ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿಯನ್ನು ಉಚ್ಚಾಟಿಸುವಂತೆ ಜೆ.ಪಿ.ನಡ್ಡಾ ಆಗ್ರಹ- ಅರುಣಾಚಲ ಪ್ರದೇಶದಲ್ಲಿ ಸೈನಿಕರ ಮೇಲೆ ಚೀನಾ ಹಲ್ಲೆ ನಡೆಸಿದೆ ಎಂಬ ಆರೋಪಕ್ಕೆ ಆಕ್ರೋಶ!

ಕಾಂಗ್ರೆಸ್‌ನಿಂದ ರಾಹುಲ್‌ ಗಾಂಧಿಯನ್ನು ಉಚ್ಚಾಟಿಸುವಂತೆ ಜೆ.ಪಿ.ನಡ್ಡಾ ಆಗ್ರಹ- ಅರುಣಾಚಲ ಪ್ರದೇಶದಲ್ಲಿ ಸೈನಿಕರ ಮೇಲೆ ಚೀನಾ ಹಲ್ಲೆ ನಡೆಸಿದೆ ಎಂಬ ಆರೋಪಕ್ಕೆ ಆಕ್ರೋಶ!

ಭಾರತದ ಮೇಲೆ ಚೀನಾ ಯುದ್ಧಕ್ಕೆ ಸಜ್ಜಾಗುತ್ತಿದೆ. ಆದ್ರೆ, ನಮ್ಮ ಸರ್ಕಾರ ಮಾತ್ರ ನಿದ್ರೆ ಮಾಡುತ್ತಿದೆ ಅಂತಾ ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಾಪ್ರಹಾರ ಮಾಡಿದ್ರು. ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದ್ರೂ, ನಮ್ಮ ಸರ್ಕಾರ ಅದನ್ನ ಒಪ್ಪಿಕೊಳ್ಳುತ್ತಿಲ್ಲ. ಕೌಂಟರ್ ಸ್ಟ್ರಾಟಜಿ ಮಾಡುವ ಬದಲು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳೋದ್ರಲ್ಲಿ ಸರ್ಕಾರ ಬ್ಯುಸಿಯಾಗಿದೆ. ಚೀನಾ ನಮ್ಮ ನೆಲವನ್ನ ಈಗಾಗ್ಲೇ ಕಬಳಿಸಿದೆ. ಚೀನೀ ಸೈನಿಕರು ಅರುಣಾಚಲ ಪ್ರದೇಶದಲ್ಲಿ ನಮ್ಮ ಸೈನಿಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಹುಲ್‌ ಆರೋಪಿಸಿದ್ದರು. ಅಲ್ಲದೆ ನಮ್ಮ ಸರ್ಕಾರ ಎಲ್ಲಾ ವಿಚಾರವನ್ನೂ ಮುಚ್ಚಿಡುತ್ತಿದೆ. ಚೀನಾದ ಬೆದರಿಕೆಯನ್ನ ನಿರ್ಲಕ್ಷ್ಯ ಮಾಡ್ತಿದೆ ಅಂತಾ ರಾಹುಲ್ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ :  ‘ಕೆಜಿಎಫ್- 2’ ಹಾಡಿನ ದುರ್ಬಳಕೆ ಆರೋಪ – ರಾಹುಲ್ ಗಾಂಧಿಗೆ ಹೈಕೋರ್ಟ್ ರಿಲೀಫ್

ಕಾಂಗ್ರೆಸ್ ನಾಯಕನ ಹೇಳಿಕೆ ಬಿಜೆಪಿಯನ್ನ ರೊಚ್ಚಿಗೆಬ್ಬಿಸಿದೆ. ರಾಹುಲ್‌ ಗಾಂಧಿ ಹೇಳಿಕೆ ಚೀನಾ ಮತ್ತು ಪಾಕಿಸ್ತಾನದ ಮಾತಿನಂತಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿರುಗೇಟು ಕೊಟ್ಟಿದ್ದಾರೆ. ಅಲ್ಲದೆ ದೇಶದ ಸೈನಿಕರ ಗೌರವವನ್ನು ಹಾಳು ಮಾಡಿರುವ ರಾಹುಲ್‌ ಗಾಂಧಿಯನ್ನು ಕಾಂಗ್ರೆಸ್‌ ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಹಿಂದೆ ಸರ್ಜಿಕಲ್‌ ಸ್ಟ್ರೈಕ್‌ಗೆ ಸಾಕ್ಷಿ ಕೊಡಿ ಎಂದು ಕೇಳಿದ್ದ ರಾಹುಲ್‌ ಈಗ ಭಾರತೀಯ ಸೈನಿಕರಿಗೆ ಚೀನಿಯರು ಹೊಡೆದಿದ್ದಾರೆ ಎನ್ನುತ್ತಿರುವುದು ಅವರ ಬೌದ್ಧಿಕ ದಾರಿದ್ರ್ಯಕ್ಕೆ ಸಾಕ್ಷಿ ಎಂದಿರುವ ನಡ್ಡಾ, ಪ್ರತಿಪಕ್ಷಗಳು ದೇಶದ ಪರವಾಗಿ ನಿಲ್ಲುವುದಿದ್ದರೆ ರಾಹುಲ್‌ ಗಾಂಧಿಯನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸುವಂತೆ ಆಗ್ರಹಿಸುವಂತೆ ಕರೆ ನೀಡಿದ್ದಾರೆ.

suddiyaana