ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್- ಇನ್ಮುಂದೆ ಬೆಳಗ್ಗೆ ಬಿರಿಯಾನಿ ಸಿಗುವುದು ಡೌಟ್

ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್- ಇನ್ಮುಂದೆ ಬೆಳಗ್ಗೆ ಬಿರಿಯಾನಿ ಸಿಗುವುದು ಡೌಟ್

ಹೊಸಕೋಟೆ ಬಿರಿಯಾನಿ ತುಂಬಾ ಫೇಮಸ್. ಮುಂಜಾನೆ 4 ಗಂಟೆಗೆ ಸಿಗೋ ಹೊಸಕೋಟೆ ಬಿರಿಯಾನಿ ತಿನ್ನಲು ಬಿರಿಯಾನಿ ಪ್ರಿಯರು ಕ್ಯೂ ನಿಲ್ಲುತ್ತಾರೆ.. ಆದರೆ, ಬಿರಿಯಾನಿ ಪ್ರಿಯರಿಗೆ ಒಂದು ಶಾಕಿಂಗ್ ನ್ಯೂಸ್ ಇದೆ. ಇನ್ಮುಂದೆ ಹೊಸಕೋಟೆ ಬಿರಿಯಾನಿ ಬೆಳಗ್ಗೆಯೇ ಸಿಗೋದೇ ಡೌಟ್​ ಆಗಿದೆ.

ಇದನ್ನೂ ಓದಿ:ನಂದಿನಿ ಬೂತ್‌ ಮಾಲೀಕನಿಗೆ ಶಾಕ್‌ ಕೊಟ್ಟ ವಾಣಿಜ್ಯ ತೆರಿಗೆ ಇಲಾಖೆ – 1 ಕೋಟಿ 3 ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೋಟಿಸ್!

ಬೆಸ್ಟ್​ ಬಿರಿಯಾನಿ ತಿನ್ನಲು ನಮ್ಮ ಬೆಂಗಳೂರು ಜನಕ್ಕೆ ಅದೇನೋ ಕ್ರೇಜ್. ಬಿರಿಯಾನಿಗಾಗಿ ಎಷ್ಟುದೂರ ಬೇಕಾದರೂ, ಯಾವ ಟೈಮ್‌ಗೆ ಬೇಕಾದರೂ ಹೋಗಿ ತಿನ್ನುವುದೇ ಒಂಥರಾ ಮಜಾ. ಅದರಲ್ಲೂ ಹೊಸಕೋಟೆ ಬಿರಿಯಾನಿ ತಿನ್ನೋಕೆ ಬೆಂಗಳೂರು ಸೇರಿದಂತೆ ವಿವಿದೆಡೆಗಳಿಂದ ಬೆಳಗ್ಗೆ 4 ಗಂಟೆಗೆ ಹೋಟೆಲ್ ಮುಂದೆ ಕ್ಯೂ ನಿಲ್ತಾರೆ. ಆದರೆ, ಇದೀಗ ಹೊಸಕೋಟೆ ಬಿರಿಯಾನಿ ಮಾಲೀಕರು ಹಾಗೂ ಗ್ರಾಹಕರಿಗೆ ಪೊಲೀಸರು ಬಿಗ್​ ಶಾಕ್​ ಕೊಟ್ಟಿದ್ದಾರೆ.

ಹೌದು, ಇನ್ಮುಂದೆ ಹೊಸಕೋಟೆ ಬಿರಿಯಾನಿ ಬೆಳಗಿನ ಜಾವ 4 ಗಂಟೆಗೆ ಸಿಗೋದೇ ಡೌಟ್​ ಆಗಿದೆ. 4 ಗಂಟೆಗೆ ಹೋಟೆಲ್ ತೆರೆದು ಬಿರಿಯಾನಿ ಮಾರಾಟ ಮಾಡೋದ್ರಿಂದ ಜನರು ಮಧ್ಯಾಹ್ಯ ರಾತ್ರಿ, ನಸುಕಿನ ಮಂಜಿನಲ್ಲಿ ಡ್ರೈವ್ ಮಾಡ್ತಾ ಹೋಟೆಲ್​ಗಳಿಗೆ ಬರ್ತಾರೆ. ಯುವಕರು ಲಾಂಗ್ ಡ್ರೈವ್ ನೆಪದಲ್ಲಿ ಬಿರಿಯಾನಿಗೆ ಕ್ಯೂ ನಿಲ್ತಿದ್ದಾರೆ. ಇದ್ರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಮಾಲೀಕರಿಗೆ ಪೊಲೀಸರು ಕ್ಲಾಸ್​ ತೆಗೆದುಕೊಂಡಿದ್ದಾರೆ.

ಯುವಕರು ಲಾಂಗ್​ ಡ್ರೈವ್ ಅಂತ ಸ್ಪೀಡ್​​ ಆಗಿ ವಾಹನ ಚಲಿಸೋದ್ರಿಂದ ಅಪಘಾತ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಇನ್ಮುಂದೆ ನೀವು 4 ಗಂಟೆಗೆ ಬಿರಿಯಾನಿ ಹೋಟೆಲ್​ ತೆರೆಯುವಂತಿಲ್ಲ ಎಂದು ಮಾಲೀಕರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

Sulekha