SITಯಿಂದ ಇಬ್ಬರು ಬ್ಯಾಕ್ಔಟ್? – “ಧರ್ಮಸ್ಥಳ ರಹಸ್ಯ” ಬಯಲಾಗುತ್ತಾ?
ಆರಂಭದಲ್ಲೇ ವಿಘ್ನ ಎದುರಾಯ್ತಾ?

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಿಚಿತ ಶವಗಳನ್ನು ಹೂತು ಹಾಕಿರುವ ಪ್ರಕರಣದ ತನಿಖೆಯನ್ನು ಕಡೆಗೂ ರಾಜ್ಯ ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸಲು ಮುಂದಾಗಿದೆ. ಧರ್ಮಸ್ಥಳದ ಪರಿಸರದಲ್ಲಿ ಸಿಕ್ಕ ನೂರಾರು ಶವಗಳನ್ನು ತಾನೇ ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ಕೋರ್ಟ್ನಲ್ಲಿ ತನ್ನ ಹೇಳಿಕೆ ದಾಖಲಿಸಿದ್ದಾನೆ. ಇದರ ನಂತರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಹಾಗಿದ್ದರೆ ನಿಗೂಢ ಸಾವುಗಳ ಬಗ್ಗೆ ತನಿಖೆ ನಡೆಯಬೇಕು ಎಂಬ ಒತ್ತಾಯ ಕೇಳಿಬಂದಿತ್ತು. 1983ರಲ್ಲಿ ವಿಧಾನಸಭೆ ಕಲಾಪದಲ್ಲಿ ನಡೆದಿದ್ದ ಧರ್ಮಸ್ಥಳದ ನಿಗೂಢ ನಾಪತ್ತೆ ಹಾಗೂ ಶವವನ್ನು ಹೂತು ಹಾಕಿದ್ದರ ಬಗೆಗಿನ ಚರ್ಚೆಯೂ ಮುನ್ನೆಲೆಗೆ ಬಂದಿದೆ. ತನ್ನ ಮಗಳು 2003ರಲ್ಲಿ ಧರ್ಮಸ್ಥಳದಲ್ಲೇ ನಾಪತ್ತೆಯಾಗಿದ್ದಳು ಎಂದು ತಾಯಿಯೊಬ್ಬರು ಮುಂದೆ ನ್ಯಾಯದ ಜೊತೆಗೆ ಮಗಳ ಅಸ್ಥಿಪಂಜರ ಸಿಕ್ಕರೆ, ನನಗೆ ಕೊಡಿ.. ಅದಕ್ಕೊಂದು ಅಂತ್ಯಸಂಸ್ಕಾರ ನೆರವೇರಿಸ್ತೇನೆ ಎಂದು ಕಲ್ಲು ಹೃದಯಗಳೂ ಕರಗುವಂತೆ ಮಾಡಿದ್ದಾರೆ.. ಇದರ ನಡುವೆ ಸರ್ಕಾರದ ಎಸ್ಐಟಿ ರಚನೆಯಾಗುತ್ತಿದ್ದಂತೆ ಇಬ್ಬರು ಅಧಿಕಾರಿಗಳು ಬ್ಯಾಕ್ ಔಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:ಟ್ರಂಪ್ ಮಾತೇ ಮೋದಿಗೆ ಮುಳ್ಳು? – ‘ಕೈ’ ಜಾಲದಲ್ಲಿ ಸಿಕ್ಕಿಬೀಳ್ತಾರಾ ಪ್ರಧಾನಿ?
ಒಂದಲ್ಲ.. ಎರಡಲ್ಲ.. ನೂರಾರು ಶವಗಳನ್ನ ಹೂತಿದ್ದೇನೆ.. ಒತ್ತಡಕ್ಕೆ ಮಣಿದು ನಾನೇ ನನ್ನ ಕೈಯಾರೆ ಧರ್ಮಸ್ಥಳ ಕಾಡಲ್ಲಿ ಹೆಣ್ಣು ಮಕ್ಕಳು ಸೇರಿದಂತೆ ಆನೇಕರ ಶವಗಳನ್ನು ಹೊಂಡ ತೆಗೆದು ಹೂತು ಹಾಕಿದ್ದೇನೆ.. ಹಾಗೇ ತಾನು ಹೂತು ಹಾಕಿರುವ ಶವಗಳು ಎಲ್ಲೆಲ್ಲಿ ಇವೆ ಅನ್ನೋದು ನನಗೆ ಗೊತ್ತಿದೆ ಅಂತ ಒಬ್ಬ ವ್ಯಕ್ತಿ ಹೇಳಿದ್ದ. ಅಷ್ಟೇ ಅಲ್ಲ ಆತ ಬೆಳ್ತಂಗಡಿ ಪೊಲೀಸರಿಗೆ ಹೂತಿಟ್ಟಿದ್ದ ತಲೆ ಬುರುಡೆ ತಂದುಕೊಟ್ಟಿದ್ದಾನೆ ಎನ್ನಲಾಗಿದೆ. ಇದಾದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡರು. ಇದನ್ನು ಇಷ್ಟಕ್ಕೆ ಬಿಡದೆ ಜುಲೈ ಮೂರರಂದು ವಕೀಲರ ಸಹಾಯದೊಂದಿಗೆ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದ. ಅಲ್ಲದೇ ಬೆಳ್ತಂಗಡಿಯ ನ್ಯಾಯಾಲಯದಲ್ಲೂ ಈ ಸಂಬಂಧ ಹೇಳಿಕೆ ದಾಖಲಿಸಿದ್ದ. ಗೌಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಮುಸುಕುಧಾರಿಯಾಗಿ ಬಂದು ನ್ಯಾಯಾಧೀಶರ ಮುಂದೆ ಪ್ರಕರಣದ ವಿವರ ನೀಡಿದ್ದ. ಅಲ್ಲಿಂದ ನಂತರ ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಲಿದೆ ಎಂಬ ಆರೋಪ ಇಡೀ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟಕ್ಕೂ ಹಬ್ಬಿದೆ.. ಆಗಲೇ ಸರ್ಕಾರ ಎಸ್ಐಟಿ ರಚನೆ ಮಾಡಬೇಕು ಅಂತ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ , ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ.. ಡಾ.ಸಿಎಸ್ ದ್ವಾರಕಾನಾಥ್ ನೇತೃತ್ವದಲ್ಲಿ ವಕೀಲರ ನಿಯೋಗ. ಹೀಗೆ ಹಲವರು ಸಿಎಂ ಗೆ ಮನವಿ ಸಲ್ಲಿಸಿದ್ದರು.
ಈ ಬಗ್ಗೆ ಮೊದಲ ಬಾರಿಗೆ ಕಳೆದ ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಯಾರೋ ಹೇಳಿದ್ದಾರೆಂದು SIT ರಚನೆ ಮಾಡಲು ಆಗೋದಿಲ್ಲ.. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಅಗತ್ಯವಿದ್ದಲ್ಲಿ ಎಸ್. ಐ. ಟಿ ರಚನೆ ಮಾಡ್ತೀವಿ. ನಮಗೆ ಯಾರಿಂದಲೂ ಒತ್ತಡ ಬಂದಿಲ್ಲ. ಒತ್ತಡ ಬಂದರೂ ನಾವು ಕೇರ್ ಮಾಡೋದಿಲ್ಲ ಅಂತ ಹೇಳಿದ್ದರು. ಸಿದ್ದರಾಮಯ್ಯ ಈ ಹೇಳಿಕೆ ನಂತ್ರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿತ್ತು. ಸಿದ್ದರಾಮಯ್ಯ ಅವರ ಮೇಲೂ ಯಾರೋ ಒತ್ತಡ ಹೇರುತ್ತಿದ್ದಾರೆ ಎಂಬರ್ಥದಲ್ಲೂ ಸುದ್ದಿಗಳು ಹರದಾಡಿದ್ದವು. ಇದ್ದನ್ನೆಲ್ಲಾ ಗಮನಿಸಿದ ಸಿಎಂ ಹೂತುಹಾಕಲಾಗಿದೆ ಎನ್ನಲಾದ ಶವಗಳ ಸತ್ಯವೇನು ಎಂದು ತಿಳಿಯಲು ಎಸ್ಐಟಿ ರಚನೆ ಮಾಡಿದ್ದಾರೆ. ಖಡಕ್ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದೆ.. vis flow..
ಹೌದು.. ಪೊಲೀಸ್ ಮಹಾನಿರ್ದೇಶಕ ಪ್ರಣವ್ ಮೊಹಂತಿ ನೇತೃತ್ವದ್ದಲ್ಲಿ ಎಸ್ಐಟಿ ರಾಜ್ಯ ಸರ್ಕಾರ ರಚನೆ ಮಾಡಿದೆ.. ಇದ್ರಲ್ಲಿ ಡಿಐಜಿ ಎಂಎನ್ ಅನುಚೇತ್, ನಗರ ಸಶಸ್ತ್ರ ಮೀಸಲು ಪ್ರಧಾನ ಕಚೇರಿಯ ಪೊಲೀಸ್ ಉಪ ಆಯುಕ್ತರಾಗಿರುವ ಸೌಮ್ಯಲತಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರು ಎಸ್ಐಟಿ ತಂಡದ ಅಧಿಕಾರಿಗಳಾಗಿದ್ದಾರೆ.. ಇವರೆಲ್ಲರು ಕೂಡ ಖಡಕ್ ಅಧಿಕಾರಿಗಳು.. ತನಿಖೆಗಳಿದರೆ ಸತ್ಯವನ್ನು ಅದೆಷ್ಟೇ ಆಳದಲ್ಲಿ ಹುದುಗಿಸಿಟ್ಟರೂ ಹೊರಗೆಳೆದು ತರಬಲ್ಲ ನಿಷ್ಣಾತರು.. ಈ ಹಿಂದೆ ದೊಡ್ಡ ದೊಡ್ಡ ಕೇಸ್ಗಳನ್ನ ಬೇಧಿಸುವಯಲ್ಲಿ ಯಶಸ್ವಿಯಾಗಿದ್ದಾರೆ..
ಪ್ರಣವ್ ಮೊಹಂತಿ ಯಾರು?
ಧರ್ಮಸ್ಥಳ ಕೇಸ್ನಲ್ಲಿ ರಚನೆ ಆಗಿರೋ ಎಸ್ಐಟಿ ನೇತೃತ್ವ ವಹಿಸಿಕೊಂಡಿರೋ ಪ್ರಣವ್ ಮೊಹಂತಿ 1994ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವ್ರು ಮೂಲತಃ ಒಡಿಶಾದವರಾಗಿದ್ದು, ಮೂರು ದಶಕದ ಹಿಂದೆ ಐಪಿಎಸ್ಗೆ ಸೇರಿ ಕರ್ನಾಟಕ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಣವ್ ಮೊಹಾಂತಿಯವರು ಸಿಐಡಿ, ಲೋಕಾಯುಕ್ತ, ಸೈಬರ್ ಕ್ರೈಂ, ಆಂತರಿಕ ಭದ್ರತಾ ವಿಭಾಗ, ಹೀಗೆ ಬೇರೆ ಬೇರೆ ಹಂತಗಳಲ್ಲಿ ಕೆಲಸ ಮಾಡಿರುವ ದಕ್ಷ ಅಧಿಕಾರಿ. ಇದೇ ಕಾರಣಕ್ಕಾಗಿ ಅವರ ನೇತೃತ್ವದಲ್ಲಿ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಇವರ ಜೊತೆಗೆ ಡಿಐಜಿ ಎಂ.ಎನ್.ಅನುಚೇತ್ ಅವರೂ ಎಸ್ಐಟಿ ಟೀಂನಲ್ಲಿದ್ದಾರೆ. ಗೌರಿ ಲಂಕೇಶ್ ಪ್ರಕರಣದಲ್ಲಿ ಅನುಚೇತ್ ಪ್ರಮುಖ ತನಿಖಾಧಿಕಾರಿ ಆಗಿದ್ದರು. ಯಾವುದೇ ಕ್ಲೂ ಇಲ್ಲದ ಪರಿಸ್ಥಿತಿಯಲ್ಲಿ ಆರೋಪಿಗಳಿಗಾಗಿ ಜಾಲಾಡಿ, ಕಡೆಗೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಇನ್ನೋರ್ವ ಅಧಕಿಾರಿ ಸೌಮ್ಯಲತಾ, ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹಾಸನದ ಪೆನ್ಡ್ರೈವ್ ಕೇಸ್ನಲ್ಲಿ ಎಸ್ಐಟಿ ತಂಡದ ಭಾಗವಾಗಿದ್ದರು. ಪ್ರಜ್ವಲ್ ರೇವಣ್ಣನನ್ನು ಬಂಧಿಸುವ ಕಾರ್ಯದಲ್ಲೂ ಐಪಿಎಸ್ ಅಧಿಕಾರಿ ಸೌಮ್ಯಲತಾ ಮುಂಚೂಣಿಯಲ್ಲಿದ್ದರು. ಇವರ ಜೊತೆಗೆ ಜಿತೇಂದ್ರ ಕುಮಾರ್ ಕೂಡ ಎಸ್ಐಟಿ ತಂಡ ಸೇರಿಕೊಂಡಿದ್ದಾರೆ.
ಎಸ್ಐಟಿ ಟೀಂನಿಂದ ಇಬ್ಬರು ಅಧಿಕಾರಿಗಳು ಬ್ಯಾಕ್ಔಟ್?
ಸರ್ಕಾರ ರಚನೆ ಮಾಡಿರೋ ನಾಲ್ವರಲ್ಲಿ ಈಗ ಎಂ.ಎನ್ ಅನುಚೇತ್ ಮತ್ತು ಸೌಮ್ಯಲತಾ ಅವರು ಈ ಕೇಸ್ನಿಂದ ಹಿಂದೆ ಸರಿಯೋಕೆ ಮುಂದಾಗಿದ್ದಾರೆ ಎನ್ನಲಾಗಿದೆ…ಅನುಚೇತ್ ಹಾಗೂ ಸೌಮ್ಯಲತಾ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಎಸ್ಐಟಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಇವತ್ತು ಬೆಳಗ್ಗಿನಿಂದಲೇ ಹರಿದಾಡಿತ್ತು. ಆದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅಂತಹ ಯಾವುದೇ ಮಾಹಿತಿ ತನಗಿಲ್ಲ ಎಂದು ತಳ್ಳಿಹಾಕಿದ್ದು, ಎಸ್ಐಟಿ ತಂಡದ ಭಾಗವಾಗಿಯೇ ಅನುಚೇತ್ ಹಾಗೂ ಸೌಮ್ಯಲತಾ ಮುಂದುವರಿಯಬಹುದು.. ಹಾಗೊಂದು ವೇಳೆ ಇವರಿಬ್ಬರು ಹಿಂದೆ ಸೇರಿದರೆ, ಸರ್ಕಾರ ಬೇರೆ ಅಧಿಕಾರಿಗಳನ್ನು ಎಸ್ಐಟಿಗೆ ನೇಮಕ ಮಾಡಲಿದೆ..
ದಕ್ಷ ಅಧಿಕಾರಿಯಾಗಿರೋ ಅನುಚೇತ್
ಅನುಚೇತ್ ಒಬ್ಬ ದಕ್ಷ ಹಾಗೂ ಪ್ರಮಾಣಿಕ ಅಧಿಕಾರಿ.. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಗಾಗಿ ರಚಿಸಲಾದ ಎಸ್ಐಟಿಯನ್ನು ಹಿರಿಯ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ಹಿಂದೆ ಮುನ್ನಡೆಸಿದ್ದರು. ಇವರ ತಂಡದಲ್ಲಿದ್ದ ಎಂ.ಎನ್ ಅನುಚೇತ್ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಯಾವುದೇ ಕುರೂಹ ಇಲ್ಲದ ಗೌರಿ ಕೇಸ್ನಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಸಕ್ಸಸ್ ಆಗಿದ್ರು.. ಹೀಗಾಗಿ ತನಿಖಾ ವಿಭಾಗದಲ್ಲಿ ಅನುಭವ ಇರುವ ಎಂ.ಎನ್ ಅನುಚೇತ್ ಅವರು ಧರ್ಮಸ್ಥಳ ಪ್ರಕರಣದ ತನಿಖಾ ತಂಡದಲ್ಲಿದ್ದರೆ, ಸತ್ಯ ಎಲ್ಲೇ ಬಚ್ಚಿಟ್ಟಿದ್ದರೂ ಹುಡುಕಿ ಹೊರತೆಗೆಯಬಹುದು ಎಂಬ ವಿಶ್ವಾಸ ಜನರಲ್ಲಿದೆ
ಇನ್ನು ಎಸ್ಐಟಿ ನೇತೃತ್ವ ವಹಿಸಿಕೊಂಡಿರುವ ಪ್ರಣಬ್ ಮೊಹಂತಿ, ಇವತ್ತು ಬೆಳಗ್ಗೆಯೇ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆಗೂ ಚರ್ಚೆ ನಡೆಸಿದ್ದಾರೆ. ಅವರೊಮ್ಮೆ ಕೇಸ್ ಫೈಲ್ ತೆಗೆದುಕೊಂಡರು ಅಂದ್ರೆ, ಪ್ರಕರಣದ ತನಿಖೆಗೆ ಚುರುಕು ಸಿಗಲಿದೆ.
ಧರ್ಮಸ್ಥಳದ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಆಧಾರ ಆಗಿರುವುದು, ವ್ಯಕ್ತಿಯೊಬ್ಬ ಈಗಾಗ್ಲೇ ದಾಖಲಿಸಿರುವ ದೂರು ಮತ್ತು ನ್ಯಾಯಾಧೀಶರ ಮುಂದೆ ದಾಖಲಿಸಿರುವ ಹೇಳಿಕೆ. ಆ ವ್ಯಕ್ತಿ ಹೇಳಿದ ಹಾಗೇ.. ಅವನು ತೋರಿಸಿದ ಜಾಗದಲ್ಲಿ ಅಸ್ತಿ ಪಂಜರಗಳು ಪತ್ತೆಯಾದರೆ ಮಾತ್ರ, ಆತ ಹೇಳಿದ್ದ ಸತ್ಯ ಎನ್ನುವುದು ಸಾಬೀತಾಗಬಹುದು.. ಆತ ಹೇಳಿಕೊಂಡಿರುವಂತೆ ನೂರಾರು ಅಲ್ಲದಿದ್ದರೂ ಹತ್ತಾರು ಅಸ್ಥಿಪಂಜರಗಳು ಸಿಕ್ಕರೂ ಪ್ರಕರಣದ ಗಂಭೀರತೆ ಹೆಚ್ಚಾಗಲಿದೆ.. ಆ ನಿಟ್ಟಿನಲ್ಲಿ ಈಗ ಎಸ್ಐಟಿ ಹೂತಿಟ್ಟ ಶವಗಳನ್ನ ಹೊರ ತೆಗೆಯೋಕೆ ಮುಂದಾಗುತ್ತದಾ ಎಂಬ ಪ್ರಶ್ನೆ ಇ್ದದೇ ಇದೆ.. ಎಸ್ಐಟಿ ತನಿಖೆ ನಂತ್ರ ಹೂತಿಟ್ಟ ಹತ್ಯಾಕಾಂಡ ನಿಜನಾ? ನೇತ್ರಾವತಿ ತೀರದ ಭಯಾನಕತೆಯ ವಾಸ್ತವತೆ ಏನು ಅನ್ನೋದು ಗೊತ್ತಾಗಲಿದೆ..

ನೋಡಿರಿ

