ಬೀಚ್‌ನಲ್ಲಿ ಐಷಾರಾಮಿ ಕಾರಿನ ಜೊತೆ ಸ್ಟಂಟ್! – ಆಮೇಲೆ ಏನಾಯ್ತು ಗೊತ್ತಾ?

ಕೆಲವರಿಗೆ ಸುಮ್ನೆ ಕೂತ್ರೆ ನಿದ್ದೆ ಬರೋದೆ ಇಲ್ಲ ಅನ್ನೋತರ ಆಡ್ತಾರೆ.. ಏನಾದ್ರೂ ಕಿತಾಪತಿ ಮಾಡ್ತಾನೆ ಇರ್ತಾರೆ.. ಇಲ್ಲೊಬ್ಬ ಅಸಾಮಿ ಬೀಚ್‌ನಲ್ಲಿ ಕಾರು ಓಡಿಸಲು ಹೋಗಿ ಪೇಚಿಗೆ ಸಿಲುಕಿದ್ದಾನೆ. ಇದೀಗ ಇದ್ರ ಫೋಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ: ಹರ್ಷಿತ್ ರಾಣಾಗೆ ಟಿ20 ತಂಡದ ಕ್ಯಾಪ್ಟನ್ – ಯುವ ವೇಗಿಗೆ ಒಲಿದು ಬಂದ ಅದೃಷ್ಟ
ಇತ್ತೀಚಿನ ಯುವಕರಿಗೆ ಕೈಗೊಂದು ಕಾರ್ ಸಿಕ್ಕಿದ್ರೆ ಸಾಕು.. ಸಿಕ್ಕಿದ್ದೇ ಚಾನ್ಸ್ ಅಂತಾ ಸ್ಟಂಟ್ ಮಾಡೋಕೆ ಹೋಗ್ತಾರೆ. ಹೀಗೆ ಸ್ಟಂಟ್ ಮಾಡೋದು ಸೇಫಾ? ಇದ್ರಿಂದ ಮುಂದೆ ಏನಾದ್ರೂ ತೊಂದ್ರೆ ಆಗಲ್ವಾ ಅನ್ನೋದನ್ನ ಯಾವತ್ತೂ ಯೋಚನೆ ಮಾಡಲ್ಲ.. ಇದೀಗ ಇಲ್ಲೊಬ್ಬ ಬೀಚ್‌ನಲ್ಲಿ ಸ್ಟಂಟ್ ಮಾಡಲು ಹೋಗಿದ್ದಾನೆ.. ಪರಿಣಾಮ ಆತನ ಕಾರು ಮರಳಿನಲ್ಲಿ ಸಿಲುಕಿಕೊಂಡಿದೆ.
ಈ ಘಟನೆ ಸೂರತ್‍ನ ಡುಮಾಸ್ ಬೀಚ್‍ನಲ್ಲಿ ನಡೆದಿದೆ. ಡುಮಾಸ್ ಬೀಚ್‌ನಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಸ್ಟಂಟ್ ಮಾಡಿದ್ದಾನೆ. ಐಷಾರಾಮಿ ಮರ್ಸಿಡಿಸ್-ಬೆನ್ಜ್ ಕಾರಿನಲ್ಲಿ ಸ್ಟಂಟ್ ಮಾಡಲು ಹೋಗಿ ಅದು ಮರಳಿನಲ್ಲಿ ಸಿಲುಕಿಕೊಂಡಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ಯುವಕನ ನಡೆಗೆ ಈ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆದ ವಿಡಿಯೊದಲ್ಲಿ, ಕಾರು ಕರಾವಳಿಯ ಬಳಿ ಸಿಲುಕಿಕೊಂಡಿರುವುದನ್ನು ಮತ್ತು ಅದರಲ್ಲಿದ್ದವರು ಅದನ್ನು ಚಲಿಸಲು ಸಾಧ್ಯವಾಗದೆ ನೋಡುತ್ತಿರುವುದನ್ನು ಕಾಣಬಹುದು. ಸುರಕ್ಷತೆ ಮತ್ತು ಪರಿಸರ ಕಾಳಜಿಯಿಂದಾಗಿ ಡುಮಾಸ್ ಪ್ರದೇಶದಲ್ಲಿ ಇಂತಹ ಚಟುವಟಿಕೆಗಳಿಗೆ ನಿಷೇಧವಿದ್ದರೂ, ಬೀಚ್‌ನಲ್ಲಿ ವಾಹನ ಚಲಾಯಿಸಲಾಗಿದೆ ಎಂದು ವರದಿಯಾಗಿದೆ.

ನೋಡಿರಿ

