ವೈಷ್ಣೋ ದೇವಿ ಯಾತ್ರಾ ಮಾರ್ಗದಲ್ಲಿ ಭೂಕುಸಿತ – ನಾಲ್ವರು ಭಕ್ತರಿಗೆ ಗಾಯ, ಕೆಲವು ಅವಶೇಷಗಳಡಿ ಸಿಲುಕಿರುವ ಶಂಕೆ

ಜಮ್ಮು ಮತ್ತು ಕಾಶ್ಮೀರದ (Jammu Kashmir) ಕೆಲವು ಭಾಗಗಳಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಭಾರೀ ಮಳೆ ಸುರಿಯುತ್ತಿದೆ (Heavy Rain) . ಇದರ ಪರಿಣಾಮ ಕತ್ರಾ (Katra)ದಲ್ಲಿ ಮಾತಾ ವೈಷ್ಣೋ ದೇವಿ ಯಾತ್ರಾ (Mata Vaishno Devi Yatra) ಮಾರ್ಗದಲ್ಲಿ ಭೂಕುಸಿತ (Land Slide) ಸಂಭವಿಸಿದೆ. ಮಾತಾ ವೈಷ್ಣೋ ದೇವಿ ಯಾತ್ರಾ ಮಾರ್ಗದ ಬಂಗಂಗಾ (Banganga) ಬಳಿ ಇಂದು ಬೆಳಗ್ಗೆ 8.50ರ ಸುಮಾರಿಗೆ ಭಾರಿ ಭೂಕುಸಿತವಾಗಿದೆ. ಇದರಲ್ಲಿ ನಾಲ್ವರು ಭಕ್ತರು ಗಾಯಗೊಂಡಿದ್ದಾರೆ. ಇನ್ನು ಕೆಲವರು ಅವಶೇಷಗಳಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ತಾಂತ್ರಿಕದೋಷ – ಆಕಾಶದಲ್ಲೇ 40 ನಿಮಿಷ ಸುತ್ತಾಡಿದ ವಿಮಾನ!
ಕತ್ರಾದಿಂದ ಭವನಕ್ಕೆ ಹೋಗುವ ಹಳೆಯ ಯಾತ್ರಾ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಗುಲ್ಶನ್ ಕಾ ಲಂಗರ್ ನಲ್ಲಿರುವ ಬಂಗಾಂಗದಲ್ಲಿ ಬೆಳಗ್ಗೆ 8.50ಕ್ಕೆ ಈ ದುರಂತ ನಡೆದಿದೆ. ಇದೇ ಪ್ರದೇಶದಿಂದ ವೈಷ್ಣೋದೇವಿ ದೇಗುಲಕ್ಕೆ ಕುದುರೆ ಸವಾರಿ ಆರಂಭಗೊಳ್ಳುತ್ತದೆ. ಭೂ ಕುಸಿತ ಸಂಭವಿಸುತ್ತಿದ್ದಂತೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನ ನಡೆಸಲಾಗಿದೆ. ಇದರಿಂದಾಗಿ ಭೂ ಕುಸಿತದಲ್ಲಿ ಸಿಲುಕಿದ್ದ ನಾಲ್ವರು ಯಾತ್ರಾತ್ರಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು ಭೂ ಕುಸಿತದ ಸಂಭವಿಸಿದ ವೇಳೆ ಬೇರೆ ಯಾರಾದರೂ ಸಿಲುಕಿದ್ದಾರಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಈ ದುರಂತ ಸಂಭವಿಸಿದ ನಂತರ ಕೆಲ ಕಾಲ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ನೋಡಿರಿ

