ರೇಸಿಂಗ್ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ –ಮೂರನೇ ಬಾರಿ ಅಪಾಯದಿಂದ ಪಾರಾದ ಕಾಲಿವುಡ್ ಹೀರೋ

ರೇಸಿಂಗ್ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ –ಮೂರನೇ ಬಾರಿ ಅಪಾಯದಿಂದ ಪಾರಾದ ಕಾಲಿವುಡ್ ಹೀರೋ

ತಮಿಳು ನಟ ಅಜಿತ್ ಕುಮಾರ್ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುತ್ತಿರೋದಲ್ಲದೇ, ಕಾರ್ ರೇಸಿಂಗ್‌ನಲ್ಲೂ ಶೈನ್ ಆಗುತ್ತಿದ್ದಾರೆ. ಅಜಿತ್ ಕುಮಾರ್‌ಗೆ ಕಾರ್ ರೇಸ್ ಕ್ರೇಜ್ ತುಂಬಾ ಇದೆ. ಆದರೆ, ಇದೀಗ ಮತ್ತೊಮ್ಮೆ ಅಜಿತ್ ಕುಮಾರ್ ಕಾರು ರೇಸಿಂಗ್ ನಲ್ಲಿ ನಡೆದ ಅಪಘಾತದಿಂದ ಬಚಾವ್ ಆಗಿದ್ದಾರೆ. ಇಟಲಿಯಲ್ಲಿ ನಡೆಯುತ್ತಿರುವ ಕಾರ್ ರೇಸಿಂಗ್‌ನಲ್ಲಿ ಅಜಿತ್ ಕಾರು ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ:ಒಬಾಮ ಅರೆಸ್ಟ್ ಆಗುವ AI ವಿಡಿಯೋ ಹಂಚಿಕೊಂಡ ಟ್ರಂಪ್ – ಅಮೆರಿಕ ಅಧ್ಯಕ್ಷ ಆಡಿದ್ದೇ ಆಟ ಎಂದ ನೆಟ್ಟಿಗರು

ನಟ ಅಜಿತ್ ಕಮಾರ್ ಆಗಾಗ ಕಾರು ರೇಸಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಅಜಿತ್ ಕುಮಾರ್ ಕಾರು ರೇಸಿಂಗ್ ವೇಳೆ ಅಪಘಾತಕ್ಕೊಳಗಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಇಟಲಿಯಲ್ಲಿ ನಡೆಯುತ್ತಿರುವ ಕಾರು ರೇಸಿಂಗ್‌ನಲ್ಲಿ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಇಲ್ಲೂ ಅದೃಷ್ಠ ಅಜಿತ್ ಪರವಾಗಿದೆ. ನಟನಿಗೆ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನಲ್ಲಿ ಅಜಿತ್ ಕುಮಾರ್ ಅವರ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಇಟಲಿಯಲ್ಲಿ ನಡೆಯುತ್ತಿರುವ GT4 ಕಾರ್ ರೇಸ್‌ನ 2ನೇ ದಿನದಂದು ಅಜಿತ್ ಕುಮಾರ್ ಅವರ ಕಾರು ಟ್ರ್ಯಾಕ್‌ನಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಅಜಿತ್ ಕಾರಿನ ಮುಂದೆ ಹೋಗುತ್ತಿದ್ದ ಕಾರು ಟ್ರ್ಯಾಕ್‌ನಲ್ಲಿ ನಿಂತಿದ್ದರಿಂದ ಅಜಿತ್ ಕುಮಾರ್ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ಈ ಅಪಘಾತದಲ್ಲಿ ಅಜಿತ್‌ಗೆ ಯಾವುದೇ ತೊಂದರೆಯಾಗಿಲ್ಲ. ಆದರೆ, ಅಜಿತ್ ಕಾರು ಹಾನಿಗೊಳಗಾಗಿದೆ. ಹೆಚ್ಚಿನ ಸುರಕ್ಷತೆ ಹೊಂದಿದ್ದ ಕಾರಣ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದಕ್ಕೂ ಮೊದಲು ದುಬೈನಲ್ಲಿ ನಡೆದ ಕಾರ್ ರೇಸ್‌ನಲ್ಲೂ ಅಜಿತ್ ಕಾರು ಅಪಘಾತಕ್ಕೀಡಾಗಿತ್ತು. ಇದಾದ ನಂತರ ಪೋರ್ಚುಗಲ್‌ನಲ್ಲಿ ನಡೆದ ಕಾರು ರೇಸಿಂಗ್ ನಲ್ಲೂ ಅಜಿತ್ ಕಾರು ಅಪಘಾತಕ್ಕೀಡಾಗಿತ್ತು. ಇದೀಗ ಮೂರನೇ ಬಾರಿ ಅಜಿತ್ ಕುಮಾರ್ ಕಾರು ಅಪಘಾತಕ್ಕೀಡಾಗಿದೆ. ಈ ಮೂರು ಅಪಘಾತದಲ್ಲೂ ತಮಿಳು ನಟ ಅಜಿತ್ ಕುಮಾರ್ ಅಪಾಯದಿಂದ ಪಾರಾಗಿದ್ದಾರೆ.

Sulekha