ಇಂಡಿಗೋ ವಿಮಾನದಲ್ಲಿ ತಾಂತ್ರಿಕದೋಷ – ಆಕಾಶದಲ್ಲೇ 40 ನಿಮಿಷ ಸುತ್ತಾಡಿದ ವಿಮಾನ!

ಇತ್ತೀಚೆಗೆ ಹಲವು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿರುವುದು ವರದಿಯಾಗುತ್ತಿದೆ. ಇದೀಗ ತಿರುಪತಿಯಿಂದ ಹೈದರಾಬಾದ್ ಗೆ ಹೊರಟಿದ್ದ ವಿಮಾನವೊಂದ್ರಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ನೂರಾರು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇದನ್ನೂ ಓದಿ: ನಿಮ್ಗೆ ಗೊತ್ತಿಲ್ಲ ತುಳಸಿ ಎಲೆಯ ಪ್ರಯೋಜನ ತಿಳಿದುಕೊಳ್ಳಿ – ಹೀಗೆ ಮಾಡಿದ್ರೆ ಮಾಯವಾಗುತ್ತೆ ಮನೆಯಲ್ಲಿರೋ ನಕಾರಾತ್ಮಕ ಶಕ್ತಿ
ಅಷ್ಟಕ್ಕೂ ಆಗಿದ್ದೇನು?
ಭಾನುವಾರ ಸಂಜೆ ತಿರುಪತಿಯಿಂದ ಹೈದರಾಬಾದ್ ಇಂಡಿಗೋ ವಿಮಾನ ಹೊರಟಿತ್ತು. ಸಂಜೆ ಸುಮಾರು 7:42 ರ ಸುಮಾರಿಗೆ ವಿಮಾನ ಹೊರಟಿತ್ತು. ವಿಮಾನ ಹೊರಟ ಸ್ವಲ್ಪ ಹೊತ್ತಲ್ಲೇ ತಾಂತ್ರಿಕ ದೋಷ ಕಂಡುಬಂದಿದೆ. ಇದ್ರಿಂದಾಗಿ 40 ನಿಮಿಷಗಳ ಕಾಲ ವಿಮಾನ ಆಕಾಶದಲ್ಲೇ ಸುತ್ತಾಡಿದೆ. ಬಳಿಕ ರಾತ್ರಿ 8:34ರ ಸುಮಾರಿಗೆ ತಿರುಪತಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಇದರಿಂದಾಗಿ ಹೈದರಾಬಾದ್ಗೆ ನಿಗದಿಪಡಿಸಲಾದ ಕೊನೆಯ ವಿಮಾನವನ್ನು ರದ್ದುಗೊಳಿಸಲಾಯಿತು. ವಿಮಾನ ರದ್ದಾದ ವಿಚಾರಕ್ಕೆ ಪ್ರಯಾಣಿಕರು, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದೆ. ಘಟನೆಯ ಕುರಿತು ವಿಮಾನಯಾನ ಸಂಸ್ಥೆ ಇದುವರೆಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ನೋಡಿರಿ

