಿ ಯಶ್‌ ತಾಯಿ ನಿರ್ಮಾಣದ ಸಿನಿಮಾ ಹೇಗೆ ಕಮಾಲ್‌ ಮಾಡಲಿದೆ ಅನ್ನೋದನ್ನ ಕಾದು ನೋಡ್ಬೇಕು.

Shwetha M