ಬಾಲಕನೊಂದಿಗೆ ಪಾಠ ಕೇಳಲು ಸ್ಕೂಲ್‌ಗೆ ಬಂದ ಶ್ವಾನ – ತರಗತಿಯಲ್ಲಿ ಏನಾಯ್ತು ಗೊತ್ತಾ?

ಶ್ವಾನಗಳು ನಿಜವಾಗಿಯೂ ಮನುಷ್ಯನ ಅತ್ಯುತ್ತಮ ಸ್ನೇಹಿತ. ಹೀಗಾಗೇ ಅನೇಕರು ನಾಯಿಗಳನ್ನ ಮನೆಯಲ್ಲಿ ಸಾಕುತ್ತಾರೆ. ಮನೆಯಲ್ಲಿ ಸಣ್ಣ ಮಕ್ಕಳಿದ್ರಂತೂ ನಾಯಿಗಳು ವಿಶೇಷ ಕಾಳಜಿ ವಹಿಸುತ್ತೆ.. ಮಕ್ಕಳ ಜೊತೆ ಆಟ ಆಡಿಕೊಂಡು ಇರುತ್ತೆ. ಇದೀಗ ಇಲ್ಲೊಂದು ಶ್ವಾನ ಬಾಲಕನೊಂದಿಗೆ ಸ್ಕೂಲ್‌ಗೆ ಹೋಗಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ನಾಲ್ಕನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನವೇ ಡ್ಯೂಕ್ ಚೆಂಡಿನ ಗುಣಮಟ್ಟ ಪರಿಶೀಲನೆ – ದಿಲೀಪ್ ಜಜೋಡಿಯಾ
ಬಾಲಕನೊಂದಿಗೆ ನಾಯಿಯೊಂದು ಶಾಲೆಗೆ ಹೋಗಿದೆ. ಆತನ ಜೊತೆ ಕ್ಲಾಸ್‌ನಲ್ಲಿ ಕುಳಿತು ಪಾಠ ಕೇಳಿದೆ. ಇದೀಗ ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದ್ರ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ತರಗತಿ ನಡೆಯುತ್ತಿದೆ. ಈ ವೇಳೆ ಶ್ವಾನವೊಂದು ಬಾಲಕನ ಪಕ್ಕದಲ್ಲಿ ಬಂದು ಕುಳಿತಿದೆ. ಬಳಿಕ ಶ್ವಾನ ಬಾಲಕನಿಗೆ ಕೈ ಕೊಡುತ್ತದೆ. ಆ ಬಾಲಕ ಕೂಡ ಯಾವುದೇ ಭಯವಿಲ್ಲದೆ ಆ ಶ್ವಾನದ ಕೈಯನ್ನು ಗಟ್ಟಿಯಾಗಿ ಹಿಡಿಯುತ್ತಾನೆ. ಬಳಿಕ ಆ ಬಾಲಕ ಅಲ್ಲಿದ್ದ ತನ್ನ ಸ್ನೇಹಿತರಿಗೂ ನಾಯಿಯನ್ನು ತೋರಿಸಿ ಖುಷಿಪಟ್ಟಿದ್ದಾನೆ. ಈ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದ್ದು, ಪಾಠ ಕೇಳಲು ಕ್ಲಾಸ್‌ಗೆ ಬಂದಿರ್ಬೇಕು ಅಂತಾ ಕಾಮೆಂಟ್ ಮಾಡಿದ್ದಾರೆ.

ನೋಡಿರಿ

