‌ಟೀ ಜೊತೆ ಈ ತಿನಿಸು ಸೇವಿಸ್ತೀರಾ? – ಎಚ್ಚರ.. ತೂಕ ಹೆಚ್ಚಳದ ಜೊತೆ ಈ ಎಲ್ಲಾ ಸಮಸ್ಯೆ ಬರುತ್ತೆ!

‌ಟೀ ಜೊತೆ ಈ ತಿನಿಸು ಸೇವಿಸ್ತೀರಾ? – ಎಚ್ಚರ.. ತೂಕ ಹೆಚ್ಚಳದ ಜೊತೆ ಈ ಎಲ್ಲಾ ಸಮಸ್ಯೆ ಬರುತ್ತೆ!

ಬೆಳಗ್ಗೆ ಎದ್ದ ಕೂಡ್ಲೆ ಒಂದು ಕಪ್‌ ಚಹಾ ಕುಡಿದ್ರೆ ಮಾತ್ರ ದಿನ ಚೆನ್ನಾಗಿರುತ್ತೆ ಅನ್ನೋದು ಅನೇಕರ ಭಾವನೆ. ಆದ್ರೆ ಚಹಾ ಕುಡಿಯುವಾಗ ಕೆಲವರು ಸ್ನಾಕ್ಸ್‌ ಕೂಡ ತಿನ್ನೋ ಅಭ್ಯಾಸ ಮಾಡಿಕೊಂಡಿರ್ತಾರೆ. ಚಹಾದೊಂದಿಗೆ ಈ ತಿಂಡಿಗಳನ್ನ ಸೇವಿಸ್ರೆ ಅನಾರೋಗ್ಯಕ್ಕೆ ತುತ್ತಾಗುವುದಂತೂ ಪಕ್ಕಾ!

ಇದನ್ನೂ ಓದಿ;ಏಕದಿನ ಸರಣಿ ಬೇಡವೆಂದು ಪಾಕಿಸ್ತಾನ ತಗಾದೆ – ಪಿಸಿಬಿ ಕಿರಿಕ್ ಗೆ ತಲೆಬಾಗುತ್ತಾ ವಿಂಡೀಸ್ ಬೋರ್ಡ್?

ಅನೇಕರು ಟೀ ಜೊತೆಗೆ ಕೆಲವು ತಿಂಡಿಗಳನ್ನ ತಿನ್ನೋ ಅಭ್ಯಾಸ ಇಟ್ಕೊಂಡಿರ್ತಾರೆ. ಆದರೆ, ಚಹಾದ ಜೊತೆ ಯಾವ ಆಹಾರಗಳನ್ನು ಸೇವಿಸಬಾರದು, ಯಾವುದನ್ನು ಸೇವಿಸಬಹುದು ಎಂಬುದರ ಬಗ್ಗೆ ಅನೇಕರಿಗೆ ಗೊತ್ತಿಲ್ಲ. ಟೀ ಜೊತೆಗೆ ಕೆಲವು ತಿನಿಸುಗಳನ್ನ ಸೇವಿಸುವುದು ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಹಾಗಾದ್ರೆ ಯಾವ ಯಾವ ತಿನಿಸುಗಳನ್ನ ಸೇವಿಸಬಾರದು ಅನ್ನೋ ವಿವರ ಇಲ್ಲಿದೆ.

ಚಹಾದೊಂದಿಗೆ ತಿನ್ನಬಾರದ ಆಹಾರಗಳು

ಟೋಸ್ಟ್

ಟೋಸ್ಟ್ ಚಹಾದೊಂದಿಗೆ ತಿನ್ನಲು ರುಚಿಕರವಾಗಿದ್ದರೂ, ಇದರಲ್ಲಿ ಫೈಬರ್ ಮತ್ತು ಪ್ರೋಟೀನ್ ಕೊರತೆಯಿದೆ. ಇದರಲ್ಲಿರುವ ಹೆಚ್ಚಿನ ಸಕ್ಕರೆಯಿಂದ ರಕ್ತದ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ. ಇದ್ರಿಂದ ಶಕ್ತಿಯ ಕೊರತೆ, ದಣಿವು ಮತ್ತು ರಕ್ತದೊತ್ತಡದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ಚಹಾದೊಂದಿಗೆ ಟೋಸ್ಟ್ ಸೇವನೆಯನ್ನು ತಪ್ಪಿಸುವುದು ಒಳ್ಳೆಯದು.

ಬಿಳಿ ಬ್ರೆಡ್‌

ಬಿಳಿ ಬ್ರೆಡ್ ಮೈದಾದಿಂದ ತಯಾರಾದ ಆಹಾರವಾಗಿದ್ದು, ಇದರಲ್ಲಿ ಪೋಷಕಾಂಶಗಳ ಕೊರತೆಯಿದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ತಕ್ಷಣವೇ ಏರಿಸುವ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಚಹಾದೊಂದಿಗೆ ಬ್ರೆಡ್ ಸೇವಿಸುವುದರಿಂದ ಇನ್ಸುಲಿನ್ ಮಟ್ಟದಲ್ಲಿ ಏರಿಳಿತವಾಗಿ, ಕೊಬ್ಬು ಸಂಗ್ರಹವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಹೊಟ್ಟೆಯ ಸುತ್ತಲಿನ ಕೊಬ್ಬು. ಆಮ್ಲೀಯತೆಯ ಸಮಸ್ಯೆ ಇರುವವರಿಗೂ ಇದು ಸೂಕ್ತವಲ್ಲ.

ಮಿಕ್ಚರ್ ಅಥವಾ ನಮ್ಕಿನ್

ಚಹಾದ ಜೊತೆ ಮಿಕ್ಚರ್, ಚಿವ್ಡಾ ಅಥವಾ ಖಾರದ ತಿಂಡಿಗಳು ತಿನ್ನುವುದು ಬಹುತೇಕರಿಗೆ ಇಷ್ಟ. ಈ ತಿಂಡಿಗಳು ಉಪ್ಪು, ಮಸಾಲೆ ಮತ್ತು ಎಣ್ಣೆಯಿಂದ ತಯಾರಾದವು. ಇವು ರುಚಿಕರವಾದರೂ, ಚಹಾದೊಂದಿಗೆ ಸೇವಿಸಿದಾಗ ಹೊಟ್ಟೆ ಉಬ್ಬುವಿಕೆ, ಅನಿಲ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಈಗಾಗಲೇ ಜೀರ್ಣಕಾರಕ ಸಮಸ್ಯೆ ಇರುವವರಿಗೆ ಇಂತಹ ಆಹಾರಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು.

ಸಮೋಸಾ ಮತ್ತು ಪಕೋಡಾ

ಸಮೋಸಾ, ಪಕೋಡಾದಂತಹ ಡೀಪ್-ಫ್ರೈಡ್ ತಿಂಡಿಗಳು ಚಹಾದೊಂದಿಗೆ ರುಚಿಕರವೆನಿಸಿದರೂ, ಇವು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಎಣ್ಣೆಯಲ್ಲಿ ಕರಿದ ಈ ಆಹಾರಗಳು ಆಮ್ಲೀಯತೆಯನ್ನು ಹೆಚ್ಚಿಸುವುದರ ಜೊತೆಗೆ ಯಕೃತ್‌ಗೆ (ಲಿವರ್) ಹಾನಿಯನ್ನುಂಟುಮಾಡಬಹುದು. ಇವುಗಳಲ್ಲಿರುವ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರಿ, ಅಸ್ವಸ್ಥತೆಗೆ ಕಾರಣವಾಗಬಹುದು.

 ಬಿಸ್ಕೆಟ್‌

ಚಹಾದೊಂದಿಗೆ ಬಿಸ್ಕೆಟ್ ತಿನ್ನುವುದು ಸಾಮಾನ್ಯ. ಆದರೆ, ಹೆಚ್ಚಿನ ಬಿಸ್ಕತ್ತುಗಳು ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಟ್ರಾನ್ಸ್ ಫ್ಯಾಟ್‌ನಿಂದ ತಯಾರಾಗಿರುತ್ತವೆ. ಇವು ದೇಹದಲ್ಲಿ ಕ್ಯಾಲೊರಿಗಳನ್ನು ಸಂಗ್ರಹಿಸಿ, ತೂಕ ಹೆಚ್ಚಾಗಲು ಮತ್ತು ಸೊಂಟದ ಸುತ್ತ ಕೊಬ್ಬು ಜಮೆಯಾಗಲು ಕಾರಣವಾಗುತ್ತವೆ. ಇದರಿಂದ ದೀರ್ಘಕಾಲೀನವಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅಲ್ಲದೇ ತೂಕ ಹೆಚ್ಚಳಕ್ಕೂ ಕಾರಣವಾಗುತ್ತೆ.

Shwetha M