ಬಿಗ್ ಬಾಸ್ಗಾಗಿ 3 ಸೀರಿಯಲ್ ಎಂಡ್.. TRP ಡೌನ್.. ಇನ್ಮುಂದೆ ಎಲ್ಲವೂ ಚೇಂಜ್! – BBKಗಾಗಿ ಯಾವ ಧಾರವಾಹಿ ಬಲಿ?

ಕನ್ನಡ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಈ ಬಾರಿಯೂ ಕಿಚ್ಚ ಸುದೀಪ್ ಹೋಸ್ಟ್ ಮಾಡ್ತಿರೋದು ಫ್ಯಾನ್ಸ್ ಗೆ ಖುಷಿಕೊಟ್ಟಿದೆ. ಇದೀಗ ಬಿಗ್ ಬಾಸ್ ಶುರುವಾಗ್ತಿದ್ದಂತೆ ಕಲರ್ಸ್ ಕನ್ನಡ ವಾಹಿನಿ ಮೂರು ಪ್ರಮುಖ ಸೀರಿಯಲ್ಗಳನ್ನ ಎಂಡ್ ಮಾಡ್ತಿದೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.
ಇದನ್ನೂ ಓದಿ: ನಾಲ್ಕನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಡ್ಯೂಕ್ ಚೆಂಡಿನ ಗುಣಮಟ್ಟ ಪರಿಶೀಲನೆ – ದಿಲೀಪ್ ಜಜೋಡಿಯಾ
ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ತೆರೆಹಿಂದೆ ಸಾಕಷ್ಟು ತಯಾರಿ ಮಾಡಿಕೊಳ್ಳಲಾಗ್ತಿದೆ. ಈಗಾಗಲೇ ಕೆಲ ಸೆಲೆಬ್ರಿಟಿಗಳಿಗೆ ಬಿಗ್ ಬಾಸ್ ಟೀಮ್ನಿಂದ ಕಾಲ್ ಹೋಗಿದೆ.. ಕೆಲ ಸೆಲೆಬ್ರಿಟಿಗಳು ಶೋಗೆ ಬರೋದಿಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಅಂತೆ ಕಂತೆಗಳೆಲ್ಲಾ ಹರಿದಾಡ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರಂಭವಾಗಲಿದೆ ಎಂದು ಹೇಳಲಾಗ್ತಿದೆ. ಇದೀಗ ಬಿಗ್ಬಾಸ್ ಶೋಗಾಗಿ 3 ಸೀರಿಯಲ್ಗಳು ಎಂಡ್ ಆಗಲಿದೆ.
ಹೌದು, ಬಿಗ್ ಬಾಸ್ ಶೋ ವಾರ ಏಳು ದಿನ ಕೂಡ ಪ್ರಸಾರವಾಗುತ್ತೆ.. ಬಿಗ್ ಬಾಸ್ ಆರಂಭ ಆಯ್ತು ಅಂದ್ರೆ ಕಲರ್ಸ್ ಕನ್ನಡದ ಟಿಆರ್ಪಿ ಫುಲ್ ಜಂಪ್ ಆಗುತ್ತೆ.. ಯಾಕಂದ್ರೆ ಬಿಗ್ಬಾಸ್ಗೆ ಅದ್ರದ್ದೇ ಆದ ವೀಕ್ಷಕರು ಇದ್ದಾರೆ.. ಪ್ರೈಮ್ ಟೈಮ್ನಲ್ಲಿ ಈ ಶೋ ಟೆಲಿಕಾಸ್ಟ್ ಆಗೋದ್ರಿಂದ ಕಲರ್ಸ್ ಕನ್ನಡದಲ್ಲಿ ಕೆಲ ಸೀರಿಯಲ್ ಎಂಡ್ ಮಾಡಿದ್ರೆ, ಇನ್ನೂ ಕೆಲ ಸೀರಿಯಲ್ ಸ್ಲಾಟ್ ಕೂಡ ಚೇಂಜ್ ಆಗುತ್ತೆ. ಇದೀಗ ಬಿಗ್ ಬಾಸ್ ಶುರುವಾಗ್ತಿದ್ದಂತೆ ಮೂರು ಸೀರಿಯಲ್ ಮುಕ್ತಾಯ ಆಗ್ತಿದೆ. ಅದ್ರಲ್ಲಿ ಮೊದಲನೆಯ ಸೀರಿಯಲ್ ದೃಷ್ಟಿಬೊಟ್ಟು.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ದೃಷ್ಟಿಬೊಟ್ಟು ಸೀರಿಯಲ್ ಆರಂಭದಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿತ್ತು. ಈ ಸೀರಿಯಲ್ನಲ್ಲಿ ನಟ ವಿಜಯ್ ಸೂರ್ಯಗೆ ಅರ್ಪಿತಾ ಮೋಹಿತೆ ನಾಯಕಿ ಆಗಿದ್ರು.. ಸುಂದರ ಹುಡುಗಿಯರನ್ನ ಹೇಟ್ ಮಾಡೋ ದತ್ತ ಭಾಯ್. ದೃಷ್ಠಿಗೆ ಸೌಂದರ್ಯವೇ ಶಾಪ. ಕಡೆಗೆ ಅವರಿಬ್ರೇ ಮದುವೆ ಆಗೋ ಹಾಗಾಯ್ತು.. ಇದೀಗ ದತ್ತನಿಗೂ ದೃಷ್ಠಿ ಮೇಲೆ ಪ್ರೀತಿ ಶುರುವಾಗಿದೆ. ಆದ್ರೆ ದತ್ತ ಭಾಯ್ ಟಿಆರ್ಪಿ ತಂದುಕೊಟ್ಟಿಲ್ಲ.. ಹೀಗಾಗೇ ಸೀರಿಯಲ್ ಸದ್ಯದಲ್ಲೇ ಎಂಡ್ ಆಗಲಿದೆ ಎಂದು ಹೇಳಲಾಗ್ತಿದೆ.
ಇನ್ನು ಕಲರ್ಸ್ ಕನ್ನಡದ ಜನಪ್ರೀಯ ಧಾರವಾಹಿಗಳಲ್ಲಿ ರಾಮಾಚಾರಿ ಕೂಡ ಒಂದು. ಇದೀಗ ಚಾರು ಗರ್ಭಿಣಿಯಾಗಿದ್ದಾಳೆ. ಆದ್ರೆ ಮಾನ್ಯತಾ ಮಗಳ ಗಂಡ ಅಂತಾನೂ ನೋಡದೇ ರಾಮಾಚಾರಿಯನ್ನ ಕೊಲ್ಲಲು ಪ್ಲ್ಯಾನ್ ಮಾಡಿದ್ದಾಳೆ. ಆದ್ರೀಗ ಈ ಸೀರಿಯಲ್ ಕೂಡ ಬಿಗ್ ಬಾಸ್ ಆರಂಭಕ್ಕೂ ಮುನ್ನ ಅಂತ್ಯ ಕಾಣಲಿದೆ ಎಂದು ಹೇಳಲಾಗ್ತಿದೆ. ರಾಮಾಚಾರಿ ಧಾರಾವಾಹಿ ತಂಡ ಅಂತಿಮ ಸಂಚಿಕೆಗಳ ಚಿತ್ರೀಕರಣದಲ್ಲಿ ತೊಡಗಿದೆ ಎಂದು ಹೇಳಲಾಗ್ತಿದೆ. ಇನ್ನು ರಾಮಾಚಾರಿ ಟಿಆರ್ಪಿಯಲ್ಲೂ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ರಾಮಾಚಾರಿ ಕಥೆ ಸದ್ಯ ಸಾಗುತ್ತಿರುವ ದಿಕ್ಕು ನೋಡಿದ್ರೆ ಸದ್ಯದಲ್ಲೇ ಎಂಡ್ ಆದರೂ ಆಗಬಹುದು.
ಇನ್ನು ಕಲರ್ಸ್ ಕನ್ನಡದಲ್ಲಿ ಕರಿಮಣಿ ಸೀರಿಯಲ್ ಕಳೆದ ವರ್ಷವಷ್ಟೇ ಆರಂಭವಾಗಿತ್ತು.. ಆದ್ರೆ ವೀಕ್ಷಕರ ಮನ ಗೆಲ್ಲುವಲ್ಲಿ ಫೇಲ್ ಆಗಿದೆ. ಟಿಆರ್ಪಿ ರೇಸ್ನಲ್ಲೂ ಹಿಂದುಳಿದಿದೆ. ಹೀಗಾಗೇ ಕರಿಮಣಿ ಸೀರಿಯಲ್ ಸದ್ಯದಲ್ಲೇ ಎಂಡ್ ಆಗಲಿದೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭಿಸಿಲ್ಲ. ಒಂದು ವೇಳೆ ಇದೇ ನಿಜವಾದರೆ ಒಂದೆಡೆ ಬಿಗ್ಬಾಸ್ ಶುರುವಾಗುವ ಖುಷಿಯ ಜೊತೆಗೆ, ಮೂರು ಸೀರಿಯಲ್ಗಳ ಪ್ರಸಾರ ಇರೋಲ್ಲ ಅನ್ನೋ ಬೇಸರವೂ ಪ್ರೇಕ್ಷಕರಲ್ಲಿ ಮೂಡಲಿದೆ.

ನೋಡಿರಿ

