ಅನ್ನ ತಿನ್ನೋದು ಬಿಟ್ರೆ ತೂಕ ಇಳಿಕೆಯಾಗಲ್ಲ.. ಅನಾರೋಗ್ಯ ಕಾಡುತ್ತೆ!

ಇತ್ತೀಚೆಗೆ ಅನೇಕರಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು. ತೂಕ ಇಳಿಸಿಕೊಳ್ಬೇಕು ಅಂತ ಅಂದುಕೊಂಡಿರ್ತಾರೆ. ಹೀಗಾಗಿ ಕೆಲವರು ಜಿಮ್‌ಗೆ ಹೋಗಿ ಸರ್ಕಸ್ ಮಾಡಿದ್ರೆ ಇನ್ನೋ ಕೆಲವರು ಕೆಲ ಆಹಾರ ಸೇವಿಸೋದನ್ನ ಬಿಟ್ಟು ಬಿಡ್ತಾರೆ. ಇದ್ರಲ್ಲಿ ಅನ್ನ ಕೂಡ ಒಂದು. ಅನ್ನ ತಿನ್ನೋದನ್ನ ಬಿಟ್ರೆ ತೂಕ ಇಳಿಕೆ ಜೊತೆ ಅನಾರೋಗ್ಯ ಕೂಡ ನಿಮ್ಮ ಹುಡುಕಿಕೊಂಡು ಬರುತ್ತೆ.
ಇದನ್ನೂ ಓದಿ: ರಮೋಲಾ ರಕ್ಷಕ್ ರಿಯಲ್ ಲವ್? – ವೇದಿಕೆಯಲ್ಲೇ ರಟ್ಟಾಯ್ತು ಗುಟ್ಟು!
ತೂಕ ಇಳಿಕೆ ಎಂದಾಕ್ಷಣ ಅನೇಕರು ಅನ್ನ ತ್ಯಜಿಸಿಬಿಡುತ್ತಾರೆ. ಚಪಾತಿ ಸೇವನೆ ಮುಂದಾಗುತ್ತಾರೆ. ನಾವು ದಪ್ಪವಾಗುತ್ತಿರುವುದಕ್ಕೆ ಅನ್ನದಲ್ಲಿರುವ ಕಾರ್ಬೋಹೈಡ್ರೇಟ್ಗಳೇ ಕಾರಣ. ಇದರಿಂದಲೇ ನಾನು ದಪ್ಪವಾಗುತ್ತಿದ್ದೇನೆ ಎಂದು ಯೋಚಿಸುತ್ತಾರೆ. ಆದ್ರೆ ಅನ್ನ ತಿನ್ನೋದನ್ನ ಬಿಟ್ರೆ ಅನಾರೋಗ್ಯ ನಿಮ್ಮನ್ನ ಕಾಡೋದು ಫಿಕ್ಸ್.
ಅನ್ನವು ವಿಟಮಿನ್ ಬಿ, ಖನಿಜಾಂಶಗಳಾದ ಮೆಗ್ನಿಷಿಯಂ, ಮ್ಯಾಂಗನೀಸ್ ಹಾಗೂ ಝಿಂಕ್ ಅಂಶವನ್ನು ಅತಿಯಾಗಿ ಹೊಂದಿರುತ್ತದೆ. ಅನ್ನ ಸೇವನೆ ಮಾಡೋದನ್ನ ಬಿಟ್ರೆ ನಿಶ್ಯಕ್ತಿ ಉಂಟಾಗುತ್ತದೆ. ಏಕೆಂದರೆ ದೇಹವು ಶಕ್ತಿಗಾಗಿ ಹೊಸ ಮೂಲಗಳನ್ನು (ಕೊಬ್ಬಿನಂತಹ) ಅವಲಂಬಿಸುತ್ತೆ. ರಾತ್ರಿ ಅನ್ನ ಮಾಡಿಟ್ಟು ಅದನ್ನು ಮಾರನೇ ದಿನ ಸೇವನೆ ಮಾಡುವುದರಿಂದ ನಿಮ್ಮ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯ ವೇಗ ಹೆಚ್ಚುವುದರ ಜೊತೆಯಲ್ಲಿ ದೇಹದಲ್ಲಿ ರಕ್ತದ ಹರಿವಿನ ಪ್ರಮಾಣ ಕೂಡ ನಿಯಂತ್ರಣದಲ್ಲಿ ಇರುತ್ತದೆ.
ಕೇವಲ ಅನ್ನ ಸೇವನೆ ತ್ಯಜಿಸಿದಾಕ್ಷಣ ಯಾರೂ ಸಣ್ಣಗಾಗುವುದಿಲ್ಲ. ಹೀಗಾಗಿ ನೀವು ದೇಹ ದಂಡನೆಯ ಕಡೆಗೂ ಗಮನ ನೀಡಬೇಕು. ಈಗೀನ ಜಮಾನದಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಜಾಸ್ತಿ ಇರುವುದರಿಂದ ದೇಹಕ್ಕೆ ಶ್ರಮವಿಲ್ಲದೇ ಅನೇಕರು ತೂಕ ಏರಿಕೆ ಕಾಣುತ್ತಾರೆ.
ಅನ್ನವನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ, ಅದರೊಂದಿಗೆ ವಿವಿಧ ತರಕಾರಿಗಳನ್ನು ಸೇವಿಸುವ ಮೂಲಕ ನೀವು ಸುಲಭದಲ್ಲಿ ತೂಕ ಇಳಿಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಅನ್ನ ಅರೋಗ್ಯದ ಮೂಲ. ತೂಕ ಇಳಿಸುವವರು ಮಿತ ಪ್ರಮಾಣದಲ್ಲಿ ಸೇವನೆ ಮಾಡೋದು ಉತ್ತಮ.

ನೋಡಿರಿ

