ತೆರಿಗೆ ನೋಟಿಸ್ ವಿರುದ್ಧ ಸಣ್ಣ ವ್ಯಾಪಾರಿಗಳಿಂದ ಪ್ರತಿಭಟನೆ – ಇಂದಿನಿಂದ 2 ದಿನ ಹಾಲು ಉತ್ಪನ್ನ ಮಾರಾಟ ಬಂದ್‌

ತೆರಿಗೆ ನೋಟಿಸ್ ವಿರುದ್ಧ ಸಣ್ಣ ವ್ಯಾಪಾರಿಗಳಿಂದ ಪ್ರತಿಭಟನೆ – ಇಂದಿನಿಂದ 2 ದಿನ ಹಾಲು ಉತ್ಪನ್ನ ಮಾರಾಟ ಬಂದ್‌

40ಲಕ್ಷಕ್ಕೂ ಅಧಿಕ ವ್ಯವಹಾರ ನಡೆಸ್ತಿರೋ ಮಾರಾಟಗಾರರು, ಉದ್ಯಮಿಗಳು ಜಿಎಸ್​ಟಿ ಕಟ್ಟಬೇಕು ಎಂದು ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ ನೀಡಿದೆ. ಇದೀಗ ಜಿಎಸ್‌ಟಿ ಟ್ಯಾಕ್ಸ್ ನೋಟಿಸ್‌ಗೆ ಅಸಮಾಧಾನ ಹೊರಹಾಕಿರುವ ಸಣ್ಣ ವರ್ತಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಲಿಕಾನ್‌ ಸಿಟಿಯ ಕೆಲವು ಕಡೆ ಬುಧವಾರ ಹಾಗೂ ಗುರುವಾರ ಎರಡು ದಿನಗಳ ಕಾಲ ಹಾಲು ಮಾರಾಟ ನಿಲ್ಲಿಸಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಮನೆಯಲ್ಲಿ ಪೂಜೆ ಮಾಡೋ ಶಿವಲಿಂಗದ ಗಾತ್ರ ಎಷ್ಟಿರಬೇಕು, ಪೂಜೆ ಹೇಗಿರಬೇಕು? – ಯಾವೆಲ್ಲಾ ನಿಯಮ ಪಾಲಿಸಬೇಕು?

ಕಳೆದ 2021 ರಿಂದ 2024 ವರೆಗೆ ಪ್ರತಿ ವರ್ಷ 40 ಲಕ್ಷ ರೂ.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ವಾಣಿಜ್ಯ ತೆರಿಗೆ ಇಲಾಖೆ ಟ್ಯಾಕ್ಸ್‌ ಕಟ್ಟುವಂತೆ ನೋಟಿಸ್ ‌ ನೀಡಿದೆ.ಇದು ಹಲವು ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಹಲವು ಅಂಗಡಿಗಳಲ್ಲಿ ಯುಪಿಐ ಪೇಮೆಂಟ್​ ಅನ್ನು ರದ್ದುಗೊಳಿಸಿದ್ದಾರೆ. ಇದೀಗ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟ ಬೆನ್ನಲ್ಲೆ ಇಂದಿನಿಂದ ಎರಡು ದಿನ ಬೇಕರಿ ಕಾಂಡಿಮೆಂಟ್‌ಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ. ಹಲವು ಕಾಂಡಿಮೆಂಟ್, ಬೇಕರಿಗಳಲ್ಲಿ ಬೆಳಗ್ಗೆಯೇ ನೋ ಟೀ ಕಾಫಿ, ಓನ್ಲಿ ಲೆಮನ್ ಟೀ, ಬ್ಲ್ಯಾಕ್ ಟೀ ಅನ್ನೋ ಬೋರ್ಡ್‌ಗಳನ್ನ ಹಾಕಲಾಗಿದೆ.

ಬೆಂಗಳೂರಿನ ರಾಜಾಜಿನಗರ ಸೇರಿ ಕೆಲವು ಕಡೆ ಇಂದಿನಿಂದ ಮೂರು ದಿನ ಹಾಲು, ಮೊಸರು ಮಾರುವುದಿಲ್ಲ. ಟ್ಯಾಕ್ಸ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಟೀ, ಕಾಫಿಯಲ್ಲಿ ಹಾಲು ಬಳಸುವುದಿಲ್ಲ. ಲೆಮೆನ್ ಮತ್ತು ಬ್ಲ್ಯಾಕ್‌ ಟೀ ಅಷ್ಟೇ ಮಾರುತ್ತೇವೆ ಎಂದು ಕಾಂಡಿಮೆಂಟ್ಸ್ ವ್ಯಾಪಾರಿಗಳು ಬೋರ್ಡ್ ಹಾಕಿದ್ದಾರೆ. ಆದರೆ, ಹಲವು ಕಡೆ ಎಂದಿನಂತೆ ಹಾಲು ಮಾರಾಟ ನಡೆಯುತ್ತಿದೆ. ಇಂದು ಕಾರ್ಮಿಕ ಪರಿಷತ್‌ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮನವಿ ಮಾಡಲಿದ್ದಾರೆ. ಬಸವೇಶ್ವರ ನಗರ, ಮಾಗಡಿ ರಸ್ತೆ ಸುತ್ತಮುತ್ತ ಪ್ರತಿಭಟನೆಗೆ ಮುಂದಾಗಲಿದ್ದಾರೆ.

Shwetha M