ಜು. 25ಕ್ಕೆ ಸು ಫ್ರಮ್ ಸೋ ರಿಲೀಸ್ – ಕಾಮಿಡಿ, ಹಾರರ್ ಸಿನಿಮಾ ರಾಜ್ ಬಿ ಶೆಟ್ಟಿ ಕೈ ಹಿಡಿಯುತ್ತಾ?

ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕ ಮನೆ ಮಾತಾಗಿದ್ದ ಕನ್ನಡ ಚಿತ್ರರಂಗದ ನಿರ್ದೇಶಕ, ನಟ ರಾಜ್ ಬಿ. ಶೆಟ್ಟಿ ನೇತೃತ್ವದಲ್ಲಿ ಇದೀಗ ಅಂತದ್ದೇ ಇನ್ನೊಂದು ಸಿನಿಮಾ ಸು ಫ್ರಮ್ ಸೋ ಬಿಡುಗಡೆಗೆ ಕೌಂಟ್ಡೌನ್ ಶುರುವಾಗಿದೆ. ಜುಲೈ 25 ರಂದು ಸು ಫ್ರಮ್ ಸೋ ಸಿನಿಮಾ ಬಿಡುಗಡೆಯಾಗಲಿದೆ. ಹಾರರ್ ಕಾಮಿಡಿ ಶೈಲಿಯ ಸಿನಿಮಾ ಇದಾಗಿದ್ದು, ಚಿತ್ರ ಬಿಡುಗಡೆಗೂ ಮುನ್ನವೇ ಭಾರಿ ಸದ್ದು ಮಾಡ್ತಿದೆ.
ಇದನ್ನೂ ಓದಿ: ಮಗುವಿನಂತೆ ನಡೆಯಲು ಕಲಿಯುತ್ತಿರುವ ಶುಭಾಂಶು ಶುಕ್ಲಾ! – ಬಾಹ್ಯಾಕಾಶದಲ್ಲಿ 18 ದಿನ.. ಗಗನಯಾತ್ರಿ ಆರೋಗ್ಯ ಹೇಗಿದೆ?
ಹೌದು, ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್ ಸೋ ಸಿನಿಮಾ ಈಗಾಗಲೇ ಮಂಗಳೂರು ಶಿವಮೊಗ್ಗದಲ್ಲಿ ಪ್ರೀಮಿಯರ್ ಶೋ ಆಗಿದೆ. ಹಾರರ್ ಕಾಮಿಡಿ ಶೈಲಿಯ ಸಿನಿಮಾ ಇದಾಗಿದ್ದು, ಭಾರಿ ನಿರೀಕ್ಷೆ ಹುಟ್ಟು ಹಾಕಿದೆ. ಇದೀಗ ಪ್ರೀಮಿಯರ್ ಶೋಗೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ರಿಲೀಸ್ಗೆ ನಾಲ್ಕು ದಿನ ಇರುವಾಗಲೇ ಪ್ರೀಮಿಯರ್ ಶೋ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಜ್ ಬಿ ಶೆಟ್ಟಿ, ನಾವು ಏನೇ ಮಾಡಿದರೂ ಜನರ ಮುಂದೆ ಇಡಲೇಬೇಕು. ನಾವು ಸಿನಿಮಾ ಪ್ರಮೋಟರ್ಗಳಲ್ಲ, ಸಿನಿಮಾ ಮಾಡುವವರು. ಒಂದೆ ಮೊಟ್ಟೆಯ ಕಥೆ ಮಾಡುವಾಗ ರಿಸ್ಕ್ ಎಂದು ಹೇಳಿದರು. ಆದರೂ ಮಾಡಿದೆ. ಹಳೆ ಪ್ರಮೋಷನಲ್ ಸ್ಟೈಲ್ಗಳು ನನಗೆ ಇಷ್ಟ ಆಗೋದಿಲ್ಲ. ಸಂದರ್ಶನದಲ್ಲಿ ಕುಳಿತುಕೊಂಡು ನಮ್ಮ ಸಿನಿಮಾ ಹೀಗಿದೆ, ಹಾಗಿದೆ ಎಂದು ಹೇಳುವ ಬದಲು ಸಿನಿಮಾನೇ ತೋರಿಸಬಹುದಲ್ಲ. ಪ್ರೀಮಿಯರ್ ಶೋಗೆ ಜನರು ಒಳ್ಳೆಯ ರೆಸ್ಪಾನ್ಸ್ ಕೊಟ್ಟಿದ್ದಾರೆ. ಇದರಿಂದ ಮೊದಲ ದಿನ ಚಿತ್ರಕ್ಕೆ ಯಾವ ರೀತಿಯಲ್ಲಿ ರೆಸ್ಪಾನ್ಸ್ ಬರುತ್ತದೆ ಎಂಬ ಕುತೂಹಲ ಇದೆ. ಒಂದೊಮ್ಮೆ ಈ ತಂತ್ರ ವರ್ಕ್ ಆಯಿತು ಎಂದರೆ ಇಂಡಸ್ಟ್ರಿಯಲ್ಲಿ ಅದು ದೊಡ್ಡ ಬದಲಾವಣೆ ತಂದಂತೆ ಆಗುತ್ತದೆ. ಸಿನಿಮಾ ಮಾಡಿದವರಿಗೆ ತುಂಬಾನೇ ಭಯ ಇದೆ. ಅದು ಹೋಗಬೇಕು ಎಂದು ರಾಜ್ಬಿ ಶೆಟ್ಟಿ ಹೇಳಿದ್ದಾರೆ.

ನೋಡಿರಿ

