ರಾಜ್ಯದ ದೇಗುಲಗಳಲ್ಲಿ ಮೊಬೈಲ್‌ ಬಳಕೆಗೆ ನಿಷೇಧ ಹೇರುತ್ತಾರಾ?- ಸರ್ಕಾರಕ್ಕೆ ಅರ್ಚಕರ ಒಕ್ಕೂಟ ನೀಡಿದ ಮನವಿಯಲ್ಲಿ ಏನೇನಿದೆ?

ರಾಜ್ಯದ ದೇಗುಲಗಳಲ್ಲಿ ಮೊಬೈಲ್‌ ಬಳಕೆಗೆ ನಿಷೇಧ ಹೇರುತ್ತಾರಾ?- ಸರ್ಕಾರಕ್ಕೆ ಅರ್ಚಕರ ಒಕ್ಕೂಟ ನೀಡಿದ ಮನವಿಯಲ್ಲಿ ಏನೇನಿದೆ?

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್‌ ಫೋನ್ ಬಳಕೆಯನ್ನು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮನವಿ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಮುಜರಾಯಿ ಸಚಿವ ಶಶಿಕಲಾ ಜೊಲ್ಲೆಯವರಿಗೆ ಮನವಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿಯನ್ನು ಉಚ್ಚಾಟಿಸುವಂತೆ ಜೆ.ಪಿ.ನಡ್ಡಾ ಆಗ್ರಹ- ಅರುಣಾಚಲ ಪ್ರದೇಶದಲ್ಲಿ ಸೈನಿಕರ ಮೇಲೆ ಚೀನಾ ಹಲ್ಲೆ ನಡೆಸಿದೆ ಎಂಬ ಆರೋಪಕ್ಕೆ ಆಕ್ರೋಶ!

ದೇಗುಲಗಳಲ್ಲಿ ನಡೆಯುವ ಧಾರ್ಮಿಕ ಆಚರಣೆಯ ಮಧ್ಯದಲ್ಲಿ ಅಶ್ಲೀಲವಾದ ರಿಂಗ್‌ ಟೋನ್‌ಗಳಿಂದ ಕಿರಿಕಿರಿಯಾಗುತ್ತಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಭಕ್ತಾದಿಗಳು ಧ್ಯಾನಾಸಕ್ತರಾಗಿ ಧ್ಯಾನ ಮಾಡುವಾಗ ಕೆಲವು ಹೆಣ್ಣು ಮಕ್ಕಳ ಫೋಟೋ ತೆಗೆಯುವುದು, ಜೋರಾಗಿ ಮಾತಾಡುವುದು, ದೇವರ ಫೋಟೋ ತೆಗೆಯುವುದು, ಅರ್ಚನೆ ಮಾಡುತ್ತಿರುವಾಗ ಮೊಬೈಲ್‌ನಲ್ಲಿ ಹಾಡು ಹಾಕುವುದು.. ಹೀಗೆ ಯಾವೆಲ್ಲಾ ತೊಂದರೆಗಳು ಆಗ್ತಿವೆ ಎಂದು ಅರ್ಚಕರ ಒಕ್ಕೂಟ ಮನವಿ ಪತ್ರದಲ್ಲಿ ಉಲ್ಲೇಖ ಮಾಡಿದೆ. ಈಗ ಮುಜರಾಯಿ ಸಚಿವರು ಯಾವ ನಿರ್ಧಾರ ತೆಗೆದುಕೊಳ್ತಾರೆಂದು ನೋಡಬೇಕಿದೆ.

suddiyaana