ಇಂಗ್ಲೆಂಡ್‌ನಲ್ಲಿ ಭಾರತದ ವನಿತೆಯರಿಂದ ಇತಿಹಾಸ ಸೃಷ್ಟಿ – ಹರ್ಮನ್ ಪ್ರೀತ್ ಕೌರ್ ವೇಗದ ಶತಕಕ್ಕೆ ಸೋತು ಶರಣಾದ ಆಂಗ್ಲರು
ಕ್ರಾಂತಿ ಗೌಡ ಬಿರುಗಾಳಿ ಬೌಲಿಂಗ್ ಗೆ ಇಂಗ್ಲೆಂಡ್ ಪತನ

ಇಂಗ್ಲೆಂಡ್‌ನಲ್ಲಿ ಭಾರತದ ವನಿತೆಯರಿಂದ ಇತಿಹಾಸ ಸೃಷ್ಟಿ – ಹರ್ಮನ್ ಪ್ರೀತ್ ಕೌರ್ ವೇಗದ ಶತಕಕ್ಕೆ ಸೋತು ಶರಣಾದ ಆಂಗ್ಲರುಕ್ರಾಂತಿ ಗೌಡ ಬಿರುಗಾಳಿ ಬೌಲಿಂಗ್ ಗೆ ಇಂಗ್ಲೆಂಡ್ ಪತನ

ಆಂಗ್ಲರ ನೆಲದಲ್ಲಿ ಟೀಮ್ ಇಂಡಿಯಾ ವನಿತೆಯರು ಚರಿತ್ರೆ ಸೃಷ್ಟಿಸಿದ್ದಾರೆ. ಅತ್ತ ಟೀಮ್ ಇಂಡಿಯಾ ಪುರುಷರ ತಂಡ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಟ ನಡೆಸುತ್ತಿದ್ರೆ, ಇತ್ತ ಇಂಡಿಯಾ ಸಿಂಹಿಣಿಯರು ಅದೇ ಆಂಗ್ಲರ ನೆಲದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಬಿರುಗಾಳಿಯಂತೆ ಆಂಗ್ಲರ ವಿರುದ್ಧ ಗುಡುಗಿದರೆ, ಕ್ರಾಂತಿ ಗೌಡ ಬ್ರಿಟಿಷ್ ಬೆನ್ನೆಲುಬನ್ನೇ ಮುರಿದು ಹಾಕಿದ್ರು. ನಮ್ಮ ಭಾರತದ ವನಿತೆಯರು ಹಿಸ್ಟರಿ ಕ್ರಿಯೇಟ್ ಮಾಡಿದ್ದು ಹೇಗೆ?, ಕ್ರಾಂತಿ ಗೌಡ ಬ್ರಿಟಿಷ್ ನೆಲದಲ್ಲಿ ಗೆಲುವಿನ ಕ್ರಾಂತಿ ಮಾಡಿದ್ದು ಹೇಗೆ? ಹರ್ಮನ್ ಪ್ರೀತ್ ಬರೆದಿರೋ ದಾಖಲೆಗಳೆಷ್ಟು ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 4ನೇ ಟೆಸ್ಟ್.. ಭಾರತಕ್ಕೆ 6 ಟಾಸ್ಕ್ – ಡಿಪೆಂಡ್ ಫಾರ್ಮುಲಾ ಉಲ್ಟಾ ಹೊಡೀತಾ?

ಇಂಗ್ಲೆಂಡ್​ನಲ್ಲಿ 49 ವರ್ಷಗಳ ಕಾಯುವಿಕೆಗೆ ಟೀಮ್ ಇಂಡಿಯಾ ಮಹಿಳೆಯರು ಬ್ರೇಕ್ ಹಾಕಿದ್ದಾರೆ. ಬ್ರಿಟಿಷ್ ನೆಲದಲ್ಲಿ ಗೆದ್ದು ಬೀಗಿದ್ದಾರೆ. ಇಂಗ್ಲೆಂಡ್​ನಲ್ಲಿ ನಡೆದ ಮೂರನೇ ಮಹಿಳಾ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್​ಗಳಲ್ಲಿ 318 ರನ್​ ಗಳಿಸಿದ್ರು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಮಹಿಳಾ ತಂಡ 305 ರನ್​ಗಳಿಗೆ ಆಲೌಟ್ ಆದ್ರು. ಭಾರತ ತಂಡ 13 ರನ್​ಗಳಿಂದ ಗೆದ್ದು ಬೀಗಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ವಿಶೇಷ ಎಂದರೆ ಭಾರತ ಮಹಿಳಾ ತಂಡ ಇದೇ ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಏಕದಿನ ಹಾಗೂ ಟಿ20 ಸರಣಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಹೊಸ ಇತಿಹಾಸ ನಿರ್ಮಿಸುವಲ್ಲಿ ಹರ್ಮನ್​ಪ್ರೀತ್ ಕೌರ್ ಪಡೆ ಯಶಸ್ವಿಯಾಗಿದೆ.

ಇದಕ್ಕೂ ಮುನ್ನ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ 3-2 ಅಂತರದಿಂದ ಗೆದ್ದುಕೊಂಡಿದ್ದರು. ಇದೀಗ ಏಕದಿನ ಸರಣಿಯಲ್ಲೂ ಆಂಗ್ಲರನ್ನು ಬಗ್ಗು ಬಡಿಯುವಲ್ಲಿ ಭಾರತೀಯ ವನಿತಾ ಪಡೆ ಸಕ್ಸಸ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 49 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದ್ದಾರೆ. ಇನ್ನು ಈ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಏಕದಿನ ಪಂದ್ಯದಲ್ಲಿ 8 ವಿಕೆಟ್​ಗಳ ಗೆಲುವು ಸಾಧಿಸಿ ಇಂಗ್ಲೆಂಡ್ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದ್ದರು. ಹೀಗಾಗಿ ಮೂರನೇ ಏಕದಿನ ಪಂದ್ಯವು ಡು ಆರ್ ಡೈ ಫೈಟ್ ಆಗಿತ್ತು.

ಚೆಸ್ಟರ್-ಲೆ-ಸ್ಟ್ರೀಟ್​ನ ರಿವರ್​ಸೈಡ್ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದಾಗಲೇ ಟೀಮ್ ಇಂಡಿಯಾಕ್ಕೆ ಹುಮ್ಮಸ್ಸು ಬಂದಿತ್ತು. ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಸೆಲೆಕ್ಟ್ ಮಾಡಿಕೊಂಡ್ರು. ಮೊದಲು ಬ್ಯಾಟ್ ಮಾಡಿದ ಸ್ಮೃತಿ ಮಂಧಾನ 45 ರನ್ ಗಳಿಸಿ ಉತ್ತಮ ಆರಂಭ ಒದಗಿಸಿ ಕೊಟ್ರು. ಹರ್ಲೀನ್ ಡಿಯೋಲ್ ಕೂಡ 45 ರನ್​ಗಳ ಕೊಡುಗೆ ನೀಡಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಾಯಕಿ ಹರ್ಮನ್​ಪ್ರೀತ್ ಕೌರ್ ಆಂಗ್ಲರ ಪಾಲಿಗೆ ಗುಡುಗು, ಸಿಡಿಲಿನ ಅಬ್ಬರ ಹೇಗಿದೆ ಅಂತಾ ತೋರಿಸಿಕೊಟ್ರು. ಆರಂಭದಿಂದಲೇ ಬಿರುಗಾಳಿಯ ವೇಗದಂತೆ ಬ್ಯಾಟಿಂಗ್ ಮಾಡಿದ ಹರ್ಮನ್​ ಕೇವಲ 84 ಎಸೆತಗಳಲ್ಲಿ ಅತಿವೇಗದ ಸೆಂಚುರಿ ಸಿಡಿಸಿದ್ರು. 14 ಫೋರ್​ಗಳೊಂದಿಗೆ 102 ರನ್ ಚಚ್ಚಿದರು. ಕೌರ್, ಮೈದಾನದ ಮೂಲೆ ಮೂಲೆಗೂ ಫೋರ್​ಗಳನ್ನು ಬಾರಿಸಿದರು. ಹರ್ಮನ್ ಸಿಡಿಸಿದ್ದು ಬರೋಬ್ಬರಿ 14 ಫೋರ್‌ಗಳು. ಈ ಶತಕದೊಂದಿಗೆ ಹರ್ಮನ್​ಪ್ರೀತ್ ಏಕದಿನ ಕ್ರಿಕೆಟ್​ನಲ್ಲಿ 4000 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೂರನೇ ಮಹಿಳಾ ಬ್ಯಾಟರ್ ಎಂಬ ದಾಖಲೆ ಬರೆದ್ರು. ಇದಕ್ಕೂ ಮುನ್ನ ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂಧಾನ ಈ ಸಾಧನೆ ಮಾಡಿದ್ದರು. ಇದಲ್ಲದೇ, ಹರ್ಮನ್  ತನ್ನ ಶತಕದೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ನಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು. ಹಾಗೆಯೇ ಭಾರತದ ಪರ ಏಕದಿನ ಕ್ರಿಕೆಟ್​ನಲ್ಲಿ 90 ಕ್ಕಿಂತ ಕಡಿಮೆ ಎಸೆತಗಳಲ್ಲಿ ಅತ್ಯಧಿಕ ಶತಕ ಸಿಡಿಸಿದ ಮಹಿಳಾ ಆಟಗಾರ್ತಿ ಎಂಬ ದಾಖಲೆ ಸಹ ಹರ್ಮನ್​​ಪ್ರೀತ್ ಕೌರ್ ಪಾಲಾಗಿದೆ. ಹಾಗೆಯೇ ಇಂಗ್ಲೆಂಡ್​ನಲ್ಲಿ ಏಕದಿನ ಕ್ರಿಕೆಟ್​ನಲ್ಲಿ 1000 ರನ್ ಕಲೆಹಾಕಿದ ಟೀಮ್ ಇಂಡಿಯಾದ 2ನೇ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಹರ್ಮನ್​ಪ್ರೀತ್ ಕೌರ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಿಥಾಲಿ ರಾಜ್ ಮಾತ್ರ ಈ ಸಾಧನೆ ಮಾಡಿದ್ದರು.

ಹರ್ಮನ್​ಪ್ರೀತ್ ಕೌರ್​ಗೆ ಉತ್ತಮ ಸಾಥ್ ನೀಡಿದ ಜೆಮಿಮಾ ರೊಡ್ರಿಗಸ್ 45 ಎಸೆತಗಳಲ್ಲಿ 50 ರನ್ ಕಲೆಹಾಕಿದರು. ಈ ಮೂಲಕ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 318 ರನ್​ ಗಳಿಸಿತು. 319 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್, ​ 305 ರನ್​ಗಳಿಗೆ ಆಲೌಟ್ ಆಯ್ತು. ಈ ಗೆಲುವಿನೊಂದಿಗೆ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಆಂಗ್ಲರ ನಾಡಿನಲ್ಲಿ ಭಾರತ ಮಹಿಳಾ ತಂಡ ಏಕದಿನ ಹಾಗೂ ಟಿ20 ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಈ ಐತಿಹಾಸಿಕ ಗೆಲುವಿನಲ್ಲಿ ಆಂಗ್ಲರ ಬೆನ್ನುಲುಬು ಮುರಿದಿದ್ದು ಕ್ರಾಂತಿ ಗೌಡ. ಇಂಡಿಯಾ ಪರ ವೇಗದ ಬೌಲರ್‌ ಕ್ರಾಂತಿ ಗೌಡ, ಬಿಗುವಿನ ದಾಳಿ ನಡೆಸಿ ಅಬ್ಬರಿಸಿದ್ರು. ಆಂಗ್ಲರ ಬೆವರಿಳಿಸಿದ ಕ್ರಾಂತಿ, 6 ವಿಕೆಟ್‌ ಉರುಳಿಸಿದ್ರು. ಅಂತೂ ಕ್ಯಾಪ್ಟನ್ ಹರ್ಮನ್ ಜವಾಬ್ದಾರಿಯ ಆಟ, ಕ್ರಾಂತಿ ಗೌಡ ಬೌಲಿಂಗ್ ಮೆರೆದಾಟಕ್ಕೆ ಬ್ರಿಟಿಷ್ ಮಹಿಳಾ ತಂಡ ಸೋತು ಸುಣ್ಣವಾಗಿದೆ. ಟೀಮ್ ಇಂಡಿಯಾ ವನಿತೆಯರು ಆಂಗ್ಲರ ನೆಲದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದಕ್ಕೆ ಕ್ರಿಕೆಟ್ ಫ್ಯಾನ್ಸ್ ಕೂಡಾ ಹ್ಯಾಟ್ಸಪ್ ಹೇಳ್ತಿದ್ದಾರೆ.

Sulekha