ಹರ್ಷಿತ್ ರಾಣಾಗೆ ಟಿ20 ತಂಡದ ಕ್ಯಾಪ್ಟನ್ – ಯುವ ವೇಗಿಗೆ ಒಲಿದು ಬಂದ ಅದೃಷ್ಟ

ಹರ್ಷಿತ್ ರಾಣಾಗೆ ಟಿ20 ತಂಡದ ಕ್ಯಾಪ್ಟನ್ – ಯುವ ವೇಗಿಗೆ ಒಲಿದು ಬಂದ ಅದೃಷ್ಟ

ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಯುವ ವೇಗಿ ಹರ್ಷಿತ್ ರಾಣಾ ಅವರಿಗೆ ನಾಯಕತ್ವದ ಪಟ್ಟ ಒಲಿದು ಬಂದಿದೆ. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ನಾಲ್ಕನೇ ಪಂದ್ಯಕ್ಕೂ ಮುನ್ನ ನಾಲ್ವರು ಆಟಗಾರರಿಗೆ ಇಂಜುರಿ – ಭಾರತದ ಮುಂದೀಗ ಬಿಗ್ ಚಾಲೆಂಜಸ್!

ಭಾರತ ತಂಡದಲ್ಲಿ ಹರ್ಷಿತ್ ರಾಣಾಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೆ, ಐಪಿಎಲ್‌ನಲ್ಲಿ ಯುವ ವೇಗಿ ಹರ್ಷಿತ್ ರಾಣಾ ಕಮಾಲ್ ಮಾಡಿದ್ದರು. ಇದೀಗ ಹರ್ಷಿತ್ ರಾಣಾಗೆ ನಾಯಕನ ಪಟ್ಟ ಸಿಕ್ಕಿದೆ. ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡಕ್ಕೆ ಹರ್ಷಿತ್ ರಾಣಾ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.

ಹರ್ಷಿತ್ ರಾಣಾ ದೆಹಲಿ ಪ್ರೀಮಿಯರ್ ಲೀಗ್ 2025 ರಲ್ಲಿ ನಾರ್ತ್ ದೆಹಲಿ ಸ್ಟ್ರೈಕರ್ಸ್ ತಂಡದ ನಾಯಕರಾಗಿ ತನ್ನ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಈ ಮೊದಲು ಹರ್ಷಿತ್ ರಾಣಾ ಭಾರತ ಎ ಪರ ಒಂದು ಪಂದ್ಯ ಆಡಿದ್ದರು. ಇದಾದ ನಂತರ ಅವರನ್ನು ಟೀಂ ಇಂಡಿಯಾಕ್ಕೂ ಆಯ್ಕೆ ಮಾಡಲಾಗಿತ್ತು. ಆದರೆ ಮೊದಲ ಟೆಸ್ಟ್ ನಂತರ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸಲಾಯಿತು. ಭಾರತಕ್ಕೆ ಬಂದಿರುವ ಹರ್ಷಿತ್​ಗೆ ಈಗ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ನಾಯಕತ್ವ ಸಿಕ್ಕಿದೆ. ನಾರ್ತ್ ದೆಹಲಿ ಸ್ಟ್ರೈಕರ್ಸ್​ ತಂಡ ಅವರನ್ನು 21 ಲಕ್ಷ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿದೆ. ದೆಹಲಿ ಪ್ರೀಮಿಯರ್ ಲೀಗ್ 2025 ರ ಅತ್ಯಂತ ದುಬಾರಿ ಆಟಗಾರ ಸಿಮರ್ಜೀತ್ ಸಿಂಗ್. ಈ ಬಲಗೈ ವೇಗದ ಬೌಲರ್ ಅನ್ನು 39 ಲಕ್ಷ ರೂ.ಗೆ ಸೆಂಟ್ರಲ್ ದೆಹಲಿ ಕಿಂಗ್ ತಂಡ ಖರೀದಿಸಿದೆ. ದಿಗ್ವೇಶ್ ರಾಥಿ ಅವರನ್ನು ಓಲ್ಡ್ ದೆಹಲಿ ತಂಡ 38 ಲಕ್ಷ ರೂ.ಗೆ ಖರೀದಿಸಿದೆ. ಅದೇ ಸಮಯದಲ್ಲಿ, ನಿತೀಶ್ ರಾಣಾ ಅವರನ್ನು ವೆಸ್ಟ್ ದೆಹಲಿ ಲಯನ್ಸ್ ತಂಡ 34 ಲಕ್ಷ ರೂ. ನೀಡಿ ಸೇರಿಸಿಕೊಂಡಿದೆ. ಸೆಹ್ವಾಗ್ ಅವರ ಮಗ ಆರ್ಯವೀರ್ ಕೂಡ ಈ ವರ್ಷ ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡಲಿದ್ದಾರೆ. ಇವರ ಜೊತೆಗೆ ವಿರಾಟ್ ಕೊಹ್ಲಿ ಅವರ ಸಹೋದರನ ಮಗ ಆರ್ಯವೀರ್ ಕೊಹ್ಲಿ ಕೂಡ ಈ ಬಾರಿ ಕಣಕ್ಕಿಳಿಯಲಿದ್ದಾರೆ.

Sulekha