2026ರ ಐಪಿಎಲ್ ಗೆ RCBಯಲ್ಲೂ ಬಾರೀ ಬದಲಾವಣೆ – ಮೂವರು ಆಟಗಾರರು ತಂಡದಿಂದ ರಿಲೀಸ್?

2026ರ ಐಪಿಎಲ್ ಗೆ RCBಯಲ್ಲೂ ಬಾರೀ ಬದಲಾವಣೆ – ಮೂವರು ಆಟಗಾರರು ತಂಡದಿಂದ ರಿಲೀಸ್?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 19 ಗೆ ಈಗಿನಿಂದಲೇ ಸಿದ್ಧತೆಗಳು ಆರಂಭ ಆಗಿವೆ. ಅದರ ಮೊದಲ ಹೆಜ್ಜೆಯಾಗಿ ಜುಲೈ 4 ರಿಂದಲೇ ಆಟಗಾರರ ಟ್ರೇಡ್ ವಿಂಡೋ ಕೂಡ ಓಪನ್ ಆಗಿದೆ. ಅಂದರೆ ಟ್ರೇಡ್ ವಿಂಡೋ ಆಯ್ಕೆಯ ಮೂಲಕ 10 ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನು ಬದಲಿಸಿಕೊಳ್ಳಬಹುದು. ಅಥವಾ ಬೇರೊಂದು ತಂಡದಲ್ಲಿರುವ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಬಹುದು. ಈ ಎರಡು ಆಯ್ಕೆಗಳ ಮೂಲಕ ಹರಾಜಿಗೂ ಮುನ್ನ ತಂಡಕ್ಕೆ ಹೊಸ ಆಟಗಾರರನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ. ಅದ್ರಂತೆ ಆರ್​ಸಿಬಿ ಕೂಡ ಮೂವರನ್ನ ರಿಲೀಸ್ ಮಾಡೋಕೆ ನೋಡ್ತಿದೆ. ಅದ್ರಲ್ಲಿ ನಂಬರ್ 1 ಇಂಗ್ಲೆಂಡ್ ಮೂಲದ ಆಲೌಂಡರ್ ಲಿಯಾಮ್ ಲಿವಿಂಗ್​ಸ್ಟೋನ್.

ಇದನ್ನೂ ಓದಿ : ದಸರಾಗೆ ಡೆವಿಲ್‌ ರಿಲೀಸ್?  – ದರ್ಶನ್‌ ಮುಂದಿನ ಚಿತ್ರ ರಕ್ಷಿತಾ ಪ್ರೇಮ್‌ ಜೊತೆ?

ಕಳಪೆ ಪ್ರದರ್ಶನ ನೀಡಿದ್ದ ಲಿವಿಂಗ್ ಸ್ಟೋನ್ ರಿಲೀಸ್?

2025ರ ಐಪಿಎಲ್​ಗೂ ಮುನ್ನ ಲಿಯಾಮ್ ಲಿವಿಂಗ್​ಸ್ಟೋನ್​ರನ್ನ ಆರ್​ಸಿಬಿ ಫ್ರಾಂಚೈಸಿ 8.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆದ್ರೆ ಕೊಟ್ಟ ಹಣಕ್ಕೂ ಅವ್ರ ಪರ್ಫಾಮೆನ್ಸ್​ಗೂ ನ್ಯಾಯ ಒದಗಿಸಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ 39.5 ಸರಾಸರಿಯಲ್ಲಿ 146.3 ಸ್ಟ್ರೈಕ್-ರೇಟ್‌ನಲ್ಲಿ 79 ರನ್ ಗಳಿಸಿದ್ರು. ಇದ್ರಲ್ಲಿ ಒಂದು ಅರ್ಧಶತಕವೂ ಸೇರಿತ್ತು. ಆದ್ರೆ ಆ ಬಳಿಕ ಐದು ಇನ್ನಿಂಗ್ಸ್‌ಗಳಲ್ಲಿ 6.6 ರ ಕಳಪೆ ಸರಾಸರಿ ಮತ್ತು 110 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 33 ರನ್‌ಗಳನ್ನು ಗಳಿಸಿದರು. ಹಾಗೇ ಇಡೀ ಪಂದ್ಯಾವಳಿಯಲ್ಲಿ ಕೇವಲ 9 ಓವರ್‌ಗಳನ್ನು ಬೌಲ್ ಮಾಡಿ ಎರಡು ವಿಕೆಟ್‌ಗಳನ್ನು ಪಡೆದರು. ಹೀಗಾಗಿ ನೆಕ್ಸ್​ಟ್ ಸೀಸನ್​ಗೆ ರಿಲೀಸ್ ಮಾಡೋಕೆ ನೋಡ್ತಿದೆ. ಹಾಗೇ ಮತ್ತೊಬ್ಬ ಆಟಗಾರ ರಸಿಕ್ ಸಲಾಂ ದಾರ್​ಗೂ ಬಿಡುಗಡೆ ನೀಡೋ ಸಾದ್ಯತೆ ಇದೆ.

6 ಕೋಟಿ ಪಡೆದ ರಸಿಕ್ ರಿಂದಲೂ ಬರಲಿಲ್ಲ ನಿರೀಕ್ಷಿತ ಪ್ರದರ್ಶನ!

ಆರ್‌ಸಿಬಿ ಪರ ರಸಿಕ್ ಸಲಾಂ ದಾರ್​ರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಕೇವಲ ಎರಡು ಪಂದ್ಯಗಳನ್ನು ಆಡಿ ಒಂದು ವಿಕೆಟ್ ಪಡೆದರು. 25 ವರ್ಷ ವಯಸ್ಸಿನವರಾದ ರಸಿಕ್‌ ಅವರಿಗೆ 6 ಕೋಟಿ ನೀಡಿ ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ದುಬಾರಿ ಮೊತ್ತ ನೀಡಿಯೂ ಕೂಡ ಅವ್ರಿಂದ ತಂಡಕ್ಕೆ ಯಾವ ಕೊಡುಗೆಯೂ ಸಿಗದ ಕಾರಣಕ್ಕೆ ಮುಂದಿನ ಆವೃತ್ತಿಗೆ ರಿಲೀಸ್ ಮಾಡೋ ಸಾದ್ಯತೆ ಇದೆ.

ಆರ್ ಸಿಬಿ ಲಕ್ಕಿ ಬಾಯ್ ಸ್ವಪ್ನಿಲ್ ಸಿಂಗ್ ಕೂಡ ರಿಲೀಸ್?

50 ಲಕ್ಷ ರೂಪಾಯಿಗಳಿಗೆ ಆರ್ಸಿಬಿ ಸೇರಿದ್ದ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ 2024 ರಲ್ಲಿ ಆರ್‌ಸಿಬಿ ಪಾಲಿಗೆ ಲಕ್ಕಿ ಬಾಯ್ ಆಗಿದ್ರು. ಏಳು ಪಂದ್ಯಗಳನ್ನು ಆಡಿ ಭರವಸೆ ಮೂಡಿಸಿದ್ರು. ಆದ್ರೆ ಈ ಬಾರಿ ಆರ್​ಸಿಬಿ ಪರ   ಕೃನಾಲ್ ಪಾಂಡ್ಯ ಬಿಗ್ ಸ್ಟ್ರೆಂಥ್ ಆಗಿದ್ರಿಂದ ಈ ಸೀಸನ್​ನಲ್ಲಿ ಒಂದೇ ಒಂದು ಪಂದ್ಯವನ್ನೂ ಆಡೋಕೆ ಚಾನ್ಸ್ ಸಿಗಲಿಲ್ಲ. ಮುಂದಿನ ಸೀಸನ್​ನಲ್ಲೂ ಸ್ವಪ್ನಿಲ್ ಸಿಂಗ್​ಗೆ ಅವಕಾಶಗಳು ಇನ್ನಷ್ಟು ಕಡಿಮೆಯಾಗಲಿವೆ. ಹೀಗಾಗಿ 34 ವರ್ಷದ ಸ್ವಪ್ನಿಲ್ ಬೇರೆ ಟೀಂ ಸೇರುವ ನಿರೀಕ್ಷೆ ಇದೆ.

Shantha Kumari