4ನೇ ಮ್ಯಾಚ್ ನೂ ಕೈಚೆಲ್ಲುತ್ತಾ IND? – ಮ್ಯಾಂಚೆಸ್ಟರ್ ನಲ್ಲಿ ಗೆದ್ದೇ ಇಲ್ಲ ಭಾರತ
35 ವರ್ಷ.. ಶತಕ ಬಂದಿಲ್ಲ.. ಈ ಸಲ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಗೆಲ್ಲಬಹುದಾಗಿದ್ದ ಎರಡು ಪಂದ್ಯಗಳನ್ನ ತನ್ನದೇ ತಪ್ಪಿನಿಂದ ಕಳ್ಕೊಳ್ತು. ಫಸ್ಟ್ ಮ್ಯಾಚಲ್ಲಿ 350+ ಟಾರ್ಗೆಟ್ ನೀಡಿಯೂ ಸೋಲಬೇಕಾಯ್ತು. ಮೂರನೇ ಪಂದ್ಯದಲ್ಲಿ 193 ರನ್ಗಳ ಸಾಧಾರಣ ಮೊತ್ತವನ್ನ ಚೇಸ್ ಮಾಡೋಕಾಗದೇ ಕೈಚೆಲ್ಲಿದ್ರು. ಸೋ ಎರಡು ಪಂದ್ಯಗಳನ್ನ ಗೆದ್ದಿರೋ ಇಂಗ್ಲೆಂಡ್ ತಂಡ ಸರಣಿಯಲ್ಲಿ ಲೀಡ್ ಸಾಧಿಸಿದೆ. ಇದೀಗ ನಾಲ್ಕನೇ ಪಂದ್ಯ ಭಾರತದ ಪಾಲಿಗೆ ಡು ಆರ್ ಡೈ ಮ್ಯಾಚ್ ಆಗಿದೆ.
ಇದನ್ನೂ ಓದಿ : 4 ವರ್ಷಗಳ ಬಳಿಕ ಮೈದಾನಕ್ಕೆ ಎಬಿ ಡಿವಿಲಿಯರ್ಸ್ – ದಿಗ್ಗಜರ ಜಟಾಪಟಿಗೆ ಕೌಂಟ್ ಡೌನ್!
ಭಾರತ ಮತ್ತು ಇಂಗ್ಲೆಂಡ್ ನಡವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಜುಲೈ 23ರಿಂದ ಆರಂಭ ಆಗ್ಲಿದೆ. ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ನಡೆಯಲಿರೋ ಈ ಪಂದ್ಯ ಉಭಯ ತಂಡಗಳ ಪಾಲಿಗೂ ಮೋಸ್ಟ್ ಇಂಪಾರ್ಟೆಂಟ್. ಈ ಮ್ಯಾಚ್ನ ಗೆದ್ದು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳೋದು ಆಂಗ್ಲರ ಪ್ಲ್ಯಾನ್. ಆದ್ರೆ ಸರಣಿ ಸಮಬಲ ಆಗ್ಬೇಕು ಅಂದ್ರೆ ಭಾರತ ಗೆಲ್ಲಲೇಬೇಕು. ಹೀಗಾಗಿ ಶುಭ್ಮನ್ ಗಿಲ್ ನೇತೃತ್ವದ ಭಾರತ ತಂಡ ನೆಟ್ಸ್ನಲ್ಲಿ ಭರ್ಜರಿ ಪ್ರಾಕ್ಟೀಸ್ ನಡೆಸ್ತಿದೆ. ಆದ್ರೆ ಮ್ಯಾಂಚೆಸ್ಟರ್ ಮೈದಾನ ಮತ್ತೊಮ್ಮೆ ಕಬ್ಬಿಣದ ಕಡಲೆಯಾಗುತ್ತಾ ಅನ್ನೋ ಆತಂಕ ಮೂಡಿಸಿದೆ.
ಭಾರತ ಎರಡು ಪಂದ್ಯಗಳನ್ನ ಸೋತಿದ್ರೂ ಕೂಡ ಬಹುತೇಕ ಸೆಷನ್ಗಳಲ್ಲಿ ಕಂಪ್ಲೀಟ್ ಡಾಮಿನೇಟ್ ಮಾಡಿತ್ತು. ಅದ್ರಲ್ಲೂ ಎರಡನೇ ಪಂದ್ಯವನ್ನ ಭರ್ಜರಿಯಾಗಿ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಎಡ್ಜ್ಬಾಸ್ಟನ್ ಟೆಸ್ಟ್ ಗೆಲ್ಲುವ ಮೂಲಕ ಇಂಗ್ಲಿಷ್ ಭದ್ರಕೋಟೆಯನ್ನು ಇದೇ ಮೊದಲ ಬಾರಿಗೆ ಬೇಧಿಸಿತ್ತು. ಈಗ ಮ್ಯಾಂಚೆಸ್ಟರ್ನಲ್ಲೂ ಅಂಥದ್ದೇ ಮೈಲುಗಲ್ಲು ಸ್ಥಾಪಿಸೋ ಸುವರ್ಣಾವಕಾಶ ಇದೆ. ಯಾಕಂದ್ರೆ ಇದುವರೆಗೆ, ಟೀಮ್ ಇಂಡಿಯಾ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಒಟ್ಟು ಒಂಬತ್ತು ಟೆಸ್ಟ್ ಪಂದ್ಯಗಳು ನಡೆದಿವೆ. ಅವುಗಳಲ್ಲಿ ನಾಲ್ಕರಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ಐದು ಟೆಸ್ಟ್ಗಳು ಡ್ರಾದಲ್ಲಿ ಕೊನೆಗೊಂಡಿವೆ. ಕೊನೆಯ ಬಾರಿಗೆ 2014 ರಲ್ಲಿ ಈ ಮೈದಾನದಲ್ಲಿ ಉಭಯ ರಾಷ್ಟ್ರಗಳು ಕಣಕ್ಕಿಳಿದಿದ್ವು. ಈಗ, 11 ವರ್ಷಗಳ ನಂತರ, ಭಾರತ ಮತ್ತೆ ಈ ಪ್ರತಿಷ್ಠಿತ ಮೈದಾನದಲ್ಲಿ ಕಣಕ್ಕಿಳಿಯಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಈ ಪಿಚ್ನಲ್ಲಿ ಯಾರು ಸೆಂಚುರಿ ಸಿಡಿಸ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ.
ಯೆಸ್. ಟೀಂ ಇಂಡಿಯಾ ಈ ಸರಣಿಯಲ್ಲಿ ಬ್ಯಾಟಿಂಗ್ನಲ್ಲಿ ಜಬರ್ದಸ್ತ್ ಪರ್ಫಾಮೆನ್ಸ್ನೇ ನೀಡ್ತಿದೆ. ಮೂರೂ ಪಂದ್ಯಗಳಲ್ಲೂ ಭಾರತದ ಪರ ಶತಕಗಳು ಬಂದಿದೆ. ಬಟ್ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಪಂದ್ಯದಲ್ಲಿ ಯಾರು ಶತಕ ಸಿಡಿಸ್ತಾರೆ ಅನ್ನೋದೇ ಕುತೂಹಲ. ಯಾಕಂದ್ರೆ ಈ ಮೈದಾನದಲ್ಲಿ ಭಾರತೀಯ ಬ್ಯಾಟರ್ ಶತಕ ಸಿಡಿಸಿ ಬರೋಬ್ಬರಿ 35 ವರ್ಷಗಳು ಕಳೆದಿವೆ. ಅಚ್ಚರಿ ಅನ್ಸಿದ್ರೆ ಇದನ್ನ ನಂಬಲೇಬೇಕು. ಅಂದರೆ ಈ ಮೈದಾನದಲ್ಲಿ ಟೀಮ್ ಇಂಡಿಯಾ ಬ್ಯಾಟರ್ ಕೊನೇ ಬಾರಿ ಸೆಂಚುರಿ ಬಾರಿಸಿದ್ದು 1990 ರಲ್ಲಿ. ಅದು ಸಚಿನ್ ತೆಂಡೂಲ್ಕರ್. ಆಗ ಸಚಿನ್ಗೆ ಕೇವಲ 17 ವರ್ಷ. ಇದಾದ ಬಳಿಕ ಖುದ್ದು ಸಚಿನ್ ತೆಂಡೂಲ್ಕರ್ಗೂ ಕೂಡ ಓಲ್ಡ್ ಟ್ರಾಫೋರ್ಡ್ನಲ್ಲಿ ಶತಕ ಬಾರಿಸಲು ಸಾಧ್ಯವಾಗಿಲ್ಲ. ಇತ್ತ ಶತಕಗಳ ಸರದಾರ ವಿರಾಟ್ ಕೊಹ್ಲಿ ಕೊಹ್ಲಿ ಬ್ಯಾಟ್ನಿಂದಲೂ ಮೂರಂಕಿ ಮೊತ್ತ ಗಳಿಸಿಲ್ಲ. ಹೀಗಾಗಿಯೇ ಈ ಬಾರಿ ಸೆಂಚುರಿ ಸಿಡಿಸುವ ಸರದಾರ ಯಾರೆಂಬ ಕುತೂಹಲ ಎಲ್ಲರಲ್ಲಿದೆ.
ಮ್ಯಾಂಚೆಸ್ಟರ್ ಚಾಲೆಂಜ್!
ಓಲ್ಡ್ ಟ್ರೋಫರ್ಡ್ ನಲ್ಲಿ ಕೇವಲ 8 ಭಾರತೀಯರಿಂದ ಶತಕ
1936 ರಲ್ಲಿ ಸೈಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಮರ್ಚೆಂಟ್
ಶತಕಗಳ ನೆರವಿನೊಂದಿಗೆ ಆ ಪಂದ್ಯವನ್ನು ಡ್ರಾ ಗೊಳಿಸುವಲ್ಲಿ ಯಶಸ್ವಿ
1959 ರಲ್ಲಿ, ಅಬ್ಬಾಸ್ ಅಲಿ ಬೇಗ್ ಇದೇ ಮೈದಾನದಲ್ಲಿ ಸೆಂಚುರಿ
1959 ರಲ್ಲಿ ಪಾಲಿ ಉಮ್ರಿಗರ್, 1974 ರಲ್ಲಿ ಸುನಿಲ್ ಗವಾಸ್ಕರ್
1982 ರಲ್ಲಿ ಸಂದೀಪ್ ಪಾಟೀಲ್, 1990 ರಲ್ಲಿ ಅಝರುದ್ದೀನ್ ಹಾಗೂ
ಇಂಗ್ಲೆಂಡ್ ಪಿಚ್ಗಳು ಬೇರೆ ತಂಡಗಳಿಗೆ ಮೊದ್ಲಿಂದಲೂ ಸವಾಲೇ ಆಗಿವೆ. ಭಾರತ ತಂಡದ ಸೋಲಿಗೂ ಕೂಡ ಹಲವು ಕಾರಣಗಳಿವೆ. ಈ ಮೈದಾನದ ಪಿಚ್ ಹೆಚ್ಚಾಗಿ ವೇಗದ ಬೌಲರ್ಗಳಿಗೆ ಅನುಕೂಲಕರವಾಗಿದೆ. ಈ ಗ್ರೀನ್ ವಿಕೆಟ್ ಮೇಲೆ ಪೇಸರ್ಸ್ ಡಾಮಿನೇಟ್ ಮಾಡ್ತಾರೆ. ಹೀಗಾಗೇ ಏಷ್ಯಾದ ತಂಡಗಳು ಇಲ್ಲಿ ಆಡುವುದು ತುಂಬಾ ಕಷ್ಟಕರವಾಗಿರುತ್ತದೆ. ಮ್ಯಾಂಚೆಸ್ಟರ್ನಲ್ಲಂತೂ ಇಂಗ್ಲೆಂಡ್ ತಂಡ ಭರ್ಜರಿ ರೆಕಾರ್ಡ್ಸ್ ಹೊಂದಿದೆ. ಇದುವರೆಗೆ 84 ಟೆಸ್ಟ್ ಪಂದ್ಯಗಳಲ್ಲಿ, ಅತಿಥೇಯ ತಂಡವು 33 ಪಂದ್ಯಗಳನ್ನು ಗೆದ್ದಿದ್ದರೆ, 15 ಪಂದ್ಯಗಳನ್ನು ಸೋತಿದೆ. ಉಳಿದ 36 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ನೋಡಿರಿ

