ಹೆಚ್ಚುವರಿ ರನ್ಸ್ ನೀಡಿಯೇ ಸೋತ ಭಾರತ – 3 ಪಂದ್ಯ.. 150 ರನ್ಸ್.. ಗೆಲ್ಲೋದೇಗೆ?
4ನೇ ಫೈಟ್.. ಬೌಲರ್ ಗಳೇ ಡಿಸೈಡರ್ಸ್!

ಹೆಚ್ಚುವರಿ ರನ್ಸ್ ನೀಡಿಯೇ ಸೋತ ಭಾರತ – 3 ಪಂದ್ಯ.. 150 ರನ್ಸ್.. ಗೆಲ್ಲೋದೇಗೆ?4ನೇ ಫೈಟ್.. ಬೌಲರ್ ಗಳೇ ಡಿಸೈಡರ್ಸ್!

ಕ್ರಿಕೆಟ್​ನಲ್ಲಿ ಒಂದು ಟೀಂ ಗೆಲ್ಲೋಕೆ ಎರಡು ಕಾರಣ ಇರುತ್ತೆ. ಒಂದು ಅದ್ಭುತ ಪ್ರದರ್ಶನ ನೀಡಿ ಗೆಲ್ಲೋದು. ಎರಡನೆಯದ್ದು ಎದುರಾಳಿ ಪ್ಲೇಯರ್​ಗಳ ಮಿಸ್ಟೇಕ್ಸ್​ನಿಂದಲೇ ಗೆಲ್ಲೋದು. ಸದ್ಯ ಇಂಗ್ಲೆಂಡ್ ಎರಡು ಪಂದ್ಯಗಳನ್ನ ಗೆದ್ದಿರೋದು ಈ ಎರಡನೇ ರೀಸನ್​ನಿಂದ. ಅಂದ್ರೆ ಭಾರತದ ಆಟಗಾರರು ಮಾಡಿದ ಮಿಸ್ಟೇಕ್ಸ್​ನಿಂದಾಗಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಎಕ್ಸ್​ಟ್ರಾ ರನ್ಸ್ ಕೊಟ್ಟೂ ಕೊಟ್ಟೂ ಟೀಂ ಇಂಡಿಯಾ ಆಟಗಾರರೇ ಆಂಗ್ಲರನ್ನ ಗೆಲ್ಲಿಸಿದ್ರು.

ಇದನ್ನೂ ಓದಿ : ನಾಲ್ಕನೇ ಪಂದ್ಯಕ್ಕೂ ಮುನ್ನ ನಾಲ್ವರು ಆಟಗಾರರಿಗೆ ಇಂಜುರಿ – ಭಾರತದ ಮುಂದೀಗ ಬಿಗ್ ಚಾಲೆಂಜಸ್!

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಫೀಲ್ಡಿಂಗ್ ಮೊದ್ಲೇ ಕಳಪೆಯಾಗಿದೆ. ಮಿಸ್ ಫೀಲ್ಡ್, ಕ್ಯಾಚ್ ಡ್ರಾಪ್​ ಸಿಕ್ಕಾಪಟ್ಟೆ ಆಗಿತ್ತು. ಈಗ ಎಕ್ಸ್​ಟ್ರಾ ರನ್ಸ್ ವಿಚಾರದಲ್ಲೂ ದಾರಾಳವಾಗಿ ಬಿಟ್ಟುಕೊಟ್ಟಿದ್ದಾರೆ. ಹೆಡಿಂಗ್ಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಆಟಗಾರರು 34 ಎಕ್ಸ್​ಟ್ರಾ ರನ್ಸ್ ಬಿಟ್ಟು ಕೊಟ್ಟಿದ್ರು. ಸೆಕೆಂಡ್ ಇನ್ನಿಂಗ್ಸ್​ನಲ್ಲಿ 21 ರನ್ಸ್.. ಸೋ ಎರಡೂ ಸೇರಿ ಒಂದು ಪಂದ್ಯದಲ್ಲಿ 55 ರನ್ಸ್ ಬಿಟ್ಟುಕೊಟ್ಟಿದ್ರು. ಎರಡನೇ ಪಂದ್ಯದಲ್ಲಿ 32 ರನ್ಸ್ ಕೊಟ್ಟಿದ್ರು. ಬಟ್ ಮೂರನೇ ಮ್ಯಾಚ್​ನಲ್ಲಂತೂ ಭಾರತದ ಪ್ಲೇಯರ್​ಗಳಿಂದ ಎಕ್ಸ್​ಟ್ರಾ ರನ್​ಗಳ ಮಳೆಯೇ ಸುರಿದಿತ್ತು.

ಹೆಚ್ಚುವರಿ ರನ್ ಗಳೇ ದುಬಾರಿ!

ಮೊದಲ ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್​ನಲ್ಲಿ 192 ರನ್

ಟೀಂ ಇಂಡಿಯಾವನ್ನು 170 ರನ್​ಗಳಿಗೆ ಆಲೌಟ್ ಮಾಡಿ 22 ರನ್‌ ಗೆಲುವು

ಆಂಗ್ಲರು ಬ್ಯಾಟ್ ​ನಿಂದ ಕಲೆಹಾಕಿದ್ದು ಕೇವಲ 160 ರನ್ ಮಾತ್ರ

ಇಂಗ್ಲೆಂಡ್‌ ತಂಡ 193 ರನ್ ​ಗಳ ಟಾರ್ಗೆಟ್ ಕೊಡೋಕೆ ಕಾರಣ ಹೆಚ್ಚುವರಿ ರನ್ಸ್

ವೈಡ್, ನೋ ಬಾಲ್, ಬೈಸ್, ಲೆಗ್ ಬೈಸ್ ​ಗಳ ಮೂಲಕ ಫ್ರೀಯಾಗಿ ನೀಡಿದ 32 ರನ್

ಇಂಗ್ಲೆಂಡ್‌ ತಂಡ 387 ರನ್, ಆಟಗಾರರು 356 ರನ್​ ಗಳನ್ನು ಬಾರಿಸಿದರೆ

ಟೀಂ ಇಂಡಿಯಾ ಬೌಲರ್ ​ಗಳು ಹೆಚ್ಚುವರಿಯಾಗಿ 31 ರನ್ ​ಗಳನ್ನು ಬಿಟ್ಟುಕೊಟ್ಟರು

ಭಾರತ 375 ರನ್​ಗಳನ್ನು ಬಾರಿಸಿದರೆ ಕೇವಲ 12 ರನ್​ ಗಳನ್ನು ಹೆಚ್ಚುವರಿ

ಇಂಗ್ಲೆಂಡ್‌ ಬ್ಯಾಟಿಂಗ್​ನಲ್ಲಿ 160 ರನ್​ಗಳನ್ನು ಕಲೆಹಾಕಿದರೆ, 32 ರನ್​ ಹೆಚ್ಚುವರಿ

ಎರಡನೇ ಇನ್ನಿಂಗ್ಸ್​ ನಲ್ಲಿ ಭಾರತ 170 ರನ್ ​ಗಳಿಗೆ ಆಲೌಟ್, 18 ರನ್ ಎಕ್ಸ್ ಟ್ರಾ
ಕೊನೇ ಪಂದ್ಯದಲ್ಲಿ ಬರೋಬ್ಬರಿ 63 ರನ್, ಇಂಗ್ಲೆಂಡ್‌ ತಂಡ 30 ರನ್ ಹೆಚ್ಚುವರಿ

ಇಲ್ಲಿ ಭಾರತದ ಬೌಲರ್ಸ್​ಗೆ ಹೋಲಿಸಿದ್ರೆ ಇಂಗ್ಲೆಂಡ್ ಪ್ಲೇಯರ್ಸ್ ಒಳ್ಳೆ ಪ್ರದರ್ಶನ ನೀಡಿದ್ದಾರೆ. ಸರಣಿಯಲ್ಲಿ ಕಳೆದ ಮೂರು ಪಂದ್ಯಗಳಿಂದ ಇಂಗ್ಲೆಂಡ್ ಆಟಗಾರರು 111 ರನ್ಸ್ ಬಿಟ್ಟುಕೊಟ್ಟಿದ್ದಾರೆ. ಹಾಗೇ ಭಾರತದ ಪ್ಲೇಯರ್ಸ್ ಮೂರು ಪಂದ್ಯಗಳಿಂದ 150 ರನ್ಸ್ ಎಕ್ಸ್​​ಟ್ರಾ ಕೊಟ್ಟಿದ್ದಾರೆ.

Shantha Kumari