ಕೂರ್ಗ್‌ ಸೊಸೆ ಆಂಕರ್‌ ಅನುಶ್ರೀ.. ಅನುಶ್ರೀ ಮೆಚ್ಚಿದ ರೋಷನ್‌ ಯಾರು? – ಲವ್‌ Or ಅರೆಂಜ್‌ ಮ್ಯಾರೇಜ್?‌

ಕೂರ್ಗ್‌ ಸೊಸೆ ಆಂಕರ್‌ ಅನುಶ್ರೀ.. ಅನುಶ್ರೀ ಮೆಚ್ಚಿದ ರೋಷನ್‌ ಯಾರು? – ಲವ್‌ Or ಅರೆಂಜ್‌ ಮ್ಯಾರೇಜ್?‌

ಅನುಶ್ರೀ.. ಕನ್ನಡ ಸ್ಟಾರ್‌ ನಿರೂಪಕಿ.. ತಮ್ಮ ಮಾತಿನ ಮೂಲಕವೇ ಕರುನಾಡಿನ ಜನರ ಮನಗೆದ್ದಿದ್ದಾರೆ..  ಮಾತಿನ ಮಲ್ಲಿ ಮದುವೆ ಯಾವಾಗ? ಇದೊಂದು ಪ್ರಶ್ನೆ ಕನ್ನಡಿಗರನ್ನ ಕಾಡ್ತಾನೇ ಇತ್ತು. ಅನುಶ್ರಿ ಹೋದಲ್ಲಿ, ಬಂದಲ್ಲೆಲ್ಲಾ ಮದ್ವೆ ಊಟ ಯಾವಾಗ ಹಾಕಿಸ್ತೀರಾ ಅಂತಾ ಕೇಳಿದವರೇ ಹೆಚ್ಚು. ಇದೀಗ ಕಡೆಗೂ ಆಂಕರ್‌ ಅನುಶ್ರೀ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಕುಡ್ಲದ ಹುಡುಗಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.

ಇದನ್ನೂ ಓದಿ: ಹಾವಿನ ದ್ವೇಷ 12 ವರುಷ.. – ಸಂಗಾತಿ ಕೊಂದವರ ಮೇಲೆ ಪ್ರತಿಕಾರ ತೀರಿಸಿಕೊಂಡ ಹಾವು!

ಕನ್ನಡಿಗರ ಮೋಸ್ಟ್‌ ಫೇವರೆಟ್‌ ಆಂಕರ್‌ ಅಂದ್ರೆ ಅದು ಅನುಶ್ರೀ.. ವೀಕೆಂಡ್‌ನಲ್ಲಿ ಅನುಶ್ರೀ ವೀಕ್ಷಕರ ಮುಂದೆ ಹಾಜರ್‌ ಆಗ್ತಾರೆ.. ಜೀ ಕನ್ನಡದ ಬಹುತೇಕ ರಿಯಾಲಿಟಿ ಶೋಗೆ ನಿರೂಪಣೆ ಮಾಡಿರೋ ಈ ನಗುಮೊಗದ ಚೆಲುವೆ ಈಗ ದೊಡ್ಡ ಸೆಲೆಬ್ರಿಟಿಯಾಗಿದ್ದಾರೆ. ಚಟಪಟ ಮಾತಿನ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಹೃದಯ ಕದ್ದಿದ್ದಾರೆ. ಅನುಶ್ರೀ ಯಾವ ಸಿನಿಮಾ ನಟಿಯರಿಗೂ ಕಮ್ಮಿಯಿಲ್ಲ ಅನ್ನುವಷ್ಟು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ.. ಆದ್ರೆ ಅನುಶ್ರೀಗೆ ಇದೊಂದು ಪ್ರಶ್ನೆ ಎದುರಾಗ್ತಾನೇ ಇತ್ತು.. ಫ್ಯಾನ್ಸ್‌ ಮಾತ್ರವಲ್ಲದೇ, ಸೆಲೆಬ್ರಿಟಿಗಳು ಕೂಡ ಮದ್ವೆ ಯಾವಾಗ ಅಂತಾ ಕೇಳ್ತಾನೆ ಇದ್ರು.. ಕೆಲ ತಿಂಗಳುಗಳಿಂದ ಈ ಪ್ರಶ್ನೆಗೆ 2025ಕ್ಕೆ ಮದುವೆ ಅಂತಾ ನಗುತ್ತಾ ಅನುಶ್ರೀ ಹೇಳಿದ್ದೂ ಇದೆ. ಇದೀಗ ಕಡೆಗೂ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ದಿನ ಕೂಡ ನಿಗದಿಯಾಗಿದೆ.

ಅನುಶ್ರೀ ವಯಸ್ಸು 37.. ಹೀಗಾಗಿ ಅನುಶ್ರೀ ಮದುವೆ ಬಗ್ಗೆ ಸಾಕಷ್ಟು ಗಾಸಿಪ್‌ ಹರಿದಾಡಿತ್ತು.. ಕೆಲ ಫೇಮಸ್‌ ನಟರೊಂದಿಗೆ ಹೆಸ್ರು ತಳುಕುಹಾಕಿಕೊಂಡಿತ್ತು.  ಕೆಲವರಂತೂ ಅನುಶ್ರೀಯ ಫೋಟೋವನ್ನ ಬೇರೆ ನಟರ ಫೋಟೋ ಜೊತೆ ಎಡಿಟ್‌ ಮಾಡಿ ವೈರಲ್‌ ಮಾಡಿದ್ದೂ ಇದೆ. ಹೀಗಾಗೇ ಅನುಶ್ರೀ ಆದಷ್ಟು ಬೇಗ ಸಿಹಿಸುದ್ದಿ ಕೊಡ್ತೀನಿ ಅಂತ ಹೇಳಿದ್ರು. ಆದಾಗ ಬಳಿಕ ಅನುಶ್ರೀ ಮದುವೆ ಬಗ್ಗೆ ಗುಸುಗುಸು ಕೇಳಿಬರುತ್ತಿತ್ತು. ಇದೀಗ ಆ ಸುದ್ದಿ ನಿಜವಾಗಿದೆ. ಆಗಸ್ಟ್ 28ರಂದು ಅನುಶ್ರೀ ಹಸೆಮಣೆ ಏರಲಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಖಚಿತಪಡಿಸಿವೆ. ಇನ್ನು ಅನುಶ್ರೀ ಕೈಹಿಡಿಯೋ ಹುಡುಗ ಯಾರು ಅನ್ನೋ ಕುತೂಹಲ ಇದ್ದೇ ಇದೆ. ಇದೀಗ ಅನುಶ್ರೀ ಭಾವಿ ಪತಿ ಯಾರು ಅನ್ನೋದು ರಿವೀಲ್‌ ಆಗಿದೆ. ಅನುಶ್ರೀ ಕೊಡಗಿನ ಮೂಲದ ಉದ್ಯಮಿ ರೋಷನ್‌ ಎಂಬುವವರನ್ನ ಮದುವೆಯಾಗ್ತಿದ್ದಾರೆ ಎಂದು ಹೇಳಲಾಗ್ತಿದೆ.

ಇನ್ನು ಅನುಶ್ರೀ ಅವರದ್ದು ಲವ್‌ ಮ್ಯಾರೆಜ್‌ ಅಥವಾ ಅರೇಂಜ್‌ ಮ್ಯಾರೆಜಾ ಅನ್ನೋದು ಅವ್ರ ಫ್ಯಾನ್ಸ್‌ ಗೆ ಕುತೂಹಲ ಇದೆ. ಇದು ಪಕ್ಕಾ ಅರೇಂಜ್ ಮ್ಯಾರೆಜ್‌.. ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗ್ತಿದ್ದಾರೆ ಅನುಶ್ರೀ. ಆಗಸ್ಟ್  28ರಂದು ಬೆಂಗಳೂರಿನಲ್ಲಿ ಮದುವೆ ಸರಳವಾಗಿ ನಡೆಯಲಿದೆ. ಅದ್ದೂರಿಯಾಗಿ ರಿಸೆಪ್ಷನ್‌ ಆಯೋಜಿಸಲು ಎರಡೂ ಕುಟುಂಬಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ ಎನ್ನಲಾಗ್ತಿದೆ.. ಈಗಾಗಲೇ ಮದುವೆಯ ತಯಾರಿಗಳು ಶುರುವಾಗಿದ್ದು, ಅನುಶ್ರೀ ಮತ್ತು ರೋಷನ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ನಾನು ಈ ವರ್ಷವೇ ಮದುವೆ ಆಗ್ತೀನಿ ಅಂತ ಅನುಶ್ರೀ ಸರಿಗಮಪ, ಮಹಾನಟಿ  ಶೋನಲ್ಲಿ ಹೇಳಿದ್ದರು. ಅವರ ಮಾತೀಗ ನಿಜವಾಗಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತ ಹೇಳಿಕೆ ನೀಡಬೇಕಿದೆ.

ಅಂದಹಾಗೆ ಅನುಶ್ರೀ ಮಂಗಳೂರು ಮೂಲದವರು. ಸುರತ್ಕಲ್ ನಲ್ಲಿ ಹುಟ್ಟಿ ಬೆಳದ ಈಕೆ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಬಡ ಕುಟುಂಬದಲ್ಲಿ ಬೆಳೆದ ಈಕೆ ಅಮ್ಮನಿಗೆ ಸಹಾಯ ಆಗ್ಲಿ ಅಂತ ಓದುವಾಗ ಪಾರ್ಟ್‌ಟೈಮ್‌ ಕೆಲಸ ಮಾಡಿದ್ದೂ ಇದೆ. ಅದಾದ ಬಳಿಕ ಮಹಾನಗರಿ ಬೆಂಗಳೂರಿಗೆ ಕಾಲಿಟ್ರು. ಸಿಲಿಕಾನ್‌ ಸಿಟಿಗೆ ಬಂದ ಅನುಶ್ರೀ ಆಯ್ಕೆ ಮಾಡಿಕೊಂಡಿದ್ದು ನಿರೂಪಣೆಯನ್ನ.. ವೃತ್ತಿಬದುಕಿಗೆ ಕಾಲಿಟ್ಟ ಬಳಿಕ ಅನುಶ್ರೀ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ. ಇದೀಗ ಬಡತನದಲ್ಲಿ ಬೆಳದ ಈ ಕುಡ್ಲದ ಹುಡುಗಿ ಫೇಮಸ್‌ ಆಂಕರ್‌ ಆಗಿದ್ದಾರೆ. ಬಹಳಷ್ಟು ರಿಯಾಲಿಟಿ ಶೋಗಳ ನಿರೂಪಣೆ ಮಾಡಿರುವ ಅನುಶ್ರೀ ಸಾವಿರಾರು ಇವೆಂಟ್‌ಗಳ ನಿರೂಪಣೆ ಮಾಡಿದ್ದಾರೆ. ಬಿಗ್‌ ಬಾಸ್‌ ಕನ್ನಡ, ಡ್ಯಾನ್ಸ್‌ ಶೋನಲ್ಲಿಯೂ ಅನುಶ್ರೀ ಅವರು ಭಾಗವಹಿಸಿದ್ದರು. ಜೊತೆಗೆ, ‘ಬೆಂಕಿಪಟ್ಣ’ ಸೇರಿದಂತೆ, ಕೆಲವು ಸಿನಿಮಾದಲ್ಲಿಯೂ ನಟಿಸಿದ್ದಾರೆ. ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಇದೀಗ ಅನುಶ್ರೀ ಮದುವೆ ಸುದ್ದಿ ಅವ್ರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Shwetha M