ಭಾರತ-ಪಾಕ್ ಕ್ರಿಕೆಟ್ ಬಂದ್ – ಪ್ಲೇಯರ್ಸ್ ಹಠ.. ಪಂದ್ಯವೇ ರದ್ದು
ICC, ಏಷ್ಯಾಕಪ್ ಟೂರ್ನಿಗೂ ಬ್ರೇಕ್?

ಭಾರತ-ಪಾಕ್ ಕ್ರಿಕೆಟ್ ಬಂದ್ – ಪ್ಲೇಯರ್ಸ್ ಹಠ.. ಪಂದ್ಯವೇ ರದ್ದುICC, ಏಷ್ಯಾಕಪ್ ಟೂರ್ನಿಗೂ ಬ್ರೇಕ್?

ಭಾರತ ಮತ್ತು ಪಾಕಿಸ್ತಾನ ನಡುವಿನ ಮ್ಯಾಚ್ ಅಂದ್ರೇನೇ ಹಾಗೇ. ಅದು ಯಾವ ಮಾದರಿಯ ಸ್ಪೋರ್ಟ್ಸ್ ಆದ್ರೂ ಕ್ರೇಜ್ ಇದ್ದದ್ದೇ. ಅದ್ರಲ್ಲೂ ಕ್ರಿಕೆಟ್ ಅಂತಾ ಬಂದ್ರೆ ಮತ್ತಷ್ಟು ಹೈವೋಲ್ಟೇಜ್ ಆಗುತ್ತೆ. ಬಟ್ ಪಹಲ್ಗಾಮ್ ದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಬಿಗುಡಾಯಿಸಿದೆ. ಅದ್ರ ಎಫೆಕ್ಟ್ ಕ್ರಿಕೆಟ್​ ಮೇಲೂ ಬೀರಿದೆ. ಅದೆಷ್ಟರ ಮಟ್ಟಿಗೆ ಅಂದ್ರೆ ಭಾನುವಾರ ನಡೀಬೇಕಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳ ನಡುವಿನ ಮ್ಯಾಚ್ ದಿಢೀರ್ ಕ್ಯಾನ್ಸಲ್ ಮಾಡಲಾಗಿದೆ.

ಇದನ್ನೂ ಓದಿ : ರಾಜ್ಯದಲ್ಲಿ VIP ಸಂಚಾರದ ವೇಳೆ ಸೈರನ್ ಬಳಕೆಗೆ ಬ್ರೇಕ್‌! – ರೂಲ್ಸ್‌ ಬ್ರೇಕ್‌ ಮಾಡಿದ್ರೆ 3 ತಿಂಗಳು ಜೈಲು ಫಿಕ್ಸ್‌

ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಆಯೋಜಿಸುವ 2ನೇ ಆವೃತ್ತಿಯ ಟೂರ್ನಿಯಲ್ಲಿ ಭಾನುವಾರ ಭಾರತ-ಪಾಕ್ ಮುಖಾಮುಖಿಯಾಗಬೇಕಿದ್ದವು. ಆದ್ರೆ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ದಾಳಿ ಖಂಡಿಸಿ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ವಿರುದ್ಧ ಆಡಲು ನಿರಾಕರಿಸಿದ್ದಾರೆ. ಹೀಗಾಗಿ ಪಂದ್ಯವನ್ನು ಆಯೋಜಕರು ರದ್ದುಗೊಳಿಸಿದ್ದಾರೆ. ಇಂಡಿಯಾ ಚಾಂಪಿಯನ್ಸ್ ತಂಡದ ಆಟಗಾರರಾದ ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ ಹಾಗೂ ಶಿಖರ್ ಧವನ್ ಪಾಕ್ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದಿದ್ದಾರೆ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಹೀಗೆ ದಿಢೀರ್ ಮ್ಯಾಚ್ ಕ್ಯಾನ್ಸಲ್ ಮಾಡಿರುವುದಕ್ಕೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಟೂರ್ನಿ ಆರಂಭದಿಂದ ಸುಮ್ಮನೇ ಇದ್ದು ಪಂದ್ಯ ಆರಂಭದ ಹೊಸ್ತಿಲಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ ಇಂಥಾದ್ದೊಂದು ನಿರ್ಧಾರ ಕೈಗೊಳ್ಳೋಕೆ ಕಾರಣ ಬೇರೇನೆ ಇದೆ. ಪಹಲ್ಗಾಮ್ ದಾಳಿ ಬಳಿಕ ಭಾರತದ ಸೇನಾ ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಸೇರಿದಂತೆ ಕೆಲ ಆಟಗಾರರು ಭಾರತದ ವಿರುದ್ಧ ನಾಲಗೆ ಹರಿಬಿಟ್ಟಿದ್ರು. ಹೀಗಿದ್ರೂ ಭಾರತ ತಂಡದ ಸೀನಿಯರ್ಸ್ ಪಾಕಿಸ್ತಾನದ ಜೊತೆ ಕ್ರಿಕೆಟ್​ ಆಡುತ್ತಿರುವುದನ್ನ ಭಾರತೀಯ ಅಭಿಮಾನಿಗಳು ಸಿಟ್ಟಾಗಿದ್ರು. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಆಟಗಾರರು ಸಾರ್ವಜನಿಕವಾಗಿ ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಖಾಸಗಿ ಲೀಗ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಒಪ್ಪಿಕೊಂಡಿದ್ದಾರೆ ಎಂದು ಆರೋಪಿಸಿದ್ರು. ಟೀಕೆಗಳು ಮತ್ತು ರಾಜಕೀಯ ಒತ್ತಡದಿಂದಾಗಿ ಕೊನೆಗೆ ಪಂದ್ಯದಿಂದಲೇ ಹೊರಗುಳಿಯೋ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ಪಾಕ್ ವಿರುದ್ಧ ಪಂದ್ಯ ಆಡಲು ನಿರಾಕರಿಸಿದ್ದಕ್ಕೆ ಪಾಕ್ ತಂಡದ ನಾಯಕ ಶಾಹೀದ್ ಆಫ್ರಿದಿ ಸಿಟ್ಟಾಗಿದ್ದಾರೆ.  ಯಾವಾಗಲೂ ಕ್ರಿಕೆಟ್ ಅನ್ನು ರಾಜಕೀಯದಿಂದ ದೂರವಿಡಲು ಬಯಸುತ್ತೇನೆ. ಯಾಕಂದ್ರೆ ಒಬ್ಬ ಆಟಗಾರ ಉತ್ತಮ ರಾಯಭಾರಿಯಾಗಿರಬೇಕು. ಆದರೆ ಈಗ ಭಾರತೀಯ ಆಟಗಾರರು ಮಾಡಿದ್ದೇನು? ಭಾರತೀಯ ಆಟಗಾರರು ಪಾಕಿಸ್ತಾನ್ ವಿರುದ್ಧ ಕ್ರಿಕೆಟ್ ಆಡಲು ಇಷ್ಟ ಇಲ್ಲ ಅಂದ್ರೆ ತಂಡ ಬರುವ ಮೊದಲೇ ಅವರು ಅದನ್ನು ನಿರಾಕರಿಸಬೇಕಿತ್ತು. ಆದರೆ ಇಲ್ಲಿಗೆ ಬಂದು ಪ್ರಾಕ್ಟೀಸ್ ಕೂಡ ನಡೆಸಿ ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಎಲ್ಲವನ್ನೂ ಬದಲಾಯಿಸಿದ್ದಾರೆ. ಆಡಲು ಇಷ್ಟವಿಲ್ಲದಿದ್ದರೆ ಮೊದಲೇ ತಿಳಿಸಬಹುದಿತ್ತು. ಆದ್ರೆ ಎಲ್ಲಾ ತಯಾರಿಗಳನ್ನು ಮಾಡಿ ದಿಢೀರನೇ ಪಂದ್ಯದಿಂದ ಹಿಂದೆ ಸರಿದಿದ್ದೀರಿ ಎಂದು ಶಾಹಿದ್ ಅಫ್ರಿದಿ ಆಕ್ರೋಶ ಹೊರಹಾಕಿದ್ದಾರೆ.

ಯಾವಾಗ ಭಾರತ ಪಾಕ್ ವಿರುದ್ಧ ಪಂದ್ಯ ಆಡಲ್ಲ ಅಂತೋ ಪಾಕ್ ಕೂಡ ಅಂಥದ್ದೇ ಅಸ್ತ್ರ ಹೂಡಿದೆ. ಆಗಸ್ಟ್ 27 ರಿಂದ ಸೆಪ್ಟೆಂಬರ್ 7 ರವರೆಗೆ ಬಿಹಾರದ ರಾಜಗೀರ್ ಕ್ರೀಡಾಂಗಣದಲ್ಲಿ ಹಾಕಿ ಏಷ್ಯಾಕಪ್  ನಡೆಯಲಿದೆ. ಆದರೆ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಪಾಕಿಸ್ತಾನ ಹಾಕಿ ತಂಡ ಭಾರತಕ್ಕೆ ಬರುತ್ತಿಲ್ಲ ಎನ್ನಲಾಗಿದೆ. ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿ ಮತ್ತು ಭದ್ರತಾ ಕಾಳಜಿಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನ ಹಾಕಿ ಫೆಡರೇಶನ್, ಅಂತರರಾಷ್ಟ್ರೀಯ ಹಾಕಿ ಫೆಡರೇಶನ್​ಗೆ ತಿಳಿಸಿದೆ.

Shantha Kumari