ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಫಿಟ್ – ಪಂದ್ಯಕ್ಕೂ ಮೊದಲೇ ಭಾರತಕ್ಕೆ ಬೆನ್ ಸ್ಟೋಕ್ಸ್ ವಾರ್ನಿಂಗ್!

ವಿಕೆಟ್ ಕೀಪರ್ ಆಗಿ ರಿಷಭ್ ಪಂತ್ ಫಿಟ್ – ಪಂದ್ಯಕ್ಕೂ ಮೊದಲೇ ಭಾರತಕ್ಕೆ ಬೆನ್ ಸ್ಟೋಕ್ಸ್ ವಾರ್ನಿಂಗ್!

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 2-1 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ. ಹೀಗಾಗಿ ಮ್ಯಾಚೆಂಸ್ಟರ್​ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ. ಆದರೆ ಈ ನಿರ್ಣಾಯಕ ಪಂದ್ಯಕ್ಕೆ ಟೀಮ್ ಇಂಡಿಯಾ ಬಲಿಷ್ಠ ತಂಡ ಕಟ್ಟಿದೆ.

ಇದನ್ನೂ ಓದಿ:ಹೆಚ್ಚುವರಿ ರನ್ಸ್ ನೀಡಿಯೇ ಸೋತ ಭಾರತ – 3 ಪಂದ್ಯ.. 150 ರನ್ಸ್.. ಗೆಲ್ಲೋದೇಗೆ?

ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಕಣಕ್ಕಿಳಿಯಲಿದ್ದಾರೆ ಎಂದು ಟೀಮ್ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಖಚಿತಪಡಿಸಿದ್ದಾರೆ. ಮ್ಯಾಚೆಂಸ್ಟರ್​ನಲ್ಲಿ ಮಾತನಾಡಿದ ಕ್ಯಾಪ್ಟನ್ ಗಿಲ್, ರಿಷಭ್ ಅವರು ಸಂಪೂರ್ಣ ಫಿಟ್​ನೆಸ್ ಸಾಧಿಸಿದ್ದಾರೆ. ಹೀಗಾಗಿ ನಾಲ್ಕನೇ ಟೆಸ್ಟ್​ನಲ್ಲಿ ವಿಕೆಟ್ ಕೀಪಿಂಗ್ ಪಂತ್ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಗಿಲ್. ಹಾಗೆಯೇ ರಿಷಭ್ ಪಂತ್ ಸಂಪೂರ್ಣ ಫಿಟ್​ ಆಗಿರುವ ಕಾರಣ ಧ್ರುವ್ ಜುರೇಲ್​ಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ.

ಮೂರನೇ ಟೆಸ್ಟ್‌ನಲ್ಲಿ ಇಂಡಿಯಾ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರ ಮಾತಿನ ಚಕಮಕಿ ಬಗ್ಗೆ ಭಾರತ ತಂಡಕ್ಕೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಎಚ್ಚರಿಕೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆನ್ ಸ್ಟೋಕ್ಸ್, ತಮ್ಮ ತಂಡದ ಆಟಗಾರರು ಭಾರತೀಯ ಆಟಗಾರರ ಆಕ್ರಮಣಶೀಲತೆಗೆ ಪ್ರತಿಕ್ರಿಯಿಸುವುದರಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ನಾಲ್ಕನೇ ಪಂದ್ಯದಲ್ಲೂ ಮಾತಿನ ಸಮರ ಕಂಡುಬರಬಹುದು ಎಂದು ಪರೋಕ್ಷವಾಗಿಯೇ ಎಚ್ಚರಿಕೆ ನೀಡಿದ್ದಾರೆ ಇಂಗ್ಲೆಂಡ್ ಕ್ಯಾಪ್ಟನ್.

Sulekha