ಶಾರುಖ್ ಖಾನ್ಗೆ ಸಿನಿಮಾ ಶೂಟಿಂಗ್ ವೇಳೆ ಗಾಯ -ಸ್ಟಂಟ್ ಮಾಡುವಾಗ ಬೆನ್ನಿಗೆ ಪೆಟ್ಟು

ಬಾಲಿವುಡ್ ನಟ ಶಾರುಖ್ ಖಾನ್ ಸಿನಿಮಾ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಕಿಂಗ್ ಸಿನಿಮಾ ಶೂಟಿಂಗ್ ವೇಳೆ ಡ್ಯೂಪ್ ಇಲ್ಲದೇ ಸ್ಟಂಟ್ ಮಾಡುವಾಗ ಕಿಂಗ್ ಖಾನ್ ಬೆನ್ನಿಗೆ ಪೆಟ್ಟಾಗಿದೆ. ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಮುಂಬೈನ ಚಿತ್ರೀಕರಣದ ಸ್ಟುಡಿಯೋದಲ್ಲಿ ಸಾಹಸ ಸನ್ನಿವೇಶ ಚಿತ್ರೀಕರಣ ಮಾಡುವಾಗ ಶಾರುಖ್ ಕಾನ್ ಗಾಯಗೊಂಡಿದ್ದಾರೆ. ಚಿತ್ರೀಕರಣದ ವೇಳೆ ಶಾರುಕ್ ಮಗಳು ಕೂಡ ಭಾಗಿಯಾಗಿದ್ದರು.
ಗಾಯದ ಕಾರಣಕ್ಕೆ ಶಾರುಖ್ ಅಮೆರಿಕಕ್ಕೆ ಪ್ರಯಾಣ ಬೆಳೆಸಬಹುದು ಎನ್ನಲಾಗಿದೆ. ನಂತರ ಯುಕೆಗೆ ಪ್ರವಾಸ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲಿ ಕುಟುಂಬದವರೊಟ್ಟಿಗೆ ಇದ್ದು ಚೇತರಿಸಿಕೊಳ್ಳಲಿದ್ದಾರೆ. ಪೆಟ್ಟಾಗಿರೋದ್ರಿಂದ ವಿಶ್ರಾಂತಿ ಪಡೆಯಬೇಕಾಗಿದ್ದು, ಶ್ರೀಲಂಕಾಗೆ ಯೋಜಿಸಿದ್ದ ಪ್ರವಾಸವನ್ನು ಮುಂದೂಡಲಾಗಿದೆ
ಇನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ‘ಕಿಂಗ್’ ಚಿತ್ರ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ಜೈದೀಪ್ ಅಹ್ಲಾವತ್, ಅನಿಲ್ ಕಪೂರ್ ಮತ್ತು ಅಭಯ್ ವರ್ಮಾ ಕೂಡ ನಟಿಸಿದ್ದಾರೆ. ಈಗ ಶಾರುಖ್ ಖಾನ್ಗೆ ಪೆಟ್ಟಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಿಂಗ್ ಖಾನ್ ಗಾಯಗೊಂಡಿರುವುದರಿಂದ ಸಿನಿಮಾ ಚಿತ್ರೀಕರಣದಲ್ಲಿ ವಿಳಂಬವಾಗಲಿದೆ ಎನ್ನಲಾಗಿದೆ.

ನೋಡಿರಿ

