‘ಚೀನಾ ಪೇ ಚರ್ಚಾ’ ಯಾವಾಗ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ- ಚೀನಾ ವಿಷಯದಲ್ಲಿ ಮೋದಿ ಸರ್ಕಾರದ ಧೋರಣೆಗೆ ವಿರೋಧ!
ಬಿಜೆಪಿ ಹೀಗೆ ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡ್ತಿದ್ದರೆ ಇತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಚೈನಾ ಪೆ ಚರ್ಚಾ ನಡೆಯೋದು ಯಾವಾಗ ಎನ್ನುವುದು ದೇಶಕ್ಕೆ ಗೊತ್ತಾಗಬೇಕಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಚೈನಾ ವಿಷಯದ ಬಗ್ಗೆ ಮಾತಾಡಲು ಅವಕಾಶ ಕೊಡುತ್ತಿಲ್ಲ. ಡೋಕ್ಲಾಮ್ನಲ್ಲಿ ಚೀನಾ ನಡೆಸುತ್ತಿರುವ ಕಾಮಗಾರಿಗಳು ಭಾರತದ ಅತ್ಯಂತ ಮಹತ್ವದ ಸಿಲಿಗುರಿ ಟಾರ್ಗೆಟ್ಗೆ ಬೆದರಿಕೆ ಹಾಕುವಂತಿವೆ. ಹಾಗಿದ್ದರೂ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಚಕಾರ ಎತ್ತುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದ್ದಾರೆ. ಇದೇ ಕಾರಣಕ್ಕೆ ಹಿಂದೆ ಚಾಯ್ ಪೆ ಚರ್ಚಾ ನಡೆಸಿದ್ದ ನರೇಂದ್ರ ಮೋದಿಯವರು ಚೈನಾ ಪೆ ಚರ್ಚಾ ನಡೆಸೋದು ಯಾವಾಗ ಎಂದು ಖರ್ಗೆ ಪ್ರಶ್ನಿಸಿದ್ದಾರೆ.