IPL ಸೈಲೆಂಟ್.. ENGನಲ್ಲಿ ವೈಲೆಂಟ್ – ಕೊಹ್ಲಿಯನ್ನು ಕಾಪಿ ಮಾಡಿ ಕೆಟ್ಟ ಗಿಲ್
RO-KOಗಾಗಿ ಸೆಲ್ಫ್ ಇಮೇಜ್ ಬಿಟ್ರಾ?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕಂಡಂತಹ ಲೆಜೆಂಡರಿ ಪ್ಲೇಯರ್ಸ್ ಌಂಡ್ ಕ್ಯಾಪ್ಟನ್ಸ್.. ಇಬ್ಬರ ಌಟಿಟ್ಯೂಡ್ ಬೇರೆ ಬೇರೆಯಾದ್ರೂ ಟಾರ್ಗೆಟ್ ಮಾತ್ರ ಒಂದೇ ಆಗಿತ್ತು. ತಮ್ಮದೇ ವೇಯಲ್ಲಿ ತಂಡವನ್ನ ಗೆಲುವಿನ ದಡ ಮುಟ್ಟಿಸ್ತಿದ್ರು. ಬಟ್ ಈ ಇಬ್ಬರನ್ನೂ ಕಾಪಿ ಮಾಡೋಕೆ ಹೋಗಿ ಶುಭ್ಮನ್ ಗಿಲ್ ಎಡವಟ್ಟು ಮಾಡಿಕೊಳ್ತಿದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಇತ್ತ ಕೂಲ್ ಌಂಡ್ ಕಾಮ್ ಆಗಿಯೂ ಹ್ಯಾಂಡಲ್ ಮಾಡ್ತಿಲ್ಲ ಅತ್ತ ಅಗ್ರೆಸ್ಸಿವ್ ಆಗಿಯೂ ಕಂಟ್ರೋಲ್ ಮಾಡೋಕಾಗ್ತಿಲ್ಲ.
ಇದನ್ನೂ ಓದಿ : 4 ವರ್ಷಗಳ ಬಳಿಕ ಮೈದಾನಕ್ಕೆ ಎಬಿ ಡಿವಿಲಿಯರ್ಸ್ – ದಿಗ್ಗಜರ ಜಟಾಪಟಿಗೆ ಕೌಂಟ್ ಡೌನ್!
ದಶಕಗಳ ಕ್ರಿಕೆಟ್ ಜರ್ನಿಯಲ್ಲಿ ಟೀಂ ಇಂಡಿಯಾ ಹಲವು ನಾಯಕರನ್ನ ಕಂಡಿದೆ. ಕೆಲವ್ರು ತಂಗಾಳಿಯಂತೆ ತಾಳ್ಮೆಯಿಂದಲೇ ಯಶಸ್ಸಿನ ಉತ್ತುಂಗಕ್ಕೇರಿದ್ರೆ ಇನ್ನೂ ಕೆಲವ್ರು ಮೈದಾನದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದ್ರು. ಅಲ್ಟಿಮೇಟ್ ಆಗಿ ಎಲ್ಲರ ಡೆಸ್ಟಿನೇಷನ್ ಒಂದೇ ಆಗಿರ್ತಿತ್ತು. ಬಟ್ ರೀಚ್ ಆಗೋ ವೇ ಬೇರೆ ಬೇರೆ ಇತ್ತು. ಆದ್ರೀಗ ಹೊಸ ಯುಗಾರಂಭ ಮಾಡಿರೋ ಶುಭ್ಮನ್ ಗಿಲ್ ಯಾವ ದಾರಿ ಆಯ್ಕೆ ಮಾಡಿಕೊಳ್ತಾರೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆ. ಯಾಕಂದ್ರೆ ಗಿಲ್ ಶಾಂತಚಿತ್ತನಾಗಿಯೂ ಉಳೀತಿಲ್ಲ ರೌದ್ರರೂಪಿಯಾಗಿಯೂ ಕಾಣ್ತಿಲ್ಲ. ಅಟ್ ಎ ಟೈಂ ಎರಡು ದೋಣಿ ಮೇಲೆ ಕಾಲಿಟ್ಟವರಂತೆ ಕಾಣ್ತಿದ್ದಾರೆ. ಅವ್ರದ್ದೇ ಕನ್ಫ್ಯೂಷನ್ ಆಟದ ಮೇಲೂ ಎಫೆಕ್ಟ್ ಬೀರ್ತಿದೆ.
ಗಿಲ್ ಕ್ಯಾಪ್ಟನ್ ಆದಾಗ್ಲೇ ತುಂಬಾ ಜನ್ರಿಗೆ ಅನುಮಾನಗಳಿದ್ವು. ಕ್ಯಾಪ್ಟನ್ಸಿಗೆ ಗಿಲ್ ತೀರಾ ಚಿಕ್ಕವ್ರು ಜೊತೆಗೆ ಎಕ್ಸ್ಪೀರಿಯನ್ಸ್ ಕಮ್ಮಿ ಅನ್ನೋದು ಅವ್ರ ವಾದ ಆಗಿತ್ತು. ಬಟ್ ಇನ್ನೂ ಕೆಲವ್ರು ಅವರ ಬ್ಯಾಟಿಂಗ್ ಸ್ಟ್ರೆಂಥ್ ಖಂಡಿತವಾಗಿಯೂ ಭಾರಕ್ಕೆ ಪ್ಲಸ್ ಆಗುತ್ತೆ ಅಂದಿದ್ರು. ಆದ್ರೆ ಗಿಲ್ ಯಾವ ದಾರಿಯನ್ನ ಆಯ್ಕೆ ಮಾಡಿಕೊಳ್ತಾರೆ ಅನ್ನೋದ್ರ ಮೇಲೆ ಅದು ನಿರ್ಧಾರವಾಗುತ್ತೆ. ಯಾಕಂದ್ರೆ ಟೀಂ ಇಂಡಿಯಾದ ಪ್ರಿನ್ಸ್ ಯಾರನ್ನೂ ಕೂಡ ಇಲ್ಲಿ ಅನುಕರಣೆ ಮಾಡ್ಬೇಕಿಲ್ಲ. ತಮ್ಮದೇ ಜಮಾನ ಹುಟ್ಟುಹಾಕೋ ಚಾಲೆಂಜ್ ಇದೆ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರೋ ಟೀಂ ಇಂಡಿಯಾ ಮೂರು ಪಂದ್ಯಗಳನ್ನ ಆಡಿದ್ದು ಎರಡು ಪಂದ್ಯಗಳಲ್ಲಿ ಸೋಲನ್ನ ಕಂಡಿದೆ. ಬಟ್ ಬಹುತೇಕ ಸೆಷನ್ಗಳಲ್ಲಿ ಭಾರತವೇ ಡಾಮಿನೇಟ್ ಮಾಡಿತಾದ್ರೂ ಕೂಡ ಗೆದ್ದಿದ್ದು ಒಂದೇ ಪಂದ್ಯ. ಹೆಡಿಂಗ್ಲೆ ಮತ್ತು ಲಾರ್ಡ್ಸ್ನಲ್ಲಿ ನಡೆದ ಮೊದಲ ಟೆಸ್ಟ್ ಮತ್ತು ಮೂರನೇ ಟೆಸ್ಟ್ನಲ್ಲಿ ಭಾರತವೇ ಗೆಲ್ಲುವ ಫೇವರೆಟ್ ಟೀಂ ಆಗಿ ಕಂಡ್ರೂ ಕೂಡ ಅದನ್ನ ಗೆಲುವಾಗಿ ಕನ್ವರ್ಟ್ ಮಾಡುವಲ್ಲಿ ಫೇಲ್ಯೂರ್ ಆಯ್ತು. ಆಟ ಆಡಿಯೂ ಅಂದ್ರೆ ಅಲ್ಲಿ ಎಕ್ಸ್ಪೆರಿಯನ್ಸ್ ಕೂಡ ಮ್ಯಾಟ್ರಾಗುತ್ತೆ.
25 ವರ್ಷದ ಶುಭ್ ಮನ್ ಗಿಲ್ ನಾಯಕತ್ವ ಹೊಸದೇನಲ್ಲ. ಈ ಸೀಸನ್ನಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇಆಫ್ಗೆ ಮುನ್ನಡೆಸಿದ್ರು. ಅವರ ಐಪಿಎಲ್ ನಾಯಕತ್ವವನ್ನು ನೋಡಿದ್ರೆ ಗಿಲ್ ಯಾವತ್ತೂ ಗ್ರೌಂಡ್ನಲ್ಲಿ ಅಗ್ರೆಸ್ಸಿವ್ ಆಗಿ ಕಾಣಿಸಿಕೊಂಡಿಲ್ಲ. ಮಾತಿನ ಚಕಮಕಿಯಲ್ಲಿ ತೊಡಗಿಲ್ಲ. ಕೂಲ್ ಌಂಡ್ ಕಾಮ್ ಆಗಿಯೇ ತಂಡವನ್ನ ಮುನ್ನಡೆಸಿದ್ರು. ಸೋ ಇದೇ ಅವ್ರ ಅಸಲಿ ವ್ಯಕ್ತಿತ್ವ. ಗಿಲ್ ನೋಡಿದಾಗ ಅದು ಸೂಟ್ ಆಗುತ್ತೆ ಕೂಡ. ಆದ್ರೆ ಗಿಲ್ ಟೀಂ ಇಂಡಿಯಾದಲ್ಲಿ ಕೊಹ್ಲಿ ಗುಣಗಳನ್ನ ಕಾಪಿ ಮಾಡೋಕೆ ಯತ್ನಿಸಿದಂತೆ ಕಾಣ್ತಿದೆ. ಲಾರ್ಡ್ಸ್ನಲ್ಲಿ ಕಿಂಗ್ ಕೊಹ್ಲಿಯಂತೆ ಆಕ್ರಮಣಶೀಲರಾಗಿ ಕಂಡ್ರೂ ಕೂಡ ಕೊನೆಗೆ ರೋಹಿತ್ರಂತೆ ನಡ್ಕೊಂಡ್ರು. ಪಂದ್ಯದ ಆರಂಭದಲ್ಲಿ ನಡೆದ ಚೆಂಡು ಬದಲಾವಣೆ ವಿವಾದದ ಜೊತೆಗೆ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ತಮ್ಮ ಅಗ್ರೆಶನ್ ಇಂಟೆಂಟ್ನ ತಂಡದ ಉಳಿದವ್ರ ಮೇಲೂ ರಿಫ್ಲೆಕ್ಟ್ ಮಾಡಿದಂತಿತ್ತು. ಬಟ್ ಅದು ವರ್ಕೌಟ್ ಆಗಲಿಲ್ಲ.
ಇನ್ನು ಸರಣಿ ಆರಂಭಕ್ಕೂ ಮುನ್ನ ರೋಹಿತ್ ಮತ್ತು ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಗಿಲ್ ಇಂಟ್ರೆಸ್ಟಿಂಗ್ ವಿಚಾರಗಳನ್ನ ಹೇಳಿದ್ರು. ಇಬ್ಬರೂ ಲೆಜೆಂಡರಿ ಆಟಗಾರರು ತಮ್ಮ ಶೈಲಿಯಲ್ಲಿ ಭಿನ್ನವಾಗಿದ್ದರು. ಬಟ್ ಒಂದೇ ಟಾರ್ಗೆಟ್ ಕಡೆ ಇದ್ದದ್ದು ಇತರೆ ಆಟಗಾರರಿಗೆ ಸ್ಪೂರ್ತಿದಾಯಕವಾಗಿತ್ತು. ವಿರಾಟ್ ಕೊಹ್ಲಿ ಯಾವಾಗಲೂ ತುಂಬಾ ಅಗ್ರೆಸ್ಸಿವ್ ಆಗಿ ಹಂಗರ್ ಮತ್ತು ಜೋಶ್ನಿಂದಲೇ ಆಡ್ತಿದ್ರು. ರೋಹಿತ್ ಕೂಡ ಆಕ್ರಮಣಕಾರಿಯಾಗಿದ್ದರೂ ಅವರ ಬಿಹೇವಿಯರ್ನಲ್ಲಿ ಚೇಂಜಸ್ ಇರ್ತಾ ಇತ್ತು. ಸೋ ಇಬ್ಬರಿಂದಲೂ ಕಲಿಯಬೇಕಾದ್ದು ಸಾಕಷ್ಟಿದೆ. ಹಾಗಂತ ಇಲ್ಲಿ ಗಿಲ್ ರೋಹಿತ್ರನ್ನೂ ಅನುಸರಿಸಬೇಕಿಲ್ಲ.. ಕೊಹ್ಲಿಯನ್ನೂ ಫಾಲೋ ಮಾಡ್ಬೇಕಿಲ್ಲ. ಧೋನಿಯನ್ನೂ ಕಾಪಿ ಮಾಡ್ಬೇಕಿಲ್ಲ. ತನ್ನದೇ ಆದ ಹೊಸ ಇಮೇಜ್ ಬಿಲ್ಡ್ ಮಾಡ್ಬೇಕಿದೆ. ಹೊಸ ತಲೆಮಾರಿನ ರೋಲ್ ಮಾಡೆಲ್ ಆಗ್ಬೇಕಿದೆ.

ನೋಡಿರಿ

