ಕನ್ನಡ ಅನುವಾದದಲ್ಲಿ ಫೇಸ್‌ಬುಕ್‌ ದೊಡ್ಡ ಎಡವಟ್ಟು – ಸಿಎಂ ಸಿದ್ಧರಾಮಯ್ಯಗೆ ಕ್ಷಮೆ ಕೇಳಿದ ಮೆಟಾ!

ಕನ್ನಡ ಅನುವಾದದಲ್ಲಿ ಫೇಸ್‌ಬುಕ್‌ ದೊಡ್ಡ ಎಡವಟ್ಟು – ಸಿಎಂ ಸಿದ್ಧರಾಮಯ್ಯಗೆ ಕ್ಷಮೆ ಕೇಳಿದ ಮೆಟಾ!

ಭಾಷೆ ಅನುವಾದ ಮಾಡುವಾಗ ಸ್ವಲ್ಪ ಯಾಮಾರಿದ್ರೂ ಎಂತಹ ಪ್ರಮಾದ ಉಂಟಾಗುತ್ತೆ ಅನ್ನೋದಿಕ್ಕೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಉದಾಹರಣೆಯಾಗಿದೆ. ಸಿಎಂ ಸಿದ್ಧರಾಮಯ್ಯ ಪೋಸ್ಟ್‌ ವೊಂದು Automatic translation ಆಗಿದೆ. ಸಿಎಂ ಸಿದ್ಧರಾಮಯ್ಯ ಇನ್ನಿಲ್ಲ ಎಂಬಂತೆ ಅನುವಾದ ಮಾಡಿತ್ತು. ಇದೀಗ ತನ್ನ ತಪ್ಪಿಗೆ ದೈತ್ಯ ಕಂಪನಿ ಮೆಟಾ ಕ್ಷಮೆ ಕೇಳಿದೆ.

ಇದನ್ನೂ ಓದಿ: ಉಗ್ರರಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕ್‌ ಬಣ್ಣ ಬಯಲು – TRF ಭಯೋತ್ಪಾದಕ ಸಂಘಟನೆಯೆಂದು ಅಮೆರಿಕ ಘೋಷಣೆ

ಅಷ್ಟಕ್ಕೂ ಆಗಿದ್ದೇನು?

ಇತ್ತೀಚೆಗೆ ನಿಧನರಾದ ಕರ್ನಾಟಕದ ಹಿರಿಯ ನಟಿ ಬಹುಭಾಷಾ ತಾರೆ ಬಿ.ಸರೋಜಾದೇವಿ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪನಮನ ಸಲ್ಲಿಸಿ ಅಂತಿಮ ದರ್ಶನ ಪಡೆದಿದ್ರು. ನಟಿಗೆ ಭಾವಪೂರ್ಣ ಶ್ರದ್ದಾಂಜಲಿ ಎಂದು ಸಿಎಂ ಪೋಸ್ಟ್‌ ಮಾಡಿದ್ರು. ಆದ್ರೆ  ಮೆಟಾ ತಪ್ಪಾಗಿ ಅನುವಾದ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದರು. ಮೆಟಾ ವೇದಿಕೆಗಳಲ್ಲಿ ಕನ್ನಡದ ವಿಷಯಗಳ ಸ್ವಯಂ ಅನುವಾದದ ವೇಳೆ ಭಾರೀ ಲೋಪ ಹಾಗೂ ನೈಜ ಅರ್ಥವೇ ನಾಶವಾಗುತ್ತಿದೆ ಎಂದು ಹೇಳಿದ್ದರು. ಕನ್ನಡ ಅನುದಾದದಲ್ಲಿ ಆಗುತ್ತಿರುವ ಲೋಪ ತಕ್ಷಣವೇ ಸರಿಪಡಿಸುವಂತೆ ಒತ್ತಾಯಿಸಿ ನನ್ನ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಮೆಟಾಗೆ ಔಪಚಾರಿಕವಾಗಿ ಪತ್ರ ಬರೆದಿದ್ದಾರೆ ಎಂದು ತಿಳಿಸಿದ್ದಾರೆ. ಈ ಬೆನ್ನಲ್ಲೇ, ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ ಈ ಕುರಿತು ಕ್ಷಮೆಯಾಚಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆ, ಅನುವಾದದಲ್ಲಿ ಕೆಲಕಾಲ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂಥ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರಿಯುತವಾಗಿ ವರ್ತಿಸಬೇಕು. ನಾಗರಿಕರು ಕೂಡ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಆಗಾಗ ಬರುವ ಇಂತಹ ತಪ್ಪಾದ ಅನುವಾದಗಳ ಬಗ್ಗೆ ಎಚ್ಚರವಹಿಸಬೇಕು. ತಂತ್ರಜ್ಞಾನ ದೈತ್ಯ ಸಂಸ್ಥೆಗಳಿಂದ ಆಗುವ ಇಂತಹ ನಿರ್ಲಕ್ಷ್ಯ ಸಾರ್ವಜನಿಕ ತಿಳಿವಳಿಕೆ ಮತ್ತು ನಂಬಿಕೆಗೆ ಹಾನಿಯುಂಟು ಮಾಡುತ್ತದೆ ಎಂದು ಹೇಳಿ ಅನುವಾದದಲ್ಲಿ ಕೆಲಕಾಲ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ. ಇಂಥ ಘಟನೆ ನಡೆದಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ ಕ್ಷಮೆ ಕೇಳಿದೆ.

Shwetha M