ವೈಭವ್ನ ಪೃಥ್ವಿ ಶಾಗೆ ಹೋಲಿಸಿದ್ದೇಕೆ? 14ರ ಪೋರನಿಗೆ ನೆಟ್ಟಿಗರ ವಾರ್ನಿಂಗ್
ಹಳಿ ತಪ್ಪುತ್ತಾ ಸೂರ್ಯವಂಶಿ ಜರ್ನಿ?

ವೈಭವ್ನ ಪೃಥ್ವಿ ಶಾಗೆ ಹೋಲಿಸಿದ್ದೇಕೆ?  14ರ ಪೋರನಿಗೆ ನೆಟ್ಟಿಗರ ವಾರ್ನಿಂಗ್ಹಳಿ ತಪ್ಪುತ್ತಾ ಸೂರ್ಯವಂಶಿ ಜರ್ನಿ?

  ಜಸ್ಟ್ 14ಕ್ಕೆ 14 ವರ್ಷಕ್ಕೆ ವೈಭವ್ ಸೂರ್ಯವಂಶಿ ಕ್ರಿಕೆಟ್‌ನಲ್ಲಿ ಹೊಸ ಹೊಸ ದಾಖಲೆಗಳನ್ನ ಬರೆಯುತ್ತಾ ಮಿಂಚುತ್ತಿದ್ದಾರೆ.. ಐಪಿಎಲ್‌ನಂತೂ ಈ ಸಲ ಸೂಪರ್ ಸ್ಟಾರ್ ಆಗಿದ್ರು ವೈಭವ್.. ಜೊತೆಗೆ U10 ನಲ್ಲೂ ಸೆಂಚುರಿ ಮೇಲೆ ಸೆಂಚುರಿ ಬಾರಿಸುತ್ತಾ ಹವಾ ಮಾಡುತ್ತಿದ್ದಾರೆ.. ದಿನದಿಂದ ದಿನಕ್ಕೆ ಫ್ಯಾನ್ಸ್‌ ಗಳು ಕೂಡ ಹೆಚ್ಚಾಗುತ್ತಿದ್ದಾರೆ. ಇದ್ದನ್ನೆಲ್ಲಾ ನೋಡುತ್ತಿರೋ ನೆಟ್ಟಿಗರು ವೈಭವ್‌ಗೆ ಒಂದು ಕಿವಿ ಮಾತು ಹೇಳುತ್ತಿದ್ದಾರೆ..

  ವೈಭವ್‌ಗೆ ಪೃಥ್ವಿ ಶಾಗೆ ಬಂದಂತಹ ಗತಿ ಬಾರದಿರಲಿ

2025ರ ಮೆಗಾ ಹರಾಜಿನಲ್ಲಿ 1.1 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೋದ ವೈಭವ್ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಸಂಜು ಸ್ಯಾಮ್ಸನ್ ಗಾಯಗೊಂಡ ಬಳಿಕ ತಂಡದಲ್ಲಿ ಸ್ಥಾನ ಪಡೆದ 14 ವರ್ಷದ ವೈಭವ್ ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಿಕೊಂಡರು. ವೈಭವ್ 7 ಇನಿಂಗ್ಸ್‌ಗಳಲ್ಲಿ 252 ರನ್ ಗಳಿಸಿದರು ಮತ್ತು ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  35 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಎಲ್ಲರ ಗಮನ ಸೆಳೆದ್ರು.. ಐಪಿಎಲ್ ಮುಗಿದ ಬಳಿಕ, ಸೂರ್ಯವಂಶಿ ಅಂಡರ್-19 ಕ್ರಿಕೆಟ್‌ನಲ್ಲಿ ತಮ್ಮ ಮೋಡಿಯನ್ನು ಮುಂದುವರೆಸಿದರು. ಇಂಗ್ಲೆಂಡ್ ವಿರುದ್ಧದ ಯೂತ್ ಏಕದಿನ ಸರಣಿಯಲ್ಲಿ 48, 45, 86, 143 ಮತ್ತು 33 ರನ್‌ಗಳೊಂದಿಗೆ ಮಿಂಚಿದರು ಮತ್ತು ನಂತರ ಅದೇ ತಂಡದ ವಿರುದ್ಧದ ಮೊದಲ ಯೂತ್ ಟೆಸ್ಟ್‌ನಲ್ಲಿ 14 ಮತ್ತು 56 ರನ್‌ಗಳನ್ನು ಗಳಿಸಿದರು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಸೂರ್ಯವಂಶಿ ಅದ್ಭುತ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಆಟಗಾರನಿಗೆ ಸಿಗುತ್ತಿರುವ ಜನಪ್ರಿಯತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಪೃಥ್ವಿ ಶಾ ಅವರಿಗೆ ಬಂದಂತಹ ಗತಿ ವೈಭವ್ ಸೂರ್ಯವಂಶಿಗೆ ಬಾರದಿರಲಿ ಎಂದು ಆಶಿಸುತ್ತಿದ್ದಾರೆ.

ಇದನ್ನೂ ಓದಿ: ಲಾರ್ಡ್ಸ್ ಮ್ಯೂಸಿಯಂನಲ್ಲಿ KL ಜೆರ್ಸಿ – ವಿಶ್ವಶ್ರೇಷ್ಠರ ಸಾಲಿಗೆ ಸೇರಿದ ಕನ್ನಡಿಗ

ವೈಭವ್‌ನ ಪೃಥ್ವಿ ಶಾಗೆ ಹೊಲಿಸೋಕೆ ಕಾರಣ ಕೂಡ ಉಂಟು.. ಪೃಥ್ವಿ ಶಾ ಒನ್​ ಆಫ್​ ದ ಬೆಸ್ಟ್​ & ಟ್ಯಾಲೆಂಟೆಡ್​ ಕ್ರಿಕೆಟರ್​. ಟೀಮ್​ ಇಂಡಿಯಾ ಪರ ಡೆಬ್ಯೂ ಪಂದ್ಯದಲ್ಲೇ ಶತಕ ಸಿಡಿಸಿ ಟೀಮ್ ಇಂಡಿಯಾದ ಭವಿಷ್ಯ ಎನಿಸಿಕೊಂಡ ಆಟಗಾರ. ಈತನ ಆಟ ನೋಡಿದ ದಿಗ್ಗಜರು, ಮರಿ ಸಚಿನ್​, ಸೆಹ್ವಾಗ್ ಎಂದೇ ಗುಣಗಾನ ಮಾಡಿದ್ದುಂಟು. 18ರ ವಯಸ್ಸಿನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​​ಗೆ ಗ್ರ್ಯಾಂಡ್​​ ಎಂಟ್ರಿ ನೀಡಿದ ಬೆಂಕಿ ಓಪನರ್​. ಆದ್ರೆ, ವಿಶ್ವ ಕ್ರಿಕೆಟ್​ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಈತನ ವೃತ್ತಿ ಜೀವನ ಹಾಳಾಗಿ ಹಳ್ಳ ಹಿಡಿದು ಹೋಯ್ತು..  ಪೃಥ್ವಿ ಶಾರ ಫಿಟ್ನೆಸ್, ಅಶಿಸ್ತೇ ಆತನ ಕರಿಯರ್​ಗೆ ಮುಳ್ಳಾಗಿ ಹೋಯಿತು. ನಾನು ಕ್ರಿಕೆಟ್‌ನಲ್ಲಿ ಏನೋ ಸಾಧನೆ ಮಾಡಿದ್ದೇನೆ ಅನ್ನೋ ಅಹಂ ನೆತ್ತಿಗೇರಿತ್ತು.. ಹೇಗ್ ಈಗ ವೈಭವ್‌ಗೆ ಹೆಸರಿತ್ತೋ ಹಾಗೇ ಪೃಥ್ವಿ ಶಾಗೆ ಹೆಸರಿತ್ತು. ಬಟ್ ಆಮೇಲೆ ತನ್ನದೇ ತಪ್ಪಿನಿಂದ ಟೀಮ್ ಇಂಡಿಯಾದಿಂದ ಹೊರ ಬಿದ್ದಿದ್ದ ಪೃಥ್ವಿ  ಐಪಿಎಲ್​ನಲ್ಲೂ ಅನ್​ಸೋಲ್ಡ್ ಪ್ಲೇಯರ್ ಆಗಿಬಿಟ್ಟರು. ಇದಕ್ಕೆ ಕಾರಣವಾಗಿದ್ದು ಪೃಥ್ವಿ ಶಾರ ನಡೆ ಹಾಗೂ ಶಿಸ್ತು ಮಾತ್ರವಲ್ಲ. ಕೆಲವರ ಗೆಳೆತನವೂ ಆಗಿತ್ತು. ಹೀಗಾಗಿ ಈ ವೈಭವ್ ಸೂರ್ಯವಂಶಿಯನ್ನ ನೋಡಿದ ನೆಟ್ಟಿಗರು ಚಿಕ್ಕ ವಯಸ್ಸಿನಲ್ಲಿ ಸಿಕ್ಕ ಸಕ್ಸಸ್‌ ಹುಚ್ಚು ನೆತ್ತಿಗೇರಿಸಿಕೊಂಡು ಕೆಟ್ಟವರ ಗೆಳತನ ಮಾಡಿ ಹೆಸರನ್ನ ಕೆಡಿಸಿಕೊಳ್ಳಬೇಡ ಅಂತ ಬುದ್ಧಿ ವೈಭವ್‌ ಸೂರ್ಯವಂಶಿಗೆ ಬುದ್ಧಿ ಹೇಳುತ್ತಿದ್ದಾರೆ.

Kishor KV