ಮ್ಯಾಂಚೆಸ್ಟರ್ ಕೋಟೆ ಭೇದಿಸುತ್ತಾ ಭಾರತ? – 89 ವರ್ಷಗಳ ಶಾಪ ವಿಮೋಚನೆಯಾಗುತ್ತಾ?
ಚರಿತ್ರೆ ಸೃಷ್ಟಿಯೋ.. ಸರಣಿ ಕೈತಪ್ಪುತ್ತೋ?

ಬ್ಯಾಟಿಂಗ್ ಬೊಂಬಾಟ್. ಬೌಲಿಂಗ್ ಸೂಪರ್ ಸ್ಟ್ರಾಂಗ್. ಟೀಂ ಇಂಡಿಯಾ ಪರ ಸಾಲು ಸಾಲು ಶತಕಗಳು ಬಂದಿವೆ. ಬೌಲಿಂಗ್ನಲ್ಲೂ ಫೈಫರ್ ಮ್ಯಾರಥಾನ್ ನಡೀತಿದೆ. ಹೀಗಿದ್ರೂ ಭಾರತ 2 ಪಂದ್ಯಗಳನ್ನ ಸೋಲಬೇಕಾಯ್ತು. ಬಟ್ ನೆಕ್ಸ್ಟ್ ಮ್ಯಾಚಲ್ಲೂ ಇದೇ ತಪ್ಪು ಮಾಡಿದ್ರೆ ಸರಣಿ ಕೈತಪ್ಪಿ ಹೋಗೋದು ಪಕ್ಕಾ. ಹೀಗಾಗಿ ಪಂದ್ಯವನ್ನ ಗೆಲ್ಲೋದ್ರ ಜೊತೆಗೆ ಮ್ಯಾಂಚೆಸ್ಟರ್ ಕೋಟೆಯನ್ನ ಬೇಧಿಸಲೇಬೇಕಿದೆ. ಒಮ್ಮೆಯೂ ಗೆಲ್ಲದ ಮೈದಾನದಲ್ಲಿ ಗೆದ್ದು ಶಾಪ ವಿಮೋಚನೆ ಮಾಡಿಕೊಳ್ಬೇಕಿದೆ. ಇಷ್ಟು ವರ್ಷಗಳ ಕಾಲ ಟೀಂ ಇಂಡಿಯಾದಲ್ಲಿ ಸಾಧ್ಯವಾಗದ್ದನ್ನ ಗಿಲ್ ಬಳಗ ಸಾಧಿಸಿ ತೋರಿಸಬೇಕಿದೆ. ಎಡ್ಜ್ ಬಾಸ್ಟನ್ನಲ್ಲಿ ಮೊದಲ ಬಾರಿಗೆ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತ ಮ್ಯಾಂಚೆಸ್ಟರ್ನಲ್ಲೂ ಚರಿತ್ರೆ ಸೃಷ್ಟಿಸಬೇಕಿದೆ.
ಇದನ್ನೂ ಓದಿ : ನಾಲ್ಕನೇ ಪಂದ್ಯಕ್ಕೂ ಮುನ್ನ ನಾಲ್ವರು ಆಟಗಾರರಿಗೆ ಇಂಜುರಿ – ಭಾರತದ ಮುಂದೀಗ ಬಿಗ್ ಚಾಲೆಂಜಸ್!
ನಾಲ್ಕನೇ ಪಂದ್ಯ ನಡೆಯಲಿರುವ ಓಲ್ಡ್ ಟ್ರಾಫರ್ಡ್ನಲ್ಲಿ ಭಾರತ 1936 ರಿಂದ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ. ವಿಪರ್ಯಾಸ ಅಂದ್ರೆ ಈ ಮೈದಾನದಲ್ಲಿ ಒಂದೇ ಒಂದು ಗೆಲುವನ್ನೂ ದಕ್ಕಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಈ 9 ಪಂದ್ಯಗಳಲ್ಲಿ 4 ರಲ್ಲಿ ಸೋಲು ಕಂಡಿದ್ದರೆ, 5 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಆದ್ರೆ ಈ ಬಾರಿ ಶಾಪ ವಿಮೋಚನೆಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಬರ್ಮಿಂಗ್ಹ್ಯಾಮ್ನಲ್ಲೂ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಭಾರತ ಶುಭ್ಮನ್ ಗಿಲ್ ನಾಯಕತ್ವದಲ್ಲಿ ಈ ಶಾಪದಿಂದ ಹೊರಬಂದು ಇತಿಹಾಸ ಸೃಷ್ಟಿಸಬೇಕಿದೆ. ಭಾರತದ ಆಟಗಾರರಾದ ಸೈಯದ್ ಮುಷ್ತಾಕ್ ಅಲಿ, ವಿಜಯ್ ಮರ್ಚೆಂಟ್, ಅಬ್ಬಾಸ್ ಅಲಿ ಬೇಗ್, ಪಾಲಿ ಉಮ್ರಿಗರ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ಮೊಹಮ್ಮದ್ ಅಜರುದ್ದೀನ್, ಮತ್ತು ಸಚಿನ್ ತೆಂಡೂಲ್ಕರ್ ಈ ಮೈದಾನದಲ್ಲಿ ಶತಕಗಳನ್ನು ಬಾರಿಸಿದ್ದಾರೆ. ಬಟ್ ಯಾರೊಬ್ಬರಿಂದಲೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ.
ಮ್ಯಾಂಚೆಸ್ಟರ್ ಮೈದಾನ ಇಂಗ್ಲೆಂಡ್ ಪಾಲಿಗೆ ಒಂಥರಾ ಲಕ್ಕಿ ಪಿಚ್ ಇದ್ದ ಹಾಗೇ. ಈ ಮೈದಾನದಲ್ಲಿ ಇಂಗ್ಲೆಂಡ್ ತಂಡ ಇದುವರೆಗೆ 84 ಪಂದ್ಯಗಳನ್ನಾಡಿದೆ. ಇದರಲ್ಲಿ 33ರಲ್ಲಿ ಗೆಲುವನ್ನ ಕಂಡಿದ್ರೆ 15ರಲ್ಲಿ ಸೋಲು ಕಂಡಿದೆ. 15 ಸೋಲುಗಳಲ್ಲಿ ಆಸ್ಟ್ರೆಲಿಯಾ ವಿರುದ್ಧವೇ 8 ಸೋಲು ಕಂಡಿದೆ. ವೆಸ್ಟ್ ಇಂಡೀಸ್ ವಿರುದ್ದ 5, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನದ ವಿರುದ್ಧ ಒಂದು ಪಂದ್ಯ ಸೋಲು ಕಂಡಿದೆ. ಅದೆಲ್ಲಕ್ಕಿಂತ ಇಂಟ್ರೆಸ್ಟಿಂಗ್ ಅಂದ್ರೆ 2018ರಿಂದ ಇಂಗ್ಲೆಂಡ್ ಸೋಲೇ ಕಂಡಿಲ್ಲ. ಓಲ್ಡ್ ಟ್ರಾಫರ್ಡ್ನ ಪಿಚ್ ಪೇಸ್ ಬೌಲರ್ಗಳಿಗೆ ಸಹಾಯಕವಾಗಿದೆ. ಸೋ ಇಂಗ್ಲೆಂಡ್ನ ವೇಗದ ಬೌಲರ್ ಜೋಫ್ರಾ ಆರ್ಚರ್ ನೇತೃತ್ವದ ಬೌಲಿಂಗ್ ದಾಳಿಯು ಭಾರತಕ್ಕೆ ದೊಡ್ಡ ಸವಾಲಾಗಬಹುದು. ಇಂಗ್ಲೆಂಡ್ ತಂಡವು ಈ ಮೈದಾನದಲ್ಲಿ ಕೊನೆಯ ಬಾರಿಗೆ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಇನ್ನು ಭಾರತದ ಪರ ವೇಗದ ಬೌಲರ್ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಮೂರನೇ ವೇಗಿಯ ಆಯ್ಕೆ ಕಗ್ಗಂಟಾಗಿದೆ.
ಸದ್ಯ ಮೊದಲ ಪಂದ್ಯದಲ್ಲಿ ಐದೈದು ಶತಕ ಗಳಿಸಿಯೋ ಸೋತಿದ್ದ ಭಾರತ ಎರಡನೇ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರ ಡಬಲ್ ಸೆಂಚುರಿ ಪವರ್ನಲ್ಲಿ ಐತಿಹಾಸಿನ ಗೆಲುವು ಸಾಧಿಸಿತ್ತು. ಬಟ್ ಮೂರನೇ ಪಂದ್ಯದಲ್ಲಿ ಬ್ಯಾಟರ್ಗಳು ಕೈಕೊಟ್ಟಿದ್ರಿಂದ ಸೋಲಬೇಕಾಯ್ತು. ಇದೀಗ ನಾಲ್ಕನೇ ಪಂದ್ಯ ಇಡೀ ಸರಣಿಯ ದಿಕ್ಕನ್ನೇ ಬದಲಿಸಿದೆ.

ನೋಡಿರಿ

