ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಆರ್ಸಿಬಿಯೇ ನೇರ ಹೊಣೆ! – ಟೀಮ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕ್ಯಾಬಿನೆಟ್ನಲ್ಲಿ ತೀರ್ಮಾನ!

ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಸಾವನ್ನಪ್ಪಿದ್ರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಸಿಬಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಕುಡ್ಲದ ಹುಡುಗಿಗೆ ಕಂಕಣ ಭಾಗ್ಯ! – ಆಂಕರ್ ಅನುಶ್ರೀ ಮದುವೆಗೆ ಡೇಟ್ ಫಿಕ್ಸ್
ಜೂ.3ರಂದು ಪಂಜಾಬ್ ಕಿಂಗ್ಸ್ ವಿರುದ್ದ ನಡುವೆ ಫೈನಲ್ ಪಂದ್ಯದಲ್ಲಿ ಆರ್ಸಿಬಿ ಗೆದ್ದು ಬೀಗಿತ್ತು. ಈ ಮೂಲಕ 18 ವರ್ಷಗಳ ಕನಸನ್ನ ನನಸು ಮಾಡಿಕೊಂಡಿತ್ತು ಆರ್ಸಿಬಿ. ಗೆದ್ದ ಖುಷಿಯಲ್ಲಿ ಆರ್ಸಿಬಿ ಟೀಮ್ ಬೆಂಗಳೂರಿನಲ್ಲಿ ವಿಜಯೋತ್ಸವ ಕಾರ್ಯಕ್ರಮ ಏರ್ಪಡಿಸಿತ್ತು. ಸೋಶಿಯಲ್ ಮೀಡಿಯಾ ಮೂಲಕ ಜೂನ್ 4 ರಂದು, ಆರ್ಸಿಬಿ ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಿತು. ಸಂಜೆ 5:00 ರಿಂದ 6:00 ರವರೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯೋತ್ಸವ ಮೆರವಣಿಗೆ ನಡೆಯಲಿದೆ ಎಂದು ಘೋಷಿಸಿತ್ತು. ಈ ಮೆರವಣಿಗೆ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಲೆಬ್ರೇಷನ್ ನಡೆಯಲಿವೆ ಎಂದು ಹೇಳಿದೆ. ಇದೇ ಪೋಸ್ಟ್ನಲ್ಲಿ shop.royalchallengers.com ನಲ್ಲಿ ಉಚಿತ ಪಾಸ್ಗಳು ಲಭ್ಯವಿದೆ ಎಂದು ಉಲ್ಲೇಖಿಸಿತ್ತು. ಇದ್ರಿಂದಾಗಿ ಲಕ್ಷಾಂತರ ಮಂದಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನೆರೆದಿದ್ರು. ಈ ವೇಳೆ ನೂಕುನುಗ್ಗಲಾಗಿದೆ ಕಾಲ್ತುಳಿತ ಸಂಭವಿಸಿದೆ. ಇದೀಗ ಈ ಘಟನೆ ನೇರ ಕಾರಣ ಆರ್ಸಿಬಿ ಎಂದು ತನಿಖಾ ಆಯೋಗ ಹೇಳಿದೆ.
ಜು.1 ರಂದು ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದ ತನಿಖಾ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಕಾಲ್ತುಳಿತದಲ್ಲಿ 11 ಜನ ಮೃತಪಟ್ಟಿದ್ದರು. ವರದಿಯಲ್ಲಿ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ಗೆ ಸಮಿತಿ ಶಿಫಾರಸು ಮಾಡಲಾಗಿತ್ತು. ಅಲ್ಲದೇ ಹೆಚ್ಚುವರಿ ತನಿಖೆ, ಘಟನೆಗೆ ಪೊಲೀಸರ ವೈಫಲ್ಯ, ಜೊತೆಗೆ, ಕಾರ್ಯಕ್ರಮದ ಆಯೋಜಕರು ಕಾರಣಕರ್ತರು ಅಂತ ವರದಿಯಲ್ಲಿ ಹೇಳಲಾಗಿತ್ತು. ನ್ಯಾ.ಮೈಕಲ್ ಡಿ.ಕುನ್ಹಾ ಆಯೋಗದ ವರದಿಯನ್ನು ಕ್ಯಾಬಿನೆಟ್ ಒಪ್ಪಿದೆ. ವರದಿಯ ಶಿಫಾರಸಿನಂತೆ ಆರ್ಸಿಬಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಒಪ್ಪಿಗೆ ನೀಡಿದೆ. ಕೆಎಸ್ಸಿಎ ವಿರುದ್ಧವೂ ಕ್ರಿಮಿನಲ್ ಕೇಸ್ಗೆ ಒಪ್ಪಿಗೆ ನೀಡಲಾಗಿದೆ.

ನೋಡಿರಿ

