ನಂದಿನಿ ಬೂತ್ ಮಾಲೀಕನಿಗೆ ಶಾಕ್ ಕೊಟ್ಟ ವಾಣಿಜ್ಯ ತೆರಿಗೆ ಇಲಾಖೆ – 1 ಕೋಟಿ 3 ಲಕ್ಷ ಟ್ಯಾಕ್ಸ್ ಕಟ್ಟುವಂತೆ ನೋಟಿಸ್!

ಜಿಎಸ್ಟಿ ತೆರಿಗೆ ನೋಟಿಸ್ ಬಂದಿರೋ ಕಾರಣಕ್ಕೆ ಸಣ್ಣ ಉದ್ದಿಮೆದಾರರು ಆನ್ಲೈನ್ ಪೇಮೆಂಟ್ ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಇದ್ರ ನಡುವೆಯೇ ಈಗ ನಂದಿನಿ ಬೂತ್ನವರಿಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟುವಂತೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ.
ಇದನ್ನೂ ಓದಿ: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಖರ್ ರಾಜೀನಾಮೆ – ವೈದ್ಯಕೀಯ ಕಾರಣಗಳಿಂದ ರಾಜೀನಾಮೆ ಎಂದು ಉಲ್ಲೇಖ
ಜಿಎಸ್ಟಿ ನೋಟಿಸ್ಗೆ ಸಣ್ಣಪುಟ್ಟ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಇದೀಗ ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್ನ ರವಿ ಅನ್ನೋರಿಗೆ ವಾಣಿಜ್ಯ ಇಲಾಖೆ ಶಾಕ್ ಕೊಟ್ಟಿದೆ. ರವಿಗೆ ಬರೋಬ್ಬರಿ ಕೋಟಿ 3 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಇದ್ರಿಂದಾಗಿ ಅಂಗಡಿ ಮಾಲಿಕ ಆತಂಕಕ್ಕೆ ಒಳಗಾಗಿದ್ದಾರೆ. ಬುಧವಾರದಿಂದ 3 ದಿನಗಳ ಕಾಲ ಹಾಲು ಮಾರಾಟ ಬಂದ್ ಮಾಡುವ ವರ್ತಕರ ನಿರ್ಧಾರಕ್ಕೆ ಕೆಲ ನಂದಿನಿ ಬೂತ್ಗಳಿಂದ ಬೆಂಬಲ ಸಿಕ್ಕಿದೆ.
ಇನ್ನು ಸಣ್ಣ ಮಟ್ಟದ ವ್ಯಾಪಾರಿಗಳು ಜು.25 ರಂದು ಸಂಪೂರ್ಣ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಕಾರ್ಮಿಕ ಪರಿಷತ್ ಕಚೇರಿಯಲ್ಲಿ ನಗರದ ಕಾಂಡಿಮೆಟ್ಸ್, ಬೇಕರಿ ಅಂಗಡಿ ಮಾಲೀಕರು ಸಭೆ ನಡೆಸಿ, ಬಂದ್ ತೀವ್ರತೆ, ಎಲ್ಲೆಲ್ಲಿ ಪ್ರತಿಭಟನೆ ಮಾಡಬೇಕು ಎಂದು ಚರ್ಚಿಸಿದ್ದಾರೆ.

ನೋಡಿರಿ

