ರಮೋಲಾ ರಕ್ಷಕ್‌ ರಿಯಲ್‌ ಲವ್?‌ – ವೇದಿಕೆಯಲ್ಲೇ ರಟ್ಟಾಯ್ತು ಗುಟ್ಟು!

ರಮೋಲಾ ರಕ್ಷಕ್‌ ರಿಯಲ್‌ ಲವ್?‌ – ವೇದಿಕೆಯಲ್ಲೇ ರಟ್ಟಾಯ್ತು ಗುಟ್ಟು!

ಭರ್ಜರಿ ಬ್ಯಾಚುಲರ್ಸ್‌ ಈಗ ಅಂತಿಮ ಹಂತಕ್ಕೆ ಬಂದಿದೆ. ಈ ಶೋನಿಂದ ಬ್ಯಾಚುಲರ್ಸ್‌ ಸಾಕಷ್ಟು ವಿಚಾರಗಳನ್ನ ಕಲಿತಿದ್ದಾರೆ. ಈ ಶೋನಲ್ಲಿ ಫ್ಯೂಚರ್‌ ವೈಪ್‌ ನ ಹೇಗೆ ನೋಡಿಕೊಳ್ಳಬೇಕು ಬೇಕು ಅಂತ ಕೆಲ ಸ್ಪರ್ಧಿಗಳು ಕಲಿತಿದ್ರೆ.. ಇನ್ನೂ ಕೆಲವರು ಇವ್ರೆ ನನ್ನ ಫ್ಯೂಚರ್‌ ಜೋಡಿ ಅನ್ನೋತರ ಆಡ್ತಿದ್ದಾರೆ.. ಸ್ಪರ್ಧಿಗಳು ಕೊಡೂ ಸರ್‌ಪ್ರೈಸ್‌, ಕೆಲ ಸ್ಪರ್ಧಿಗಳು ಹೊಡಿಯೋ ಡೈಲಾಗ್ಸ್‌ ರಿಯಲ್‌ ಪ್ರೇಮಿಗಳನ್ನೇ ನಾಚಿಸುವಂತಿದೆ. ಇದೀಗ ರಕ್ಷಕ್‌ ಹಾಗೂ ರಮೋಲಾ ಜೋಡಿ ವೀಕ್ಷಕರನ್ನ ಮೋಡಿ ಮಾಡುತ್ತಿದೆ.. ಇದೀಗ ರಕ್ಷಕ್‌ ಹಾಗೂ ರಮೋಲಾ ರಿಯಲ್‌ ಜೋಡಿಗಳಾದ್ರೆ ಒಳ್ಳೆದು ಅಂತಾ ವೀಕ್ಷಕರು ಹೇಳ್ತಿದ್ದಾರೆ.. ಇದೀಗ ರಕ್ಷಕ್‌ ರಮೋಲಾಗಾಗಿ ಏನ್‌ ಬೇಕಾದ್ರೂ ಮಾಡ್ತೀನಿ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಮಗುವಿನಂತೆ ನಡೆಯಲು ಕಲಿಯುತ್ತಿರುವ ಶುಭಾಂಶು ಶುಕ್ಲಾ!  – ಬಾಹ್ಯಾಕಾಶದಲ್ಲಿ 18 ದಿನ..  ಗಗನಯಾತ್ರಿ ಆರೋಗ್ಯ ಹೇಗಿದೆ?

ಭರ್ಜರಿ ಬ್ಯಾಚುಲರ್ಸ್‌ ಈಗ ಕೊನೆಯ ಹಂತಕ್ಕೆ ತಲುಪಿದೆ. ಎಲ್ಲಾ ಸ್ಪರ್ಧಿಗಳ ಕಣ್ಣು ಈಗ ಟ್ರೋಫಿ ಮೇಲಿದೆ. ಆದ್ರೀಗ ಕೆಲ ಜೋಡಿ ಮಾತ್ರ ರಿಯಲ್‌ ಪ್ರೇಮಿಗಳಂತೆ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಅವ್ರ ಬೇಕು ಬೇಡಗಳನ್ನ ತಿಳಿದುಕೊಂಡಿದ್ದಾರೆ. ಈ ಶೋನಲ್ಲಿ ರಕ್ಷಕ್‌ ಹಾಗೂ ರಮೋಲಾ ಜೋಡಿ ಸಖತ್‌ ಸೌಂಡ್‌ ಮಾಡ್ತಿದೆ. ಶೋ ಆರಂಭದಲ್ಲಿ ರಕ್ಷಕ್‌ ಹಾವ ಭಾವ ಬೇರೆ ರೀತಿಯಲ್ಲೇ ಇತ್ತು..  ಆಟಿಟ್ಯೂಡ್‌ ಮನುಷ್ಯ.. ಮಾತು ಮಾತಿಗೂ ಸಿಟ್ಟಾಗದತಿದ್ರು.. ರಕ್ಷಕ್​ಗೆ ರಮೋಲಾ ಮೆಂಟರ್ ಆದ್ಮೇಲೆ ಕಂಪ್ಲೀಟ್‌ ಚೇಂಜ್‌ ಆಗಿದ್ದಾರೆ. ರಕ್ಷಕ್​​ ನ ಸಾಕಷ್ಟು  ತಿದ್ದುವ ಕೆಲಸ ಮಾಡಿದ್ದಾರೆ. ಈ ಮೊದಲು ತುಂಬಾನೇ ರೇಗುತ್ತಿದ್ದ ರಕ್ಷಕ್​ ಕೂಲ್‌ ಪರ್ಸನ್‌ ಆಗಿದ್ದಾರೆ.. ಇಷ್ಟೆಲ್ಲ ತಿದ್ದಿದ್ದ ರಮೋಲಾ ಮೇಲೆಯೇ ರಕ್ಷಕ್​ಗೆ ಪ್ರೀತಿ ಮೂಡಿದ್ಯಾ ಅನ್ನೋ ಪ್ರಶ್ನೆ ಈಗ ವೀಕ್ಷಕರನ್ನ ಕಾಡ್ತಿದೆ.

ಹೌದು ರಕ್ಷಕ್‌ ಹಾಗೂ ರಮೋಲಾ ಫುಲ್‌ ಕ್ಲೋಸ್‌ ಆಗಿದ್ದಾರೆ. ರಕ್ಷಕ್‌ ಬರ್ತ್‌ಡೇಗೂ ರಮೋಲಾ ಬಂದಿದ್ರು.. ಅದದ್ಮೇಲೆ ರಮೋಲಾರಂತ ಸೊಸೆ ಸಿಕ್ರೆ ಒಳ್ಳೆದು ಅಂತಾ ರಕ್ಷಕ್‌ ತಾಯಿ ಹೇಳಿದ್ರು. ಇತ್ತೀಚೆಗಷ್ಟೇ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ರಕ್ಷಕ್ ಸ್ಟುಡೆಂಟ್ ಅಲ್ಲ, ರಮೋಲಾ ಮೆಂಟರ್ ಅಲ್ಲ.. ಅವರಿಬ್ರ ಮಧ್ಯೆ ಬೇರೆ ತರ ಫೀಲಿಂಗ್ಸ್‌ ಇದೆ ಅಂತ ಹೇಳಿದ್ರು.. ಕಳೆದ ವಾರ ಸಂಸಾರಿ v/s ಬ್ರಹ್ಮಚಾರಿ ರೌಂಡ್‌ ಇತ್ತು.. ಇದ್ರಲ್ಲಿ ರಮೋಲಾರನ್ನ ರಕ್ಷಕ್‌ ಎತ್ತಿಕೊಂಡು ನೇತಾಡ್ಬೇಕಿತ್ತು.. ರಕ್ಷಕ್‌ ಈ ಟಾಸ್ಕ್‌ನ ಕಂಪ್ಲೀಟ್‌ ಮಾಡಿದ್ದಾರೆ. ಬಳಿಕ ಈ ಎನರ್ಜಿಗೆ ಏನ್‌ ಕಾರಣ ಅಂತಾ ಕೇಳಿದಾಗ ರಕ್ಷಕ್‌ ನನ್ನ ಎನರ್ಜಿಗೆ ರಮೋಲಾ ಕಾರಣ ಅಂತ ಹೇಳಿದ್ದಾರೆ..

ರಕ್ಷಕ್‌, ರಮೋಲಾ ಹಾಗೂ ಲಾವಣ್ಯ ಶಶಿ ಮಧ್ಯೆ ಟಾಸ್ಕ್‌ ನಡೆದಿತ್ತು. ಈ ವೇಳೆ ರಕ್ಷಕ್‌ ರಮೋಲಾ ಸರಿಯಾದ ಉತ್ತರ ಕೊಟ್ಟಿದ್ದಾರೆ. ಅದಾದ ಬಳಿಕ ನಿರಂಜನ್‌ ನಂಬಿಕೆಯ ಆಟ ಹೇಗಿತ್ತು ಅಂತ ಕೇಳಿದ್ದಾರೆ. ರಕ್ಷಕ್‌ ಮೇಲೆ ತುಂಬಾ ನಂಬಿಕೆ ಇದೆ ಕೈ ಜಾರಿದ್ರೂ ನನ್ನನ್ನ ಬಿಟ್ಟಿಲ್ಲ ಅಂತ ಹೇಳಿದ್ದಾರೆ. ಬಳಿಕ ರಕ್ಷಕ್‌ ಈ ನಿನ್ನ ಒಳಗಿನ ಶಕ್ತಿಯ ಸೀಕ್ರೆಟ್‌ ಏನು ಅಂತ ಕೇಳಿದ್ದಾರೆ. ಆಗ ರಮೋಲಾ ಎಂದು ಹೇಳಿದ್ದಾರೆ. ಅದ್ಕೆ ರಮೋಲಾ ಭರ್ಜರಿ ಬ್ಯಾಚುಲರ್ಸ್‌ ಅಂತಾ ಹೇಳಿದ್ದಾರೆ. ಬಳಿಕ ಈ ಟಾಸ್ಕ್‌ನಲ್ಲಿ ರಮೋಲಾ ರಕ್ಷಕ್‌ ಗೆದ್ದಿದ್ದಾರೆ. ಶಶಿ ಲಾವಣ್ಯ ಸೋತಿದ್ದಾರೆ. ಆಗ ರಕ್ಷಕ್‌ ಬಳಿ ಎಷ್ಟು ಖುಷಿಯಾಗ್ತಿದೆ ಅಂತಾ ಕೇಳಿದ್ದಾರೆ. ಏನ್‌ ಅಣ್ಣ ಅವ್ರಿಗೆ ಮದ್ವೆ ಆಗಿದೆ.. ನಮ್ಗೆ ಓಪನ್‌ ಆಗಿ ಮದ್ವೆ ಆಗಿಲ್ಲ ಅಂತ ಹೇಳೊಕ್ಕೆ ಬಂದು ಅರ್ಧದಲ್ಲೇ ಮಾತು ನಿಲ್ಲಿಸಿ ಸಾರಿ ಕೇಳಿದ್ರು. ಬಳಿಕ ರವಿಚಂದ್ರನ್‌ ಕೂಡ ಇವರಿಬ್ರ ಮಧ್ಯೆ ಇರೋ ಪ್ರೀತಿ ರಕ್ಷಕ್‌ ಗೆ ಸ್ಟ್ರೆಂಥ್‌ ಆಗಿದೆ. ಈವರಿಬ್ರನ್ನ ನೋಡಿದ್ರೆ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಒಂದು ಜೋಡಿ ಹೊರ ಹೋಗುತ್ತಾ ಅನ್ನೋದು ಡೌಟ್‌ ಅಂತಾ ಹೇಳಿದ್ದಾರೆ.

ಇನ್ನು ರಕ್ಷಕ್‌ ಕೂಡ ರಮೋಲಾರನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವ್ರ ಬೇಕು ಬೇಡಗಳನ್ನ ತಿಳ್ಕೊಂಡಿದ್ದಾರೆ. ಇತ್ತೀಚೆಗೆ ರಮೋಲಾ ತಿಂಗಳಿಗೆ 50 ಸಾವಿರ ಖರ್ಚು ಮಾಡ್ತಾರೆ. ಇಷ್ಟೆಲ್ಲಾ ಖರ್ಚು ಮಾಡೋದಿಕ್ಕೆ ನಿಮಗೆ ಸಾಧ್ಯನಾ ಅಂತಾ ಹೇಳಿದಾಗ ನಾನು ಲಕ್ಷ ಲಕ್ಷ ಖರ್ಚು ಮಾಡೋದಿಕ್ಕೂ ರೆಡಿ ಇದ್ದೀನಿ ಅಂತಾ ಹೇಳಿದ್ದಾರೆ. 6 ತಿಂಗಳು ಓಕೆ ಮಗಾ.. ಮುಂದೆ ಕಷ್ಟ ಅಂತಾ ನಿರಂಜನ್‌ ಹೇಳಿದ್ದಾರೆ. ಇದೀಗ ರಕ್ಷಕ್‌ ವರ್ತನೆ ನೋಡಿದಾಗ ರಮೋಲಾ ಮೇಲೆ ಸಿಕ್ಕಾಪಟ್ಟೆ ಲವ್‌ ಆಗಿದೆ ಅಂತಾ ವೀಕ್ಷಕರು ಹೇಳ್ತಿದ್ದಾರೆ.

Shwetha M